
ಬೀಜಿಂಗ್(ಫೆ.26): ವಿಶ್ವಾದ್ಯಂತ ಬಡತನ ನಿರ್ಮೂಲನೆಗೆ ವಿಶ್ವಸಂಸ್ಥೆಯೇ 2030ರ ಗುರಿ ಹಾಕಿಕೊಂಡಿದೆ. ಆದರೆ ಅದಕ್ಕೂ 10 ವರ್ಷಗಳ ಮುಂಚಿತವಾಗಿಯೇ ನಾವು ನಮ್ಮ ದೇಶದಲ್ಲಿರುವ 77 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದೇವೆ. ತನ್ಮೂಲಕ ಕೇವಲ ನಾಲ್ಕು ದಶಕಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ನಮ್ಮದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಘೋಷಣೆ ಮಾಡಿದ್ದಾರೆ. ತನ್ಮೂಲಕ ಜಾಗತಿಕ ಬಡತನ ನಿರ್ಮೂಲನೆಗೆ ಚೀನಾ ಸರ್ಕಾರ ಶೇ.70ರಷ್ಟುಕೊಡುಗೆ ನೀಡಿದಂತಾಗಿದೆ.
ಚೀನಾದಲ್ಲಿ ವಾರ್ಷಿಕ ತಲಾದಾಯ 620 ಡಾಲರ್(45,100 ರು.)ಗಿಂತ ಕಡಿಮೆ ಇರುವ ಗ್ರಾಮೀಣ ಜನರನ್ನು ಬಡವರು ಎಂದು ಗುರುತಿಸಲಾಗುತ್ತದೆ. ಈ ಪ್ರಕಾರ 2012ರ ಹೊತ್ತಿನಲ್ಲಿ ಚೀನಾದ ಗ್ರಾಮೀಣ ಮತ್ತು ಕುಗ್ರಾಮಗಳಲ್ಲಿ 10 ಕೋಟಿಯಷ್ಟುಬಡ ಜನರಿದ್ದರು. ಈ ಪೈಕಿ 2.5 ಕೋಟಿ ಜನರ ಶಿಥಿಲಾವಸ್ಥೆಗೆ ತಲುಪಿದ್ದ 79 ಲಕ್ಷ ಮನೆಗಳನ್ನು ಪುನರ್ ನಿರ್ಮಾಣ ಮಾಡಲಾಯಿತು. 96 ಲಕ್ಷ ಜನರನ್ನು ಉತ್ತಮ ಸ್ಥಳಗಳತ್ತ ಸ್ಥಳಾಂತರಿಸಲಾಗಿದೆ.
ಅಲ್ಲದೆ ಬಡತನಕ್ಕೆ ಸಿಲುಕಿದ್ದ 28 ಅಲ್ಪಸಂಖ್ಯಾತ ವರ್ಗಗಳನ್ನು ಸಹ ಮೇಲೆತ್ತಲಾಗಿದೆಯಂತೆ. ತನ್ಮೂಲಕ ತಾವು 2012ರಲ್ಲಿ ಅಧಿಕಾರದ ಗದ್ದುಗೆಗೇರಿದ ಬಳಿಕ ಆಡಳಿತದಲ್ಲಿ ಹಾಸುಹೊಕ್ಕಾಗಿದ್ದ ಭ್ರಷ್ಟಾಚಾರಕ್ಕೆ ಕಡಿವಾಣದ ಜೊತೆಗೆ ಬಡವರನ್ನು ಮೇಲೆತ್ತುವ ಕಾರ್ಯವನ್ನು ತ್ವರಿತಗೊಳಿಸಲಾಯಿತು. ಇದರಿಂದಾಗಿ ಈ ಐತಿಹಾಸಿಕ ಸಾಧನೆ ಮಾಡಿದ್ದೇವೆ ಎಂದಿದ್ದಾರೆ ಕ್ಸಿ ಜಿನ್ಪಿಂಗ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ