
ನ್ಯೂಯಾರ್ಕ್(ಮೇ.18): ಹ್ಯಾನೋವರ್ ಎಲಿಮಂಟ್ರಿ ಸ್ಕೂಲ್‌ನಲ್ಲಿ 4ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಭಾರತದ ಮೂಲದ ಶ್ರಾವ್ಯ ಅಣ್ಣಪ್ಪ ರೆಡ್ಡಿ ಕಾರ್ಯಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸನ್ಮಾನ ಮಾಡಿ ಗೌರವಿಸಿದ್ದಾರೆ. ಅಮೆರಿಕದ ಕೊರೋನಾ ವಾರಿಯರ್ಸ್‌ಗೆ ಸನ್ಮಾನ ಸಮಾರಂಭದಲ್ಲೇ 10 ವರ್ಷದ ಶ್ರಾವ್ಯಗೂ ಸನ್ಮಾನ ಮಾಡಲಾಗಿದೆ.
ಅಮೆರಿಕಾ ಸಂಶೋಧಿಸುತ್ತಿರುವ ಕೋವಿಡ್ 19 ಲಸಿಕೆಯನ್ನು ಹ್ಯಾಕ್ ಮಾಡಿತಾ ಚೀನಾ?..
ಸ್ಕೌಟ್‌ನಲ್ಲಿ ಸಕ್ರಿಯವಾಗಿರುವ ಶ್ರಾವ್ಯ ತನ್ನ ಸಹಪಾಠಿಗಳೊಂದಿಗೆ ಸೇರಿ, ಆಸ್ಪತ್ರೆ ನರ್ಸ್‌ಗಳಿಗೆ, ವೈದ್ಯರಿಗೆ ಬಿಸ್ಕಟ್ ನೀಡಿದ್ದಳು. ಇಷ್ಟೇ ಅಲ್ಲ ಅವರಿಗೆ ಗ್ರೀಟಿಂಗ್ ಕಾರ್ಡ್ ನೀಡುವ ಮೂಲಕ ಅವರನ್ನು ಹುರಿದುಂಬಿಸಿದ್ದಳು. ಪ್ರತಿ ದಿನ ಶ್ರಾವ್ಯ ಆಸ್ಪತ್ರೆ ಸಿಬ್ಬಂಧಿಗಳನ್ನು ತನ್ನ ಕೈಲಾದಷ್ಟು ಹುರಿದುಂಬಿಸಿದ್ದಾಳೆ. ಗ್ರೀಟಿಂಗ್ ಕಾರ್ಡ್ ಮೂಲಕ ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯವನ್ನು ನಿರಂತರವಾಗಿ ಮಾಡಿದ್ದಳು.
ಅಮೆರಿಕದಿಂದ 3 ವಾರದಲ್ಲಿ ಭಾರತಕ್ಕೆ 200 ವೆಂಟಿಲೇಟರ್?
ಶ್ರಾವ್ಯ ಕಾರ್ಯವನ್ನು ಮೆಚ್ಚಿದ ಅಮೆರಿಕ ಅಧ್ಯಕ್ಷ ಟ್ರಂಪ್ ಆಕೆಯನ್ನು ಕೊರೋನಾ ವಾರಿಯರ್ಸ್ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲೇ ಸನ್ಮಾನಿಸಿದ್ದಾರೆ. ಅಮೆರಿಕದಲ್ಲಿ ವೈದ್ಯರು, ನರ್ಸ್, ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳನ್ನು ದೇವರಂತೆ ಕಾಣುತ್ತಿದ್ದಾರೆ. ಕಾರಣ ಅತೀ ಹೆಚ್ಚು ಕೊರೋನಾ ಪ್ರಕರಣಗಳುು ಅಮೆರಿಕದಲ್ಲಿ ದಾಖಲಾಗಿದೆ. ಇಷ್ಟೇ ಅಲ್ಲ ಗರಿಷ್ಠ ಸಾವು ಕೂಡ ಸಂಭವಿಸಿದೆ. ಇದರ ನಡುವೆ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‌ಗೆ ಟ್ರಂಪ್ ಸನ್ಮಾನ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಹುರಿದುಂಬಿಸಿದ ಶ್ರಾವ್ಯಗೂ ಸನ್ಮಾನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ