ಕೊರೋನಾ ಬಂದಲ್ಲಿ ಖುಲ್ಲಂ ಖುಲ್ಲಾ, ಪುಕ್ಕಟೆ ಸಿಕ್ತು ಪೋರ್ನ್ ಬೆಲ್ಲ, ನೀಲಿ ಪ್ರಿಯರು ಜಿಂಗಾಲಾಲಾ!

By Suvarna News  |  First Published Feb 28, 2020, 10:47 PM IST

ಕೊರೋನಾ ವೈರಸ್ ನಿಂದ ಮುಕ್ತಿ/ ಹೊಸ ಐಡಿಯಾ ಬಿಟ್ಟ ಪೋರ್ನ್ ಸೈಟ್ ಗಳು/ ಕೊರೋನಾ ಪೀಡಿತ ಪ್ರದೇಶದಲ್ಲಿ ಪ್ರೀಮಿಯಂ ಸರ್ವೀಸ್/ ಚೀನಾ, ಇರಾನ್, ದಕ್ಷಿಣ ಕೋರಿಯಾಕ್ಕೂ ಲಾಭ!


ಬೀಜಿಂಗ್[ಫೆ. 28]  ಕೊರೋನಾ ಪ್ರಪಂಚದಾದ್ಯಂತ ಸುಮಾರು 82 ಸಾವಿರ ಜನರನ್ನು ಕಾಡಿ 2788 ಬಲಿ ಪಡೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಮುಂದಾಗಿ ಪರಿಸ್ಥಿತಿ ನಿಯಂತ್ರಣ ಮಾಡುತ್ತಿದೆ.

ಚೀನಾದಲ್ಲೆಂತೂ ತನ್ನ ರೌದ್ರಾವತಾರ ತೋರಿಸಿದ್ದು ಜನರು ಮನೆಯಿಂದ ಹೊರಬರಲು ಭಯಪಡುವಂತಹ ಸ್ಥಿತಿ ನಿರ್ಮಾಣ ಮಾಡಿದೆ. ಆದರೆ ಇದೆಲ್ಲದಕ್ಕೂ ಮೀರಿ ನಿಮಗೊಂದು ಸುದ್ದಿ ಹೇಳುತ್ತೇವೆ. ಹೆಸರುವಾಸಿ ಪೋರ್ನ್ ಸೈಟ್ ಗಳು ಕೊರೋನಾ ತಡೆಗೆ ತಮ್ಮ ಕೈಲಾದ ಕೊಡುಗೆ ನೀಡುತ್ತಿವೆ!

Latest Videos

undefined

ಅಲ್ಲಿ ಓಪನ್ ಆಗದಿದ್ದರೇನು..ಇಲ್ಲಿ ಆಗ್ತಿದೆ!

ಅರೇ ಇದೇನು ಒಂದಕ್ಕೊಂದು ಸಂಬಂಧವೇ ಇಲ್ಲಾ ಎಂದು ಭಾವಿಸಬೇಡಿ.  ಕೊರೋನಾ ಪೀಡಿತ ಪ್ರದೇಶಗಳಿಗೆ ಹೆಸರಾಂತ ಪೋರ್ನ್ ಸೈಟ್‌ಗಳು ಉಚಿತವಾಗಿ ಪ್ರೀಮಿಯಂ ಸಬ್ ಸ್ಕೈಬ್ರರ್ ಅವಕಾಶ ಮಾಡಿಕೊಟ್ಟಿದೆ. ಇಷ್ಟು ದಿನ ದುಡ್ಡು ಕೊಟ್ಟು ಆನಂದ ಸವಿಯುತ್ತಿದ್ದವರಿಗೆ ಇನ್ನು ಮುಂದೆ ಎಲ್ಲವೂ ಉಚಿತ!

ಇಟಲಿಯ ಲೊಂಬಾರ್ಡಿ, ವೆನೆಟೊ, ಇರಾನ್ ನ ತೆಹ್ರಾನ್, ದಕ್ಷಿಣ ಕೋರಿಯಾದ ಕೆಲ ಭಾಗ, ಚೀನಾದ ವುಹಾನ್, ಕ್ಯಾನರಿ ಐಲ್ಯಾಂಡ್‌ ನ ಭಾಗಗಳಲ್ಲಿನ ಜನರು ಪುಕ್ಕಟೆ ಪೋರ್ನ್ ಅನುಭವ ಪಡೆದುಕೊಳ್ಳಬಹುದು. ಡೇಟಾ ಇದ್ದರೆ ಎಚ್‌ಡಿ ಕ್ಯಾಲಿಟಿ ಸವಿಯಬಹುದು!

ಕೊರೋನಾ ವೈರಸ್ ಈಗಾಗಲೇ ಗೊತ್ತಿರುವಂತೆ ಒಂದು ಸಾಂಕ್ರಾಮಿಕ ಕಾಯಿಲೆ. ಜನರು ನೇರವಾಗಿ ಭೇಟಿಯಾದರೆ ಹರಡುವ ಸಾಧ್ಯತೆ ಹೆಚ್ಚು. ಅದೇ ಪೋರ್ನ್ ಸೈಟ್‌ ಗಳಲ್ಲಿ ಮುಳುಗಿದ್ದರೆ. ಒಬ್ಬರಿಗೊಬ್ಬರು ಭೇಟಿ ಆಗುವ ಸಾಧ್ಯತೆಯೇ ಇಲ್ಲ ಬಿಡಿ. ಜನರು ತಮ್ಮ ಬೆಡ್ ರೂಂ ಮತ್ತು ಅಪಾರ್ಟ್ ಮೆಂಟ್ ನಲ್ಲಿಯೇ ಸ್ವಯಂ ಬಂಧಿಯಾಗಿರುತ್ತಾರೆ ಎನ್ನುವುದು ಮಾಸ್ಟರ್ ಐಡಿಯಾ.  ಇಷ್ಟೇ ಅಲ್ಲದೇ ಸೈಟ್‌ಗಳು ನೆಟ್ ಫ್ಲಿಕ್ಸ್ ಮತ್ತು ಎಚ್‌ಬಿಒದ ಸಹಾಯವನ್ನು ಕೇಳಿವೆ. ಒಟ್ಟಿನಲ್ಲಿ ಅತ್ತ ವೈರಸ್ ಪ್ರಾಣ ಹಿಂಡುತ್ತಿದ್ದರೆ ಇತ್ತ ಪೋರ್ನ್ ಸೈಟ್‌ ಗಳು ತಮ್ಮ ಗ್ರಾಹಕರ ಸಂಖ್ಯೆ ದ್ವಿಗುಣ ಮಾಡಿಕೊಂಡಿವೆ.

click me!