ಮುಸಲ್ಮಾನರಿಗೆ ಮೆಕ್ಕಾ, ಮದೀನಾ ಪ್ರವೇಶ ನಿರ್ಬಂಧ: ಕಾರಣವೇನು?

By Suvarna NewsFirst Published Feb 28, 2020, 2:12 PM IST
Highlights

ಮೆಕ್ಕಾ, ಮದೀನಾಕ್ಕೆ ವಿದೇಶಿಯರ ಭೇಟಿಗೆ ಸೌದಿ ಸರ್ಕಾರದ ನಿಷೇಧ| ನಿಷೇಧಕ್ಕೇನು ಕಾರಣ? ಇಲ್ಲಿದೆ ವಿವರ
 

ದುಬೈ[ಫೆ.28]: ಮಧ್ಯಪ್ರಾಚ್ಯದಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಪರಿಣಾಮ, ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾ ಮಸೀದಿಗೆ ವಿದೇಶಿಗರು ಭೇಟಿ ನೀಡದಂತೆ ಸೌದಿ ಅರೇಬಿಯಾ ಸರ್ಕಾರ ನಿಷೇಧ ಹೇರಿದೆ. ವಾರ್ಷಿಕ ಹಜ್‌ ಯಾತ್ರೆಗೆ ಕೆಲವೇ ತಿಂಗಳು ಬಾಕಿಯಿರುವ ಬೆನ್ನಲ್ಲೇ, ಸೌದಿ ಸರ್ಕಾರ ಕೈಗೊಂಡಿರುವ ಈ ಕ್ರಮವು ಕಾಬಾ, ಮದೀನಾ, ಮೆಕ್ಕಾ ಭೇಟಿಗೆ ನಿರ್ಧರಿಸಿದವರ ಆಸೆಗೆ ತಣ್ಣೀರು ಎರಚಿದೆ.

ಮಧ್ಯಪ್ರಾಚ್ಯ ರಾಷ್ಟ್ರವಾದ ಇರಾನ್‌ನಲ್ಲಿ ಈಗಾಗಲೇ 22 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಅಲ್ಲದೆ, 141 ಮಂದಿಯಲ್ಲಿ ಈ ವೈರಸ್‌ ಪತ್ತೆಯಾಗಿದೆ. ಇನ್ನು ಕುವೈತ್‌ನಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 26ರಿಂದ ಗುರುವಾರ 43ಕ್ಕೆ ಜಿಗಿದಿದೆ. ಅಲ್ಲದೆ, ಕುವೈತ್‌ನಲ್ಲಿ ಸತ್ತವರೆಲ್ಲರೂ ಇರಾನ್‌ನಿಂದ ಬಂದವರಾಗಿದ್ದರು ಎಂಬ ಆರೋಪ ವ್ಯಕ್ತವಾಗಿದೆ.

ಇಷ್ಟೆಲ್ಲಾ ಆಗಿಯೂ, ಸೌದಿ ಅರೇಬಿಯಾದಲ್ಲಿ ಮಾತ್ರ ಈ ಮಾರಣಾಂತಿಕ ಕಾಯಿಲೆ ಕಾಣಿಸಿಕೊಂಡಿಲ್ಲ. ಹೀಗಾಗಿ, ಮುಂದಾಲೋಚನಾ ಕ್ರಮವಾಗಿ ವಿದೇಶಿ ನಾಗರಿಕರು ತನ್ನ ರಾಷ್ಟ್ರಕ್ಕೆ ಭೇಟಿ ನೀಡದಂತೆ ಅಲ್ಲದೆ, ಕೊರೋನಾ ಪೀಡಿತ ರಾಷ್ಟ್ರಗಳಿಗೆ ತನ್ನ ಪ್ರಜೆಗಳು ಭೇಟಿ ನೀಡದಂತೆ ಸೌದಿ ವಿದೇಶಾಂಗ ಇಲಾಖೆ ಕಟ್ಟೆಚ್ಚರ ನೀಡಿದೆ.

click me!