ಪಾಕ್‌ ರುಪಾಯಿ ಮೌಲ್ಯ ದಾಖಲೆ 287ಕ್ಕೆ ಕುಸಿತ: ಬಡ್ಡಿ ದರ ಶೇ.21ಕ್ಕೇರಿಕೆ

Published : Apr 05, 2023, 07:46 AM ISTUpdated : Apr 05, 2023, 07:47 AM IST
ಪಾಕ್‌ ರುಪಾಯಿ ಮೌಲ್ಯ ದಾಖಲೆ 287ಕ್ಕೆ ಕುಸಿತ: ಬಡ್ಡಿ ದರ ಶೇ.21ಕ್ಕೇರಿಕೆ

ಸಾರಾಂಶ

ತೀವ್ರ ಆರ್ಥಿಕ ದುಸ್ಥಿತಿ ಅನುಭವಿಸುತ್ತಿರುವ ಪಾಕಿಸ್ತಾನದ ರುಪಾಯಿ ಬೆಲೆ ಡಾಲರ್‌ ಎದುರು ಮಂಗಳವಾರ ದಾಖಲೆಯ 287.29ರು.ಗೆ ಕುಸಿತ ಕಂಡಿದೆ.

ಇಸ್ಲಾಮಾಬಾದ್‌: ತೀವ್ರ ಆರ್ಥಿಕ ದುಸ್ಥಿತಿ ಅನುಭವಿಸುತ್ತಿರುವ ಪಾಕಿಸ್ತಾನದ ರುಪಾಯಿ ಬೆಲೆ ಡಾಲರ್‌ ಎದುರು ಮಂಗಳವಾರ ದಾಖಲೆಯ 287.29ರು.ಗೆ ಕುಸಿತ ಕಂಡಿದೆ. ದಿವಾಳಿಯಾಗಿರುವ ದೇಶಕ್ಕೆ ಸಾಲ ನೀಡಲು ಐಎಂಎಫ್‌ (ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ) ವಿಧಿಸಿರುವ ಕಠಿಣ ಷರತ್ತುಗಳನ್ನು ಪಾಲಿಸಲು ಹೆಣಗಾಡುತ್ತಿರುವ ಹೊತ್ತಿನಲ್ಲೇ ಪಾಕ್‌ನಲ್ಲಿ ವಿದೇಶಿ ವಿನಿಮಯ ತೀವ್ರವಾಗಿ ಕುಸಿದಿದೆ.

ಇದರಿಂದಾಗಿ ಆಮದು ಇನ್ನಷ್ಟು ದುಬಾರಿಯಾಗಲಿದ್ದು, ಅಗತ್ಯ ವಸ್ತುಗಳ ಆಮದಿಗೂ ಹೆಣಗಾಡುತ್ತಿರುವ ಸರ್ಕಾರವನ್ನು ಇನ್ನಷ್ಟುಸಂಕಷ್ಟಕ್ಕೆ ಸಿಕ್ಕಿಸಿದೆ. ಈ ನಡುವೆ ಕಳೆದ ಮಾರ್ಚ್‌ನಲ್ಲಿ ದೇಶದ ಹಣದುಬ್ಬರ ಪ್ರಮಾಣವು ಶೇ.35.4ಕ್ಕೆ ತಲುಪಿದ್ದು, ಕಳೆದ 50 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಎನ್ನಿಸಿಕೊಂಡಿದೆ. ಹೀಗಾಗಿ ಹಣದುಬ್ಬರ ಇಳಿಕೆಗೆ ತುರ್ತು ಕ್ರಮ ಕೈಗೊಂಡಿರುವ ಕೇಂದ್ರೀಯ ಬ್ಯಾಂಕ್‌, ಸಾಲದ ಮೇಲಿನ ಬಡ್ಡಿದರವನ್ನು ಮಂಗಳವಾರ ಮತ್ತೆ ಶೇ.1ರಷ್ಟು ಏರಿಸಿದೆ. ಹೀಗಾಗಿ ಸಾಲದ ಮೇಲಿನ ಬಡ್ಡಿದರ ಇದೀಗ ಶೇ.21ಕ್ಕೆ ತಲುಪಿದೆ.

ಹಣದುಬ್ಬರವಲ್ಲ, ಹೈಪರ್‌ ಹಣದುಬ್ಬರದತ್ತ ಪಾಕ್‌, ಸಾಲ ತೀರಿಸುವ ಅವಧಿ ವಿಸ್ತರಿಸಿದ ಚೀನಾ!

 ಪಾಕಿಸ್ತಾನದ ಸರ್ಕಾರ ದೇಶದ ಹಣದುಬ್ಬರದ ವಿಚಾರವಾಗಿ ಶನಿವಾರ ಆಘಾತಕಾರಿ ವರದಿಯನ್ನು ಪ್ರಕಟ ಮಾಡಿದೆ. ಪಾಕಿಸ್ತಾನ ಸರ್ಕಾರದ ಅಂಕಿ ಅಂಶ ಸಚಿವಾಲಯವು ಮಾರ್ಚ್‌ 2022 ರಿಂದ ಮಾರ್ಚ್‌ 2023ರವರೆಗೆ ಪಾಕಿಸ್ತಾನದಲ್ಲಿ ಆಗಿರುವ ಹಣದುಬ್ಬರ ಪ್ರಮಾಣದ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ಪಾಕ್‌ನಲ್ಲಿ ಬರೋಬ್ಬರಿ 35.57%ರಷ್ಟು ಹಣದುಬ್ಬರ ದಾಖಲಾಗಿದೆ. ಇದು 1965ರ ನಂತರ ದೇಶದ ಗರಿಷ್ಠ ಮಟ್ಟದ ಹಣದುಬ್ಬರ ಎನ್ನಲಾಗಿದೆ. ಇದೇ ವೇಳೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ, ಚೀನಾ 16,000 ಕೋಟಿ ರೂಪಾಯಿ ಸಾಲ ಮರುಪಾವತಿಸಲು ನೀಡಿದ್ದ ಕಾಲಾವಕಾಶವನ್ನು ವಿಸ್ತರಿಸಿದೆ. ಈ ಮಾಹಿತಿಯನ್ನು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ನೀಡಿದ್ದಾರೆ.  ಪಾಕಿಸ್ತಾನದಲ್ಲಿ, ಕಳೆದ ಒಂದು ವರ್ಷದಲ್ಲಿ ಹಣದುಬ್ಬರದ ದೊಡ್ಡ ಪರಿಣಾಮವು ಆಹಾರ, ಸಾರಿಗೆ ಮತ್ತು ಮದ್ಯದ ಮೇಲೆ ಆಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಆಹಾರ ಪದಾರ್ಥಗಳ ಬೆಲೆಗಳು 47.2% ರಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ಸಾರಿಗೆಯು 54.9% ರಷ್ಟು ದುಬಾರಿಯಾಗಿದೆ, ಮದ್ಯದ ಬೆಲೆಯಲ್ಲಿ 50% ರಷ್ಟು ಹೆಚ್ಚಳವನ್ನು ದಾಖಲಿಸಲಾಗಿದೆ. ಪಾಕಿಸ್ತಾನದಲ್ಲಿ ಹಣದುಬ್ಬರವು ನಗರಗಳಿಗಿಂತ ಹಳ್ಳಿಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಕಳೆದ ಒಂದು ವರ್ಷದಲ್ಲಿ ಹಣದುಬ್ಬರ ಶೇ.38.8ರಷ್ಟು ಹೆಚ್ಚಿದ್ದರೆ, ನಗರಗಳಲ್ಲಿ ಶೇ.32ರಷ್ಟು ಏರಿಕೆಯಾಗಿದೆ. ವರದಿಗಳ ಪ್ರಕಾರ ಗ್ರಾಮದಲ್ಲಿ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ.

ದೇಶ ವಿಭಜನೆ ತಪ್ಪೆಂದು ಈಗ ಪಾಕಿಸ್ತಾನ ಜನತೆಗೆ ಅರಿವಾಗಿದೆ: ಮೋಹನ್‌ ಭಾಗವತ್‌

ಹೈಪರ್‌ ಇನ್‌ಫ್ಲೇಶನ್‌ನತ್ತ ಪಾಕ್: ಜಿಯೋ ನ್ಯೂಸ್ ಪ್ರಕಾರ, ಪಾಕಿಸ್ತಾನ ಈಗ ಅಧಿಕ ಹಣದುಬ್ಬರದತ್ತ ಸಾಗುತ್ತಿದೆ. ವಾಸ್ತವವಾಗಿ, ಅಧಿಕ ಹಣದುಬ್ಬರವು ವಸ್ತುಗಳ ಬೆಲೆ ದ್ವಿಗುಣಗೊಂಡಾಗ ಉಂಟಾಗುವ ಪರಿಸ್ಥಿತಿಯಾಗಿದೆ.ಇದೇ ವೇಳೆ ರಂಜಾನ್ ಮಾಸವಾದ್ದರಿಂದ ಜನರು ಮೊದಲಿಗಿಂತ ಹೆಚ್ಚು ಶಾಪಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಂತರ ಹೆಚ್ಚಿದೆ. ಇದರಿಂದಾಗಿ ಹಣದುಬ್ಬರವೂ ಹೆಚ್ಚಿದೆ.

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ 16,000 ಕೋಟಿ ರೂಪಾಯಿ ಸಾಲ ಮರುಪಾವತಿಸಲು ಚೀನಾ ಹೆಚ್ಚಿನ ಕಾಲಾವಕಾಶ ನೀಡಿದೆ. ಹಿಂದಿನ ಗಡುವಿನ ಪ್ರಕಾರ, ಪಾಕಿಸ್ತಾನವು ಕಳೆದ ವಾರದೊಳಗೆ ಈ ಸಾಲವನ್ನು ಮರುಪಾವತಿ ಮಾಡಬೇಕಾಗಿತ್ತು. ಆದರೆ, ಚೀನಾ ಸರ್ಕಾರ ಮತ್ತು ಅಲ್ಲಿನ ಬ್ಯಾಂಕ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

1 ಕೆಜಿ ಹಿಟ್ಟಿಗೆ 185 ರೂಪಾಯಿ: 'ದುನಿಯಾ ನ್ಯೂಸ್' ಟಿವಿ ವಾಹಿನಿಯ ವರದಿ ಪ್ರಕಾರ, ಪ್ರಸ್ತುತ ಪಾಕಿಸ್ತಾನದಲ್ಲಿ ಒಂದು ಕೆಜಿ ಹಿಟ್ಟು 185 ರೂ.ಗೆ ಮಾರಾಟವಾಗುತ್ತಿದೆ. ದೇಶದ ಹೆಚ್ಚಿನ ಜನರು ತಂದೂರಿ ಅಂಗಡಿಗಳಿಂದ ರೊಟ್ಟಿಗಳನ್ನು ಖರೀದಿಸುತ್ತಾರೆ. ಒಂದು ರೊಟ್ಟಿ ಲಾಹೋರ್‌ನಲ್ಲಿ ಸುಮಾರು 40 ರೂಪಾಯಿಗೆ ಲಭ್ಯವಿದೆ. ದುಬಾರಿ ವಿದ್ಯುತ್ ಹಾಗೂ ನಿರ್ವಹಣೆಯಿಂದಾಗಿ ದುಬಾರಿ ಬೆಲೆಗೆ ರೊಟ್ಟಿ ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ತಂದೂರಿ ರೋಟಿ ಮಾರಾಟ ಮಾಡುವ ವ್ಯಾಪಾರಿಗಳು ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡ ಸರಕಾರ ಬಡವರಿಗೆ ಉಚಿತವಾಗಿ ಹಿಟ್ಟು ನೀಡುವ ಯೋಜನೆ ಆರಂಭಿಸಿದ್ದರೂ ಅದರ ಪ್ರಯೋಜನ ಸಿಗುತ್ತಿಲ್ಲ.

ಬೆಂಗ್ಳೂರಿನ ಜನನಿಬಿಡ ಪ್ರದೇಶದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದ ಯುವಕ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!