
ಬೆಂಗಳೂರು[ಜೂ. 18] ಆರನೇ ವಿಶ್ವ ಕನ್ನಡ ನಾವಿಕ ಸಮ್ಮೇಳನಕ್ಕೆ ವೇದಿಕೆ ಸಿದ್ಧವಾಗಿದೆ. ಆಗಸ್ಟ್ 27, 28 ಮತ್ತು 29 ರಂದು ಸಮ್ಮೇಳನ ಆಯೋಜನೆ ಮಾಡಲಾಗಿದೆ. ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಕನ್ನಡಿಗರಿಗೆ ಒಂದು ಸುವರ್ಣ ಅವಕಾಶ ಲಭ್ಯವಾಗಿದೆ.
ನಾವಿಕದ ಸಾಹಿತ್ಯ ವಿಭಾಗ ಸ್ವರಚಿತ ಕವನ ಸ್ಪರ್ಧೆ ಏರ್ಪಡಿಸಿದೆ. ಕೆಲವು ನಿಯಮಾವಳಿಗಳನ್ನು ಏರ್ಪಡಿಸಿದೆ. ಕವನ ಸ್ವಂತದ್ದಾಗಿರಬೇಕು, ಕನ್ನಡದಲ್ಲಿರೇಕು, ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.
ಹಾಸ್ಯ ರಸಕ್ಕೂ ಉತ್ಥೇಜನ ನೀಡಲಾಗಿದ್ದು ಫಜೀತಿಗೆ ಸಿಕ್ಕ ಸಂದರ್ಭಗಳನ್ನು ಪೋಣಿಸಿ ವಿಡಿಯೋ ಮಾಡಿ ಹಂಚಿಕೊಳಳಬಹುದು. ವಿಡಿಯೋ ಎಂಟು ನಿಮಿಷ ಮೀರಬಾರದು.
ಕವನವನ್ನು ವಾಚನ ಮಾಡಿ NVKS.21.literary@gmail.com ಗೆ ಕಳುಹಿಸಬೇಕು . ಅನಿವಾಸಿ ರಸಾನುಭವ ಹೆಸರಿನ ಸ್ಪರ್ಧೆಗೆ ನಿಮ್ಮ ನೆನಪಿನ ಬುತ್ತಿಯ ಕವನ ಹಂಚಿಕೊಳ್ಳಬಹುದು.
ಪಾಕ ಪ್ರವೀಣರಿಗೆ, ಹಾಡುಗಾರರಿಗೆ, ಕಿರು ಚಲನಚಿತ್ರ, ಅಂತ್ಯಾಕ್ಷರಿ, 1 ನಿಮಿಷದ ವಿಡಿಯೋ ಮಾಡುವವರಿಗೂ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಭೇಟಿ ನೀಡಬಹುದು. ಕ್ಲಿಕ್ ಮಾಡಿ
ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆ ಅನಿವಾಸಿ ಕನ್ನಡಿಗರ ಪ್ರತಿಭಾ ಪ್ರದರ್ಶನದ ವೇದಿಕೆಯಾಗಿದೆ.
ಈ ನಾವಿಕ ಸಂಸ್ಥೆಗೆ ದಶಕದ ಇತಿಹಾಸವಿದೆ. ಶಿಕ್ಷಣ, ಉದ್ಯೋಗ ನಿಮ್ಮಿತ್ತ ತೆರಳಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಅಮೇರಿಕಾ, ಉತ್ತರ, ಪಶ್ಚಿಮ, ಪೂರ್ವ ಹಾಗೂ ಮಧ್ಯ ರಾಜ್ಯಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಈ ಅನಿವಾಸಿ ಕನ್ನಡಿಗರು ವಿಭಿನ್ನ ಸಂಸ್ಕೃತಿಯ ನೆರಳಿನಲ್ಲಿ ಕುಳಿತು ಮೂಲ ಸಂಸ್ಕೃತಿ, ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದಾರೆ.
ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಪ್ರಯತ್ನಗಳಲ್ಲಿ ಈ ಸಮ್ಮೇಳನ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಕಳೆದ ವರ್ಷ ಮೈಸೂರಿನಲ್ಲಿ ನಡೆದ ನಾವಿಕ ಸಮ್ಮೇಳನ ಅನೇಕ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ