ಟೋಕಿಯೋ (ಜೂ.18): ವಿಶ್ವದ ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿ ಆತಂಕ ಕಡಿಮೆಯಾಗಿಲ್ಲ. ವಿಶ್ವದ ನಾನಾ ರಾಷ್ಟ್ರಗಳು ಕೊರೋನಾದಿಂದ ತತ್ತರಿಸುತ್ತಿದ್ದು, ನಿರ್ಮೂಲನೆಗಾಗಿ ವಿವಿಧ ರೀತಿಯ ಹೋರಾಟ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕೊರೋನಾದಿಂದ ರಕ್ಷಣೆಗೆ ಜನರು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ.
5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಬೇಡ : ಹೊಸ ಮಾರ್ಗಸೂಚಿ ...
undefined
ಆದರೆ, ಜಪಾನಿನಲ್ಲಿ ಬೃಹತ್ ಬೌದ್ಧ ದೇವತೆಯ ಪ್ರತಿಮೆಗೂ ಮಾಸ್ಕ್ ಅನ್ನು ಅಳವಡಿಸಲಾಗಿದೆ.
187 ಅಡಿ ಎತ್ತರದ ಬಿಳಿಯ ಬಣ್ಣದ ಈ ಪ್ರತಿಮೆ ಕರುಣೆಯ ದೇವತೆ ಎಂದೇ ಕರೆಸಿಕೊಂಡಿದೆ. ಕೊರೋನಾ ಸಾಂಕ್ರಾಮಿಕವನ್ನು ಕೊನೆಗೊಳಿಸುವಂತೆ ಪ್ರಾರ್ಥಿಸುವ ಸಲುವಾಗಿ ನಾಲ್ಕು ಮಂದಿ ಕಾರ್ಮಿಕರು ಪ್ರತಿಮೆಯ ಮೇಲೆ ಏರಿ 30 ಕೆಜಿ ತೂಕದ ಬಟ್ಟೆಯ ಮಾಸ್ಕ್ ಅನ್ನು ಅಳವಡಿಸಿದ್ದಾರೆ.