ಪಿಎನ್‌ಬಿ ವಂಚಕ ಚೋಕ್ಸಿ ಇಂಟರ್‌ಪೋಲ್‌ ಲಿಸ್ಟಿಂದ ಹೊರಕ್ಕೆ: ಭಾರತ ಆಕ್ಷೇಪ

By Kannadaprabha NewsFirst Published Mar 21, 2023, 7:31 AM IST
Highlights

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13,000 ಕೋಟಿ ರು. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ, ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿ ಹೆಸರನ್ನು ಇಂಟರ್‌ಪೋಲ್‌ ತನ್ನ ಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ಕೈಬಿಟ್ಟಿದೆ.

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13,000 ಕೋಟಿ ರು. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ, ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿ ಹೆಸರನ್ನು ಇಂಟರ್‌ಪೋಲ್‌ ತನ್ನ ಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ಕೈಬಿಟ್ಟಿದೆ. ಇಂಟರ್‌ಪೋಲ್‌ನ ಈ ಕ್ರಮಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.  ಪಿಎನ್‌ಬಿ ವಂಚನೆ ಬೆಳಕಿಗೆ ಬರುವ ಮುನ್ನ ಚೋಕ್ಸಿ ವಿದೇಶಕ್ಕೆ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ಭಾರತದ ಕೋರಿಕೆ ಅನ್ವಯ 2018ರ ಡಿಸೆಂಬರ್‌ನಲ್ಲಿ ಆತನ ವಿರುದ್ಧ ಇಂಟರ್‌ಪೋಲ್‌ ಅರೆಸ್ಟ್‌ ವಾರಂಟ್‌ ಜಾರಿ ಮಾಡಿತ್ತು.

ಈ ನಡುವೆ ಕಳೆದ ವರ್ಷ ಆ್ಯಂಟಿಗಾದಿಂದ (Antigua) ಡೊಮೆನಿಕಾ ದೇಶಕ್ಕೆ ಚೋಕ್ಸಿಯನ್ನು (Mehul Choksi) ಅಪಹರಿಸಲಾಗಿತ್ತು. ಇದರ ಉದ್ದೇಶ ಆತನನ್ನು ಭಾರತಕ್ಕೆ ಗಡಿಪಾರು ಮಾಡುವುದಾಗಿರಬಹುದು. ಹೀಗಾದಲ್ಲಿ ಭಾರತದಲ್ಲಿ ಆತನ ವಿರುದ್ಧ ನ್ಯಾಯಸಮ್ಮತ ವಿಚಾರಣೆ ಕಷ್ಟಎಂದು ಚೋಕ್ಸಿ ಇಂಟರ್‌ಪೋಲ್‌ಗೆ ಮನವಿ ಮಾಡಿದ್ದ. ಇದನ್ನು ಪುರಸ್ಕರಿಸಿರುವ ಇಂಟರ್‌ಪೋಲ್‌ ಇದೀಗ ಚೋಕ್ಸಿ ಹೆಸರನ್ನು ಕೈಬಿಟ್ಟಿದೆ.

PMLA Cases : ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಯಿಂದ ಈವರೆಗೂ 18 ಸಾವಿರ ಕೋಟಿ ವಸೂಲಿ!

ಆದರೆ ಇಂಟರ್‌ಪೋಲ್‌ನ (Interpol) ಈ ಕ್ರಮದಿಂದ ನಮ್ಮ ತನಿಖೆಗಾಗಲೀ ಅಥವಾ ಆತನನ್ನು ಆ್ಯಂಟಿಗಾದಿಂದ ಗಡಿಪಾರು ಮಾಡಿಸುವ ನಮ್ಮ ಯತ್ನಕ್ಕೆ ಯಾವುದೇ ಅಡ್ಡಿಯಾಗದು ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

PNB Scam: ಅನಾರೋಗ್ಯ ಕಾಡುತ್ತಿದೆ ನನ್ನನ್ನು ಮತ್ತೆ ಕಿಡ್ನಾಪ್ ಮಾಡಬಹುದು, ಚೋಕ್ಸಿ ವಿಡಿಯೋ ವೈರಲ್

click me!