ಚೀನಾಗೆ ಸಿಕ್ತು ಭರ್ಜರಿ ಖಜಾನೆ: 50 ಟನ್‌ ಉತ್ತಮ ಗುಣಮಟ್ಟದ ಬಂಗಾರದ ಗಣಿ ಪತ್ತೆ; ಬೆಲೆ ಎಷ್ಟು ನೋಡಿ..

By BK Ashwin  |  First Published Mar 20, 2023, 4:22 PM IST

ಈಗಾಗಲೇ, ಶಾಂಡೋಂಗ್ ಚೀನಾದ ಅತಿದೊಡ್ಡ ಚಿನ್ನ ಉತ್ಪಾದಿಸುವ ಪ್ರದೇಶವಾಗಿದೆ ಮತ್ತು ಲೋಹದ ದೊಡ್ಡ ನಿಕ್ಷೇಪಗಳನ್ನು ಹೊಂದಿದೆ. 2022 ರಲ್ಲಿ, ಪ್ರಾಂತ್ಯದ ಅನೇಕ ಪ್ರಮುಖ ಚಿನ್ನದ ಗಣಿಗಳು ಸಾಮಾನ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸಿ ಮತ್ತು ಸುರಕ್ಷತೆಯ ಪ್ರಮೇಯದಲ್ಲಿ ಪೂರ್ವ-ಸಾಂಕ್ರಾಮಿಕ ಮಟ್ಟಕ್ಕೆ ಚೇತರಿಸಿಕೊಂಡಿವೆ. 


ಬೀಜಿಂಗ್ (ಮಾರ್ಚ್‌ 20, 2023): ಕೋವಿಡ್‌ ಬಳಿಕ ಹಲವು ಕಾರಣಗಳಿಂದ ಚೀನಾದ ಆರ್ಥಿಕತೆ ಕುಸಿದು ಹೋಗುತ್ತಿದೆ. ಈ ಹಿನ್ನೆಲೆ ತನ್ನ ಆರ್ಥಿಕತೆಯನ್ನು ಸರಿದಾರಿಗೆ ಕೊಂಡೊಯ್ಯಲು ಡ್ರ್ಯಾಗನ್ ರಾಷ್ಟ್ರ ದೊಡ್ಡಮಟ್ಟದ ಪ್ರಯತ್ನ ನಡೆಸುತ್ತಿದೆ. ಈಗ ಚೀನಾಗೆ ಬಂಪರ್‌ ಲಾಟರಿಯೊಂದು ಹೊಡೆದಿದೆ. ಅದೇನಪ್ಪ ಲಾಟರಿ ಅಂತೀರಾ.. ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ನಿಜಕ್ಕೂ ಇದು ಅಸಲಿ ಖಜಾನೆಯೇ ಸರಿ. 
 
ಹೌದು, ಪೂರ್ವ ಚೀನಾದ ಶಾಂಡೋಂಗ್‌ ಪ್ರಾಂತ್ಯದ ರುಶಾನ್‌ನಲ್ಲಿರುವ ಕ್ಸಿಲಾಕೌ ಚಿನ್ನದ ಗಣಿಯಲ್ಲಿ 50 ಟನ್‌ಗಳ ಅಂದಾಜು ಮೀಸಲು ಹೊಂದಿರುವ ಅತಿ ದೊಡ್ಡ ಚಿನ್ನದ ನಿಕ್ಷೇಪವನ್ನು ಚೀನಾ ಪತ್ತೆ ಮಾಡಿದೆ ಎಂದು ಚೀನಾ ಮಾಧ್ಯಮ ಸಿಜಿಟಿಎನ್‌ ಶನಿವಾರ ವರದಿ ಮಾಡಿದೆ. 

ಇದನ್ನು ಓದಿ: ಚೀನಾದ ರಕ್ಷಣಾ ಬಜೆಟ್‌ 18 ಲಕ್ಷ ಕೋಟಿಗೆ ಏರಿಕೆ: ಭಾರತಕ್ಕಿಂತ 3 ಪಟ್ಟು ಹೆಚ್ಚು ರಕ್ಷಣಾ ಬಜೆಟ್‌

Tap to resize

Latest Videos

ಎಂಟು ವರ್ಷಗಳ ನಿರೀಕ್ಷೆಯ ನಂತರ, ಕ್ಸಿಲಾಕೌ ಚಿನ್ನದ ಗಣಿಯು ಈ ಪ್ರದೇಶದಲ್ಲಿ ಈವರೆಗಿನ ಅತಿದೊಡ್ಡ ಚಿನ್ನದ ನಿಕ್ಷೇಪವಾಗಿದೆ ಮತ್ತು 2023 ರಲ್ಲಿ ಇದುವರೆಗೆ ಪತ್ತೆಯಾದ ದೊಡ್ಡ ಪ್ರಮಾಣದ ಬಂಗಾರ ಎಂದು ಶಾಂಡೋಂಗ್‌ ಪ್ರಾಂತೀಯ ಬ್ಯೂರೋ ಆಫ್ ಜಿಯಾಲಜಿ & ಮಿನರಲ್ ರಿಸೋರ್ಸಸ್ ತಿಳಿಸಿದೆ. ಅಂದಹಾಗೆ, ಈ ಚಿನ್ನದ ಮೌಲ್ಯ ಎಷ್ಟು ಗೊತ್ತಾ..? ಬರೋಬ್ಬರಿ 3 ಟ್ರಿಲಿಯನ್‌ ಡಾಲರ್‌ನಷ್ಟು. ಪ್ರಸ್ತುತ, ನೀವು 50 ಟನ್‌ ಚಿನ್ನವನ್ನು ಮಾರುಕಟ್ಟೆಯ ಮೌಲ್ಯದಲ್ಲಿ ಮಾರಿದರೆ, ನೀವು 3 ಟ್ರಿಲಿಯನ್‌ ಡಾಲರ್‌ನಷ್ಟು ಹಣ ಪಡೆಯಬಹುದು.

ಹಾಗೂ, ಈ ಪ್ರದೇಶದಲ್ಲಿ ದೊರೆತಿರುವ ನಿಕ್ಷೇಪ ಉತ್ತಮ ಗುಣಮಟ್ಟದ ಚಿನ್ನದ ಅದಿರನ್ನು ಹೊಂದಿದ್ದು, ಇದನ್ನು ಸುಲಭವಾಗಿ ಗಣಿಗಾರಿಕೆ ಮಾಡಬಹುದು ಮತ್ತು ಸಂಸ್ಕರಿಸಬಹುದು ಎಂದು ಸ್ಥಳೀಯ ಸಂಪನ್ಮೂಲ ಇಲಾಖೆ ತಿಳಿಸಿದೆ. ಚೀನಾ ತನ್ನ ಚಿನ್ನದ ನಿಕ್ಷೇಪಗಳನ್ನು ವಿಸ್ತರಿಸಲು ಮತ್ತು ನಿರ್ಣಾಯಕ ಸಂಪನ್ಮೂಲಗಳಲ್ಲಿ ರಾಷ್ಟ್ರದ ಸ್ವಾವಲಂಬನೆಯನ್ನು ಬೆಂಬಲಿಸಲು ಇದು ಸಹಾಯ ಮಾಡುತ್ತದೆ ಎಂದೂ ವರದಿ ಹೇಳಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಭಾರತ ವಿರೋಧಿ ಏಜೆನ್ಸಿಯಲ್ಲಿ ಏಜೆಂಟರಾಗಿ ಕೆಲಸ ಮಾಡ್ತಿದ್ದಾರಾ..? ಬಿಜೆಪಿ ಪ್ರಶ್ನೆ

ಪ್ರಾದೇಶಿಕ ಭೌಗೋಳಿಕ ರಾಜಕೀಯ ಅಪಾಯಗಳು ಮತ್ತು ಜಾಗತಿಕ ಆರ್ಥಿಕ ಕುಸಿತದ ಮಧ್ಯೆ ಚೀನಾ ತನ್ನ ಚಿನ್ನದ ನಿಕ್ಷೇಪಗಳು ಮತ್ತು ಉತ್ಪಾದನೆಯನ್ನು ವಿಸ್ತರಿಸುತ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ, ಚೀನಾದ ಚಿನ್ನದ ನಿಕ್ಷೇಪಗಳು 65.92 ಮಿಲಿಯನ್ ಔನ್ಸ್ (1,869 ಟನ್) ನಷ್ಟಿದೆ. ಅಲ್ಲದೆ, ಜನವರಿ ತಿಂಗಳಿನಿಂದ ಫೆಬ್ರವರಿ ತಿಂಗಳಿಗೆ 800,000 ಔನ್ಸ್ ಹೆಚ್ಚಾಗಿದೆ ಎಂದು ಚೀನಾದ ಕೇಂದ್ರ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಹೇಳಿದೆ.

ಈಗಾಗಲೇ, ಶಾಂಡೋಂಗ್ ಚೀನಾದ ಅತಿದೊಡ್ಡ ಚಿನ್ನ ಉತ್ಪಾದಿಸುವ ಪ್ರದೇಶವಾಗಿದೆ ಮತ್ತು ಲೋಹದ ದೊಡ್ಡ ನಿಕ್ಷೇಪಗಳನ್ನು ಹೊಂದಿದೆ. 2022 ರಲ್ಲಿ, ಪ್ರಾಂತ್ಯದ ಅನೇಕ ಪ್ರಮುಖ ಚಿನ್ನದ ಗಣಿಗಳು ಸಾಮಾನ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸಿ ಮತ್ತು ಸುರಕ್ಷತೆಯ ಪ್ರಮೇಯದಲ್ಲಿ ಪೂರ್ವ-ಸಾಂಕ್ರಾಮಿಕ ಮಟ್ಟಕ್ಕೆ ಚೇತರಿಸಿಕೊಂಡಿವೆ. 

ಇದನ್ನೂ ಓದಿ: ಚೀನಾ ಮನವಿಗೆ ಡೋಂಟ್‌ ಕೇರ್‌; ಭಾರತಕ್ಕೆ ಹೆಚ್ಚು ತೈಲ ಪೂರೈಕೆ ಮಾಡುತ್ತಿರುವ ರಷ್ಯಾ: ಕಾರಣ ಹೀಗಿದೆ..

ಇನ್ನು, ಜಿಯೋಜಿಯಾ ಚಿನ್ನದ ಗಣಿ ಕಳೆದ ವರ್ಷ 10 ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ನೀಡಿದೆ. ಇದು ರಾಷ್ಟ್ರವ್ಯಾಪಿ ಉತ್ಪಾದನೆಯ ಅತ್ಯುನ್ನತ ಮಟ್ಟವಾಗಿದೆ ಎಂದು ಚೀನಾ ಗೋಲ್ಡ್ ಅಸೋಸಿಯೇಷನ್ (CGA) ಹೇಳಿದೆ. 2022 ರಲ್ಲಿ ಚೀನಾದ ಕಚ್ಚಾ ಚಿನ್ನದ ಉತ್ಪಾದನೆಯು 372.05 ಟನ್‌ಗಳನ್ನು ತಲುಪಿದ್ದು, ಇದು 2021 ಕ್ಕಿಂತ 13.09 ಶೇಕಡಾ ಹೆಚ್ಚಳವಾಗಿದೆ ಎಂದು CGA ಡೇಟಾ ಜನವರಿ 19 ರಂದು ಮಾಹಿತಿ ನೀಡಿದೆ.  

ಆದರೆ, ಚೀನಾದ ಚಿನ್ನದ ಬಳಕೆಯು 2022 ರಲ್ಲಿ 1,001.74 ಟನ್‌ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 10.63 ರಷ್ಟು ಕಡಿಮೆಯಾಗಿದೆ ಎಂದೂ CGA ಮಾಹಿತಿ ನೀಡಿದೆ.

ಇದನ್ನೂ ಓದಿ: ಚೀನಾ, ಪಾಕ್‌ನಿಂದ ತರಬೇತಿ ಪಡೆದ ಡೇಂಜರಸ್‌ ವ್ಯಕ್ತಿ ದೇಶಕ್ಕೆ ಎಂಟ್ರಿ; ಮುಂಬೈನಲ್ಲಿ ಉಗ್ರ ದಾಳಿ ಸಂಭವ: NIA ಎಚ್ಚರಿಕೆ

click me!