ಗುರುವಾರ ಪ್ರಧಾನಿ ಮೋದಿ ಮೊದಲ ಜಾಗತಿಕ ಕಾರ್ಯಕ್ರಮ!

By Suvarna News  |  First Published Jul 8, 2020, 10:43 AM IST

ಮೋದಿ ಮೊದಲ ವಿಶ್ವ ಕಾರ್ಯಕ್ರಮ| ಇಂಡಿಯಾ ಗ್ಲೋಬಲ್‌ ವೀಕ್‌ನಲ್ಲಿ ಭಾಷಣ| ಕೊರೋನಾ ಬಂದ ಬಳಿಕ ಮೊದಲನೆಯದು


ನವದೆಹಲಿ(ಜು.08): ಬ್ರಿಟನ್‌ನಲ್ಲಿ ಆಯೋಜನೆಗೊಂಡಿರುವ ಮೂರು ದಿನಗಳ ‘ಇಂಡಿಯಾ ಗ್ಲೋಬಲ್‌ ವೀಕ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ) ಜಾಗತಿಕ ಸಮುದಾಯ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಕೊರೋನಾ ವೈರಸ್‌ ಅಬ್ಬರ ಶುರುವಾದ ಬಳಿಕ ಮೋದಿ ಅವರು ವಿಶ್ವದ ವಿವಿಧ ದೇಶಗಳ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ.

Tap to resize

Latest Videos

undefined

ಲಾಕ್ಡೌನ್‌ ವೇಳೆ ಬಿಜೆಪಿಯದ್ದು ಸೇವಾಯಜ್ಞ: ಮೋದಿ

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಮಾರಂಭದಲ್ಲಿ ಭಾಗಿಯಾಗಲಿರುವ ಮೋದಿ ಅವರು, ಭಾರತದಲ್ಲಿ ವ್ಯಾಪಾರ ಹಾಗೂ ವಿದೇಶಿ ಹೂಡಿಕೆಗಿರುವ ಅವಕಾಶಗಳನ್ನು ಜಾಗತಿಕ ಸಮುದಾಯದ ಮುಂದೆ ತೆರೆದಿಡುವ ನಿರೀಕ್ಷೆ ಇದೆ. 30 ದೇಶಗಳ 5 ಸಾವಿರ ಪ್ರತಿನಿಧಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ 250 ಮಂದಿ ಭಾಷಣ ಮಾಡಲಿದ್ದಾರೆ.

ಭಾರತದ ಜಾಗತೀಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಬೃಹತ್‌ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.

click me!