26 ವರ್ಷಗಳ ಬಳಿಕ ಭಾರತ ಪ್ರಧಾನಿ ಈಜಿಪ್ಟ್‌ಗೆ ಭೇಟಿ, ಮೋದಿಗೆ ಸ್ವಾಗತಿಸಿದ ಪಿಎಂ ಮುಸ್ತಾಫಾ!

Published : Jun 24, 2023, 06:23 PM ISTUpdated : Jun 24, 2023, 06:55 PM IST
26 ವರ್ಷಗಳ ಬಳಿಕ ಭಾರತ ಪ್ರಧಾನಿ ಈಜಿಪ್ಟ್‌ಗೆ ಭೇಟಿ, ಮೋದಿಗೆ ಸ್ವಾಗತಿಸಿದ ಪಿಎಂ ಮುಸ್ತಾಫಾ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ 2 ದಿನದ ಈಜಿಪ್ಟ್ ಪ್ರವಾಸ ಆರಂಭಗೊಂಡಿದೆ. ಕೈರೋ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯನ್ನು ಈಜಿಪ್ಟ್ ಪ್ರಧಾನಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಕೈರೋ(ಜೂ.24) ಅಮೆರಿಕ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ 2 ದಿನದ ಈಜಿಪ್ಟ್ ಪ್ರವಾಸಕ್ಕಾಗಿ ಕೈರೋ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಪ್ರಧಾನಿ ಮೋದಿಗೆ ಅದ್ಧೂರಿ ಹಾಗೂ ಆತ್ಮೀಯ ಸ್ವಾಗತ ಕೋರಲಾಗಿದೆ. ಪ್ರಧಾನಿ ಮೋದಿ ಬರಮಾಡಿಕೊಳ್ಳಲು ಈಜಿಪ್ಟ್ ಪ್ರಧಾನಿ ಮುಸ್ತಾಫಾ ಮಡ್‌ಬೌಲಿ ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮೋದಿಯನ್ನು ಆತ್ಮೀಯವಾಗಿ ಆಲಿಂಗಿಸಿ ಸ್ವಾಗತ ಕೋರಿದಿದ್ದಾರೆ. ಜೂನ್ 24 ಹಾಗೂ ಜೂನ್ 25 ಎರಡು ದಿನ ಪ್ರಧಾನಿ ಮೋದಿ ಈಜಿಪ್ಟ್‌ನಲ್ಲಿ ಹಲವು ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಈಜಿಪ್ಟ್ ಪ್ರವಾಸ ಮಾಡಿದ್ದಾರೆ. 1997ರ ಬಳಿಕ ಅಂದರೆ 26 ವರ್ಷಗಳ ಬಳಿಕ ಈಜಿಪ್ಟ್ ಪ್ರವಾಸ ಮಾಡಿದ ಭಾರತದ ಪ್ರಧಾನಿ ಅನ್ನೋ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ. ನಾಳೆ(ಜೂ.25) ಪ್ರಧಾನಿ ಮೋದಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ದಶಕದ ಹಿಂದೆ ಸಾಮಾನ್ಯ ವ್ಯಕ್ತಿಯಾಗಿ ಶ್ವೇತಭವನ ನೋಡಿದ್ದೆ, ನೆನಪು ಬಿಚ್ಚಿಟ್ಟ ಪ್ರಧಾನಿ ಮೋದಿ!

2023ರ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ರಾಷ್ಟ್ರಪತಿ ಭಾರತದ ವಿಶೇಷ ಅತಿಥಿಯಾಗಿದ್ದರು. ಇದೀಗ 6 ತಿಂಗಳ ಬಳಿಕ ಪ್ರಧಾನಿ ಮೋದಿ ಹಾಗೂ ಅಬ್ದೆಲ್ ಮತ್ತೆ ಭೇಟಿಯಾಗುತ್ತಿದ್ದಾರೆ. ಅಧ್ಯಕ್ಷ ಸೇರಿದಂತೆ ಈಜಿಪ್ಟ್ ಸರ್ಕಾರದ ಪ್ರಮುಖ ಗಣ್ಯರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. 

ಅಮೆರಿಕ ಪ್ರವಾಸದ ಕೊನೆಯ ಪ್ರಧಾನಿ ಮೋದಿ, ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ಸೆಂಟರ್ ನಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು.  ಯು.ಎಸ್.ಎ.ಯಲ್ಲಿ ನೆಲಸಿ ತಮ್ಮ ಕ್ಷೇತ್ರಗಳಲ್ಲಿ ಯಶಸ್ವಿಯಾದ ಭಾರತೀಯ ಸಮುದಾಯದ ಸದಸ್ಯರನ್ನು ಅಭಿನಂದಿಸಿದರು. ಅಮೃತ ಕಾಲದ ಸಮಯದಲ್ಲಿ ಭಾರತದ ಬೆಳವಣಿಗೆಗೆ ಕೊಡುಗೆ ನೀಡುವಂತೆ ಅವರನ್ನು  ಮನವಿ ಮಾಡಿದರು. ಭಾರತ-ಯು.ಎಸ್.ಎ. ಸಂಬಂಧಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಕ್ಕಾಗಿ ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಹಾಗೂ, ದ್ವಿಪಕ್ಷೀಯ ಪಾಲುದಾರಿಕೆಯ ಭವಿಷ್ಯದ ಕ್ಷೇತ್ರಗಳ ಮಹತ್ವವನ್ನು ವಿವರಿಸಿದರು.

ಶ್ವೇತಭವನದ ಆತ್ಮೀಯ ಅತಿಥ್ಯಕ್ಕೆ ವಿಡಿಯೋ ಮೂಲಕ ಪ್ರಧಾನಿ ಮೋದಿ ಧನ್ಯವಾದ!

ವಾಷಿಂಗ್ಟನ್ ಡಿಸಿಯಲ್ಲಿ ಆಲ್ಫಾಬೆಟ್ ಇಂಕ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ಮೋದಿ ಸಂವಾದ ನಡೆಸಿದ್ದರು.  ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಫಿನ್ ಟೆಕ್, ಸೈಬರ್ ಭದ್ರತೆ ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ಮೊಬೈಲ್ ಸಾಧನಗಳ ತಯಾರಿಕೆಯಲ್ಲಿ ಹೆಚ್ಚಿನ ಸಹಯೋಗದ ಮಾರ್ಗಗಳನ್ನು ಅನ್ವೇಷಿಸುವಂತೆ ಪ್ರಧಾನ ಮಂತ್ರಿಗಳು ಪಿಚ್ಚೈ ಅವರನ್ನು ಕೇಳಿಕೊಂಡರು.

ಸಂಶೋಧನೆ ಮತ್ತು ಅಭಿವೃದ್ಧಿ(R &D) ಮತ್ತು ಕೌಶಲ್ಯಾಭಿವೃದ್ಧಿಯನ್ನು ಅಭಿವೃದ್ಧಿಪಡಿಸಲು ಗೂಗಲ್ ಮತ್ತು ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗದ ಕುರಿತು ಸಹ ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸುಂದರ್ ಪಿಚ್ಚೈ ಅವರ ಜೊತೆ ಚರ್ಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!