ಭಾರತದ ರಾಷ್ಟ್ರಗೀತೆ ಹಾಡಿ, ಪಿಎಂ ಕಾಲಿಗೆರಗಿದ ಅಮೆರಿಕ ಗಾಯಕಿ, ವಿಶ್ವಗುರು ಆಗೋದು ಅಂದ್ರೆ ಇದಲ್ಲವೇ?

By Suvarna News  |  First Published Jun 24, 2023, 11:39 AM IST

ಭಾರತ ವಿಶ್ವಗುರು ಆಗುವುದು ಅಂದರೆ ನಮ್ಮ ದೇಶದ ಸರಳ ಸಂಸ್ಕೃತಿ, ಜೀವನಶೈಲಿಯನ್ನು ಅಪ್ಪಿಕೊಳ್ಳುವುದು, ಒಪ್ಪಿಕೊಳ್ಳುವುದು. ಜೀವನದಲ್ಲಿ ಅಳವಡಿಸಿಕೊಂಡು ಪ್ರಕೃತಿ, ಭೂಮಿಯನ್ನು ಉಳಿಸಿಕೊಳ್ಳುವುದಲ್ಲವೇ? 


~ ವಿನಯ್ ಶಿವಮೊಗ್ಗ

ಮೇರಿ ಮಿಲ್ಬೆನ್ ಅಮೇರಿಕಾ ದೇಶದ ಜನಪ್ರಿಯ ಗಾಯಕಿ, ಸಿನಿಮಾ ನಟಿ .  ನಮ್ಮ ಹೆಮ್ಮೆಯ ಪ್ರಧಾನಿಯವರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಸಭೆಯೊಂದರಲ್ಲಿ ಆಕೆ ನಮ್ಮ ಭಾರತದ ರಾಷ್ಟ್ರಗೀತೆಯನ್ನು ತನ್ಮಯತೆಯಿಂದ ಹಾಡುತ್ತಾಳೆ. ಹಾಡಿದ ನಂತರ ಆಕೆ ಮೋದಿಜಿ ಬಳಿ ಬಂದು ಅವರ ಪಾದ ಮುಟ್ಟಿ ನಮಸ್ಕರಿಸುತ್ತಾಳೆ!    
    
ಆ ಕಲಾವಿದೆ ಮೋದಿಜಿ ಕಾಲಿಗೆ ಬಿದ್ದಳು ಎನ್ನುವುದು ದೊಡ್ಡ ವಿಷಯವಲ್ಲ. ಆದರೆ, ಆಕೆ ತನ್ನ ಸಂಸ್ಕೃತಿಯಲ್ಲದ ಭಾರತೀಯ ಸಭ್ಯತೆಯನ್ನು ಅಪ್ಪಿಕೊಂಡ ರೀತಿ ಮಾತ್ರ ಬಹಳ ಅನನ್ಯ. ಭಾರತ ನಮ್ಮ ಅರಿವಿಗೆ ಬಾರದಂತೆ ವಿಶ್ವವನ್ನು ಆವರಿಸುತ್ತಿದೆ. ಭಾರತೀಯರು ಮಾತ್ರ ಹಿತ್ತಲ ಗಿಡದಲ್ಲಿ ಅಮೃತ ಸಮಾನ  ಔಷಧವಿದ್ದರೂ ಕಡೆಗಣಿಸಿ, ಆಚಾರವಿಲ್ಲದ ನಾಲಿಗೆಯನ್ನು ಬಳಸಿ ನಿಂದಿಸುವುದನ್ನೇ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. 

ಶ್ವೇತಭವನದಲ್ಲಿ ಪ್ರತಿಷ್ಠಿತ ಕಂಪನಿಗಳ ಸಿಇಒ ಜೊತೆ ಪ್ರಧಾನಿ ಮೋದಿ ಚರ್ಚೆ!
    
ಕೆಲವರಿದ್ದಾಗ ನಮಗೆ ಅವರ ಮಹತ್ವ ತಿಳಿಯುವುದೇ ಇಲ್ಲ. ಮಲಯ ಪ್ರದೇಶದಲ್ಲಿ ಬೇಡನ ಹೆಂಡತಿ ಅನ್ನ ಮಾಡಿಕೊಳ್ಳಲು ಶ್ರೀಗಂಧದ ಕಟ್ಟಿಗೆಯನ್ನು ಉರುವುಲಾಗಿ ಬಳಸುತ್ತಿದ್ದಳಂತೆ. ನಮ್ಮ ಒಳಗಿರುವ ದೇಶಭಕ್ತಿ -ಸ್ವಾಭಿಮಾನವನ್ನು ಇಂತಹ ಸಂಗತಿಗಳನ್ನು ಕಂಡಾಗ ಹಿಗ್ಗಬೇಕು. ಪ್ರತಿಯೊಬ್ಬ ಭಾರತೀಯ ಮನದಲ್ಲಿಯೂ ದೇಶದ ಬಗ್ಗೆ ಹೆಮ್ಮೆಯಾಗಬೇಕು.   
    
ಬೇರೆ ನೆಲದಲ್ಲಿ ನಮ್ಮ ದೇಶವನ್ನು ಬಯ್ಯುವುದು, ಅವಮಾನಿಸುವುದು ಸುಲಭ ಆದರೆ ನಮ್ಮ ದೇಶಕ್ಕೆ ಮರ್ಯಾದೆ ಸಿಗುವಂತ ಕೆಲಸ ಮಾಡಿದಾಗಲೂ ಹೀಗಳೆಯುವ ಹುಳುಕನ್ನು ಬಿಡುವುದು ನಾವು ಯಾವಾಗ? ಭಾರತ ವಿಶ್ವಗುರುವಾಗಬೇಕು ಅಂದ್ರೆ ಭಾರತದ ಸಭ್ಯ, ಸುಸಂಸ್ಕೃತ ಜೀವನಶೈಲಿಯನ್ನು ಇಡೀ ಜಗತ್ತೇ ಅಪ್ಪುವಂತೆ ಆಗಬೇಕು. ಆರೋಗ್ಯಯುತ ಜೀವನಶೈಲಿಯನ್ನು ಇಡೀ ವಿಶ್ವವೇ ಅನುಸರಿಸಿ, ಆರೋಗ್ಯ ಸುಧಾರಿಸಿಕೊಳ್ಳಬೇಕು. ಆ ಮೂಲಕ ಪರಿಸರ ಪರಿಶುದ್ಧವಾಗಬೇಕು. ಭೂ ಮಾತೆ ಮೇಲೆ ಬೀಳುತ್ತಿರುವ ಒತ್ತಡ ಕಡಿಮೆಯಾಗಬೇಕು. ಮುಂದಿನ ತಲೆಮಾರಿಗೂ ಭೂ ರಮೆ ಹಸಿರಿನಿಂದ ಕಂಗೊಳಿಸಬೇಕು.

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಯೋಗ, ಮೊಳಗಿತು ಓಂಕಾರ; 180 ರಾಷ್ಟ್ರದ ಗಣ್ಯರು ಭಾಗಿ!

ಪರಿಸರದ ಪಂಚ ಭೂತಗಳನ್ನು ಗೌರವಿಸುವುದು, ಪೂಜಿಸುವುದು ಭಾರತೀಯ ಜೀವನಶೈಲಿಯ ಅವಿಭಾಜ್ಯ ಅಂಗ. ದೇವರೆಂದು ಪೂಜಿಸುವುದು ಪ್ರತೀ ಅಣುವೂ ಪರಿಸರವನ್ನು, ಪ್ರಕೃತಿಯನ್ನು ಪೂಜಿಸುವ ಪಾಠ ಹೇಳಿ ಕೊಡುತ್ತೆ. ಅದನ್ನು ಒಪ್ಪಬೇಕು. ಅದು ಒಪ್ಪಿದರೆ ಭೂಮಿಯ ಉಳಿವು, ಎಂಬುವುದು ಸತ್ಯ.

 

American singer Mary Milliben, after singing India’s national anthem, touches Prime Minister Modi’s feet… Earlier Prime Minister of PNG, in a moving gesture, had bowed down in reverence. The world respects PM Modi’s powerful spiritual aura and rootedness in Indian values and… pic.twitter.com/qoA7ALLA3U

— Amit Malviya (@amitmalviya)

Tap to resize

Latest Videos

click me!