
ಫಿಲಿಪೈನ್ಸ್: ಇಂದು ಬೆಳಗಿನ ಜಾವ ಫಿಲಿಪೈನ್ಸ್‌ನ ಹಲವು ಪ್ರದೇಶಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ತೀವ್ರತೆ 7.7 ರಷ್ಟಿತ್ತು. ಫಿಲಿಪೈನ್ಸ್ ದ್ವೀಪದ ಮಿಂಡಾನಾವೊ ಎಂಬ ಪ್ರದೇಶದಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯ ಸರ್ಕಾರ ಸುನಾಮಿಯ ಎಚ್ಚರಿಕೆಯನ್ನು ನೀಡಿದೆ. ಫಿಲಿಪೈನ್ಸ್‌ನಲ್ಲಿ ಒಂದು ಗಂಟೆಯೊಳಗೆ ಮೂರು ಬಾರಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.
ಬೆಳಗ್ಗೆ 5 ಗಂಟೆ 7 ನಿಮಿಷ: 7.7 ತೀವ್ರತೆ ದಾಖಲು
ಬೆಳಗ್ಗೆ 5 ಗಂಟೆ 18 ನಿಮಿಷ: 6.4 ತೀವ್ರತೆ ದಾಖಲು
ಬೆಳಗ್ಗೆ 6 ಗಂಟೆ 25 ನಿಮಿಷ: 6.6 ತೀವ್ರತೆ ದಾಖಲು
ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಿಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಇತ್ತ ಫಿಲಿಫೈನ್ಸ್ ಭೂಕಂಪದ ಬೆನ್ನಲ್ಲೇ ಅಲರ್ಟ್ ಆಗಿರುವ ಜಪಾನ್, ಪೆಸಿಫಿಕ್ ಕರಾವಳಿಯ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ ಎಂದು ಅಲ್ ಜಜೀರಾ ವರದಿ ಪ್ರಕಟಿಸಿದೆ. ಸಮುದ್ರ ತೀರಕ್ಕೆ ತೆರಳದಂತೆ, ಕಡಲದಡಿಯಲ್ಲಿರುವ ಜನರನ್ನು ತ್ವರಿತವಾಗಿ ಸ್ಥಳಾಂತರಿಸುವ ಕೆಲಸ ಸಹ ನಡೆಯುತ್ತಿದೆ. ಸುಮಾರು 1 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಹವಾಮಾನ ಇಲಾಖೆ ಅಂದಾಜಿಸಿದೆ.
Another video captures the Jollibee building collapse in General Santos, Philippines following powerful earthquake. No word on casualties. https://t.co/LJEVl0qTjC pic.twitter.com/DgixNijwoY
— AZ Intel (@AZ_Intel_) June 8, 2026
ಸಾಮಾನ್ಯವಾಗಿ ಪ್ರಬಲ ಭೂಕಂಪ ಉಂಟಾದ್ರೆ ಸುನಾಮಿ ಭೀತಿ ಎದುರಾಗುತ್ತದೆ. ಈ ಹಿನ್ನೆಲೆ ಅಪಾಯಕಾರಿ ಅಲೆಗಳು ಕಡಲಾಚೆಯ ದ್ವೀಪಗಳಿಗೆ ಹಾನಿ ಮಾಡಬಹುದು ಎಂದು ಅಂದಾಜಿಸಲಾಗುತ್ತದೆ. ಮುಂದಿನ ಕೆಲವು ಗಂಟೆಗಳಲ್ಲಿ ಅಪಾಯಲಕಾರಿ ಅಲೆಗಳು ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಕರಾವಳಿ ಪ್ರದೇಶದ ಜನರು ಎಚ್ಚರಿಕೆಯಿಂದಿರಬೇಕು ಮತ್ತು ಸರ್ಕಾರ ನೀಡುವ ಸಲಹೆಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗಿದೆ. ಭಾನುವಾರವಷ್ಟೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭೂಮಿ ಕಂಪಿಸಿತ್ತು. ಭಾರತ, ನೇಪಾಳ, ಚೀನಾ ಮತ್ತು ಭೂತಾನ್‌ನಲ್ಲಿ ಸಂಭವಿಸಿದ ಭೂಕಂಪವು ರಿಕ್ಟರ್ ಮಾಪಕದಲ್ಲಿ 5.3 ರಷ್ಟಿತ್ತು. ಕೇಂದ್ರಬಿಂದು ಭೂತಾನ್ ಆಗಿತ್ತು.
🇵🇭🇯🇵 Footage of a collapsed building in Gensan, Philippines, following the recent earthquake of about 8.0+
In addition to that, tsunami warnings are being issued for the entire region
Source: GeoPolitics Watch (Telegram) / Writer: Oliver https://t.co/tH3iVUeBDM pic.twitter.com/ZKbtxpNHON— Mario Nawfal (@MarioNawfal) June 8, 2026
EARTHQUAKE DURING FLAG CEREMONY
A magnitude 7.8 earthquake shook Mahayahay Elementary School in Malita, Davao Occidental while a flag ceremony was being conducted.#Earthquake #Philippines 🇵🇭😭🫨 pic.twitter.com/WDfDeArEKC— Whale | Decentra👀 (@whale_decentra) June 8, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ