ಲಗೇಜ್‌ ಶುಲ್ಕ ತಪ್ಪಿಸಲು ಒಂದರ ಮೇಲೊಂದು 2.5 ಕೇಜಿ ಬಟ್ಟೆ ಧರಿಸಿದ ಯುವತಿ

Published : Oct 19, 2019, 06:28 PM IST
ಲಗೇಜ್‌ ಶುಲ್ಕ ತಪ್ಪಿಸಲು ಒಂದರ ಮೇಲೊಂದು 2.5 ಕೇಜಿ ಬಟ್ಟೆ ಧರಿಸಿದ ಯುವತಿ

ಸಾರಾಂಶ

ವಿಮಾನದಲ್ಲಿ ಪ್ರಯಾಣಿಸುವಾಗ 7 ಕೆಜಿ ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಬೇಕಾದರೆ ಪ್ರಯಾಣಿಕರು ಅದಕ್ಕೆ ಶುಲ್ಕ ಪಾವತಿಸಬೇಕು.  ಈ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಯುವತಿ ಉಪಯೋಗಿಸಿದ ಪ್ಲ್ಯಾನ್ ಅಂತಿಂತದಲ್ಲ. 

ನವದೆಹಲಿ, [ಅ.19]: ವಿಮಾನ ನಿಲ್ದಾಣದಲ್ಲಿ ನಿಗದಿಗಿಂತ ಹೆಚ್ಚಿನ ತೂಕದ ಲಗೇಜ್‌ ಒಯ್ದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಇದನ್ನು ತಪ್ಪಿಸುವ ಸಲುವಾಗಿ ಫಿಲಿಪ್ಪೀನ್ಸ್‌ನ ಮಹಿಳೆಯೊಬ್ಬಳು ಮೈ ಮೇಲೆ 2.5 ಕೆ.ಜಿ. ತೂಕದ ಬಟ್ಟೆಯನ್ನು ಧರಿಸಿಕೊಂಡಿದ್ದಾಳೆ. 

ಅಚ್ಚರಿಯಾದರೂ ಸತ್ಯ. ವಿಮಾನ ನಿಲ್ದಾಣದಲ್ಲಿ ಕೇವಲ 7 ಕೆ.ಜಿ.ಯಷ್ಟು ತೂಕದ ಲಗೇಜ್‌ ಒಯ್ಯಲು ಅವಕಾಶ ಇದೆ. ಆದರೆ, ಆಕೆಯ ಲಗೇಜ್‌ ತೂಕ 9.5 ಕೆ.ಜಿ. ಇದ್ದಿದ್ದರಿಂದ ಉಳಿದ ಬಟ್ಟೆಯನ್ನು ವಿಮಾನ ನಿಲ್ದಾಣದಲ್ಲೇ ಧರಿಸಿಕೊಂಡು ಶುಲ್ಕ ಕಟ್ಟುವುದರಿಂದ ತಪ್ಪಿಸಿಕೊಂಡಿದ್ದಾಳೆ.

ಸಿದ್ದು-ರವಿ ಟ್ವಿಟ್ ವಾರ್, ಕೈ ಪ್ರಣಾಳಿಕೆ ಕದ್ದೊಯ್ಯಲು ಮೋದಿಗೆ ಮನವಿ: ಅ.19ರ ಟಾಪ್ 10 ಸುದ್ದಿ!

ಜೆಲ್ ರೊಡ್ರಿಗಸ್ ಎನ್ನುವ ಯುವತಿ, ಅಕ್ಟೋಬರ್ 2ರಂದು ಒನ್ ಏರ್ ಲೈನ್ಸ್‌ನಲ್ಲಿ ನಡೆದ ಪ್ರಸಂಗವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಜೆಲ್ ರೊಡ್ರಿಗಸ್ 9 ಕೆಜಿ ತೂಕದ ಲಗೇಜ್ ಹಿಡಿದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿಮಾನಯಾನ ಸಿಬ್ಬಂದಿ, ಲಗೇಜ್ 7 ಕೆಜಿ ಗಿಂತ ಹೆಚ್ಚು ಭಾರವಾಗಿದೆ. ಹೀಗಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಸೂಚಿಸಿದರು. 

ಇದರಿಂದ ಪ್ಲ್ಯಾನ್ ಮಾಡಿದ ಜೆಲ್ ರೊಡ್ರಿಗಸ್,  ಬ್ಯಾಗ್ ನಲ್ಲಿದ್ದ ಬಟ್ಟೆಯನ್ನು ಹೊರ ತೆಗೆದು ಒಂದರಮೇಲೊಂದು  2.5 ಕೆಜಿ ಬಟ್ಟೆ ಹಾಕಿಕೊಂಡಿದ್ದಾರೆ. ಈ ಮೂಲಕ ಬ್ಯಾಗ್ ನ ತೂಕ ಮಾಡಿಕೊಂಡು ಶುಲ್ಕದಿಂದ ಬಚಾವ್ ಆಗಿದ್ದಾರೆ.

ಬಳಿಕ ತಾನು ಹಾಕಿಕೊಂಡಿರುವ ಬಟ್ಟೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಶೇರ್ ಮಾಡಿದ್ದಾರೆ. 

ಕೇವಲ 2 ಕೆಜಿ ಬಟ್ಟೆಗೆ ನಾನು ಹೆಚ್ಚುವರಿಯಾಗಿ ಶುಲ್ಕ ನೀಡಲು ಇಷ್ಟಪಡುವುದಿಲ್ಲ. ಹೀಗಾಗಿ ಈ ರೀತಿಯಾಗಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದು ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಪೇನ್‌ನಲ್ಲಿ ರೈಲು ಅಪಘಾತಕ್ಕೆ 39 ಬಲಿ, 150 ಜನ ಗಂಭೀರ
ಭಾರತದ ರಾಜಕೀಯ ಮೀಸಲು ವ್ಯವಸ್ಥೆಗೆ ದಾವೋಸಲ್ಲಿ ಶಭಾಸ್‌