ಜಪಾನ್‌ ರಾಜವಂಶಕ್ಕೆ 13ರ ಬಾಲಕ ಮುಂದಿನ ಸರದಾರ!

By Web DeskFirst Published Oct 19, 2019, 8:56 AM IST
Highlights

ಜಪಾನ್‌ ರಾಜವಂಶಕ್ಕೆ 13ರ ಬಾಲಕ ಮುಂದಿನ ಸರದಾರ| ಪಟ್ಟಕ್ಕೇರಲು ಇಲ್ಲಿ ಮಹಿಳೆಯರಿಗಿಲ್ಲ ಅವಕಾಶ| 2005 ಜನಿಸಿದ ಹಿಸಹಿಟೋ ಮುಂದಿನ ಸರದಾರ| 1965-2005ರ ವರೆಗೆ ರಾಜ ವಂಶದಲ್ಲಿ ಗಂಡು ಮಕ್ಕಳೇ ಹುಟ್ಟಿಲ್ಲ

ಟೋಕಿಯೋ[ಅ.19]: ವಿಶ್ವದ ಬಲಿಷ್ಠ ರಾಷ್ಟ್ರಗಳ ಪೈಕಿ ಒಂದಗಿರುವ ಜಪಾನ್‌ನ ಪ್ರತಿಷ್ಠಿತ ರಾಜ ವಂಶಕ್ಕೆ 13ರ ಬಾಲಕ ಮುಂದಿನ ಸರದಾರನಾಗುವ ಎಲ್ಲಾ ಸಾಧ್ಯತೆ ಇವೆ. ಸದ್ಯ ಚಕ್ರವರ್ತಿಯಾಗಿರುವ ನರುಹಿಟೋ (59), ಅ.22 ರಂದು ದೇಶ ಹಾಗೂ ವಿದೇಶದ ಗಣ್ಯರ ಮುಂದೆ ತನ್ನ ಸ್ಥಾನಕ್ಕೆ ನೂತನ ಉತ್ತರಾಧಿಕಾರಿಯನ್ನು ಘೋಷಣೆ ಮಾಡಲಿದ್ದು, 13ರ ಹರೆಯದ ರಾಜಕುಮಾರ ಹಿಸಹಿಟೋರನ್ನು ಮುಂದಿನ ಚಕ್ರವರ್ತಿಯನ್ನಾಗಿ ಘೋಷಣೆ ಮಾಡಲಿದ್ದಾರೆ.

ಜಪಾನ್‌ ನಿಯಮಗಳ ಪ್ರಕಾರ ಕೇವಲ ಪುರುಷರಿಗೆ ಮಾತ್ರ ಸಿಂಹಾಸನ ಏರುವ ಅವಕಾಶ ಇದ್ದು, ಸದ್ಯ ಇರುವ ರಾಜಕುಮಾರರ ಪೈಕಿ ಹಿಸಹಿಟೋನೇ ಮಂಚೂಣಿಯಲ್ಲಿದ್ದು, ಆತನೆ ರಾಜಮನೆತನದ ಚುಕ್ಕಾಣಿ ವಹಿಸಲಿದ್ದಾನೆ. ಅಲ್ಲದೇ ಕೇವಲ ಪುರುಷರಿಗೆ ಮಾತ್ರ ಉತ್ತರಾಧಿಕಾರ ಕಟ್ಟುವ ಕಾನೂನು ತೆಗೆದು ಹಾಕುವ ಪ್ರಧಾನಿ ಶಿಂಜೋ ಅಬೇ ಪ್ರಸ್ತಾವನೆಗೂ ಭಾರೀ ವಿರೋಧ ವ್ಯಕ್ತವಾಗಿದೆ. ಹಾಲಿ ಇರುವ ಉತ್ತರಾಧಿಕಾರದ ನಿಯಮಗಳ ಪ್ರಕಾರ 13ರ ಹರೆಯದ ಬಾಲಕನ ಮೇಲೆ ದೊಡ್ಡ ಕುಟುಂಬದ ಹೊರೆ ಹೊತ್ತುಕೊಳ್ಳುವ ಜವಾಬ್ದಾರಿ ಬೀಳಲಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

1965ರ ಬಳಿಕ ವಂಶದಲ್ಲಿ ಯಾವುದೇ ಗಂಡು ಮಕ್ಕಳು ಜನಿಸದ ಕಾರಣ, ನಿಯಮಾವಳಿಗನ್ನು ಬದಲಾಯಿಸಿ ರಾಜಕುಮಾರಿ ಐಕೋಗೆ ಪಟ್ಟಕಟ್ಟುವ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಆದರೆ 2005ರಲ್ಲಿ ಹಿಸಹಿಟೋ ರಾಜಕುಮಾರನ ಜನ್ಮ ಇದಕ್ಕೆಲ್ಲಾ ತೆರೆ ಎಳೆಯಿತು. ರಾಜ ಕುಮಾರನ ಜನನ ಸ್ವರ್ಗದ ಬಯಕೆ ಈಡೇರಿದೆ ಎಂದು ಸಂಪ್ರದಾಯವಾದಿಗಳು ಸಂತಸ ಪಟ್ಟಿದ್ದರು ಎಂದು ಕಿಯೋ ವಿವಿಯ ರಾಜಕೀಯ ಶಾಸ್ತ್ರ ಪ್ರಾಧ್ಯಾಪಕ ಹಿದೆಹಿಕೋ ಕಸಹರಾ ತಿಳಿಸಿದ್ದಾರೆ.

ಸದ್ಯ ಚಕ್ರವರ್ತಿಯಾಗಿರುವ ನುರಹಿಟೋ ಅಣ್ಣನ ಮಗನಾಗಿರುವ ಹಿಸಹಿಟೋ ಇದೇ ಅಗಸ್ಟ್‌ನಲ್ಲಿ ಭೂತಾನ್‌ಗೆ ತನ್ನ ಮೊದಲ ವಿದೇಶ ಪ್ರವಾಸ ಕೈಗೊಂಡಾಗ ವಿಶ್ವ ವೇದಿಕೆಗೆ ರಾಜಕುಮಾರನ ಪಾದಾರ್ಪಣೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.

click me!