ಮೊದಲ ಬಾರಿಗೆ COVD-19 ಸಾವಿನ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಹೆಚ್ಚು!

By Suvarna News  |  First Published Apr 15, 2020, 4:06 PM IST
ಕೊರೋನಾ ಮಹಾಮಾರಿ ತೊಲಗಿಸಲು ಭಾರತದಲ್ಲಿ 2ನೇ ಹಂತದ ಲಾಕ್‌ಡೌನ್ ಆದೇಶ ಜಾರಿಯಾಗಿದೆ. ಅತ್ತ ಅಮೆರಿಕಾ, ಇಟಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಜನ ಕೂಡ ಭಯಬೀತರಾಗಿದ್ದಾರೆ. ಇದೀಗ ಬಹಿರಂಗ ಗೊಂಡಿರುವ ಅಂಕಿ ಅಂಶಗಳನ್ನು ನೋಡಿದರೆ ಭಯದ ಅವಶ್ಯಕತೆ ಇಲ್ಲ. ಕಾರಣ ಇದೀಗ ಗುಣಮುಖರಾದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೆ, ಕೊರೋನಾದಿಂದ ಸಾವನ್ನಪ್ಪಿರುವ ಸಂಖ್ಯೆ ಇಳಿಮುಖವಾಗುತ್ತಿದೆ.

ಫಿಲಿಪೈನ್ಸ್(ಏ.15): ಕೊರೋನಾ ವೈರಸ್‌ಗೆ ಜನ ಆತಂಕಗೊಂಡಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತಿದೆ. ಇದೀಗ ಫಿಲಿಪೈನ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆಗಿಂತ, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಫಿಲಿಪೈನ್ ಆರೋಗ್ಯ ಇಲಾಖೆ ಅಂಕಿ ಅಂಶಗಳನ್ನು ಬಹಿರಂಗ ಪಡಿಸಿದೆ.

ಕೊರೋನಾ ಕಾಟ: ಪ್ರಾಣಿಗಳೂ ಹುಷಾರು ತಪ್ಪಿದ್ರೂ ಕ್ವಾರಂಟೈನ್‌ಗೆ..!

ಫಿಲಿಪೈನ್ಸ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5000 ಗಡಿ ದಾಟಿದೆ. ತ್ವರಿತಗತಿಯಲ್ಲಿ ಕೊರೋನಾ ಫಿಲಿಪೈನ್ಸ್ನಲ್ಲಿ ವ್ಯಾಪಿಸ ತೊಡಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸರ್ಕಾರ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಹೀಗಾಗಿ ಸದ್ಯ ಫಿಲಿಪೈನ್ಸ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5453 ಆಗಿದೆ. ಇನ್ನುಕೊರೋನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 349. ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆಯನ್ನು ಮೀರಿ ಇದೀಗ ಗುಣಮುಖರ ಸಂಖ್ಯೆ ಏರಿಕೆಯಾಗಿದೆ. ಫಿಲಿಪೈನ್ಸ್‌ನಲ್ಲಿ ಕೊರೋನಾದಿಂದ ಗುಣಮುಖರಾದವರ ಸಂಖ್ಯೆ 353ಕ್ಕೇರಿದೆ.

ಫಿಲಿಪೈನ್ಸ್‌ನಲ್ಲಿ ಇಷ್ಟು ದಿನ ಸಾವಿನ ಸಂಖ್ಯೆ ಏರುತ್ತಲೇ ಇತ್ತು. ಇತ್ತ ಗುಣುಖರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಆದರೆ ಸರ್ಕಾರದ ಕಟ್ಟು ನಿಟ್ಟಿನ ಕ್ರಮದಿಂದ ಇದೀಗ ಕೊರೋನಾ ಸೋಂಕು ಹರಡುವು ಪ್ರಮಾಣ ಇಳಿಕೆಯಾಗಿದೆ. ಆದರೆ ಸಾವಿನ ಪ್ರಮಾಣ ಹೋಲಿಕೆ ಮಾಡಿದರೆ ಅಮೆರಿಕಾಗಿಂತಲೂ ಹೆಚ್ಚಿದೆ. ಅಮೆರಿಕಾದಲ್ಲಿ ಕೊರೋನಾ ಸೋಂಕಿತರ ಸಾವಿನ ಪ್ರಮಾಣ  4.27%, ಫಿಲಿಪೈನ್ಸ್‌ನಲ್ಲಿ ಸಾವಿನ ಪ್ರಮಾಣ 6.4 % ಇನ್ನು ಇಟಲಿಯಲ್ಲಿ ಕೊರೋನಾ ಪೀಡಿತರ ಸಾವಿನ ಪ್ರಮಾಣ 12.96% .
 
click me!