ಜಗತ್ತಿಗೆ ಕೊರೋನಾ ಹರಡಿದ ಚೀನಾದಿಂದಲೇ ಔಷಧ ಪತ್ತೆ!

By Kannadaprabha News  |  First Published Apr 15, 2020, 7:58 AM IST
ಜಗತ್ತಿಗೆ ಕೊರೋನಾ ಹರಡಿದ ಚೀನಾದಿಂದಲೇ ಔಷಧ ಪತ್ತೆ!| 2ನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ ಹೋದ ಮೊದಲ ಕೊರೋನಾ ಲಸಿಕೆ

ಬೀಜಿಂಗ್(ಏ.15)‌: ಜಗತ್ತಿಗೆ ಕೊರೋನಾ ವೈರಸ್‌ ಹರಡಿದ ಚೀನಾ ದೇಶವೇ ಇದೀಗ ಈ ಸೋಂಕಿಗೆ ಲಸಿಕೆ ಕಂಡುಹಿಡಿಯುವಲ್ಲೂ ಎಲ್ಲ ದೇಶಗಳಿಗಿಂತ ಮುಂದಿದೆ.

ಚೀನಾದ ಸೇನೆಯ ಅಧೀನದಲ್ಲಿರುವ ಮಿಲಿಟರಿ ಮೆಡಿಸಿನ್‌ ಇನ್‌ಸ್ಟಿಟ್ಯೂಟ್‌ ಕಂಡುಹಿಡಿದಿರುವ ಕೊರೋನಾ ಲಸಿಕೆ ಇದೀಗ 2ನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ ಹೋಗಿದೆ. ಇದು ಮನುಷ್ಯನ ಮೇಲೆ 2ನೇ ಹಂತದಲ್ಲಿ ಪ್ರಯೋಗಿಸಲಾಗುತ್ತಿರುವ ಜಗತ್ತಿನ ಮೊದಲ ಕೊರೋನಾ ಲಸಿಕೆಯಾಗಿದೆ.

2ನೇ ಹಂತದ ಲಾಕ್‌ಡೌನ್ ಮಾರ್ಗಸೂಚಿ ಇಂದು: ಇಲ್ಲಿದೆ ಸಾಧ್ಯತೆಗಳು

ಈ ಔಷಧಿಯ ಮೊದಲ ಹಂತದ ಕ್ಲಿನಿಕಲ್‌ ಟ್ರಯಲ್‌ ಮಾಚ್‌ರ್‍ ಕೊನೆಯಲ್ಲಿ ಮುಗಿದಿತ್ತು. ಈಗ 2ನೇ ಹಂತದ ಟ್ರಯಲ್‌ ಏ.12ರಂದು ಆರಂಭವಾಗಿದೆ. ಇದಕ್ಕಾಗಿ 500 ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಕ್ಲಿನಿಕಲ್‌ ಟ್ರಯಲ್‌ನ ಮೊದಲ ಹಂತದಲ್ಲಿ ಔಷಧಿಯ ಸುರಕ್ಷತೆಯನ್ನು ಪರೀಕ್ಷಿಸಲಾಗುತ್ತದೆ. ಎರಡನೇ ಹಂತದಲ್ಲಿ ದಕ್ಷತೆಯನ್ನು ಪರೀಕ್ಷಿಸಲಾಗುತ್ತದೆ. ಜೆನೆಟಿಕ್‌ ಎಂಜಿನಿಯರಿಂಗ್‌ ವಿಧಾನದಲ್ಲಿ ಲಸಿಕೆ ಕಂಡುಹಿಡಿಯಲಾಗಿದ್ದು, ಇದನ್ನು ತೆಗೆದುಕೊಂಡರೆ ಕೊರೋನಾ ವೈರಸ್‌ ಸೋಂಕು ತಗಲುವುದಿಲ್ಲ.

click me!