ವುಹಾನ್‌ ಬಳಿಕ ಚೀನಾದಲ್ಲಿ ಗಡಿ ಭಾಗದಲ್ಲಿ ಕೊರೋನಾ!

By Kannadaprabha NewsFirst Published Apr 15, 2020, 8:21 AM IST
Highlights

ವುಹಾನ್‌ ಬಳಿಕ ಚೀನಾದಲ್ಲಿ ಗಡಿ ಭಾಗದಲ್ಲಿ ಕೊರೋನಾ!| ಚೀನಾಗೆ ಈಗ ವಿದೇಶಗಳಿಂದ ಕೊರೋನಾ ಭೀತಿ!|  ರಷ್ಯಾದಿಂದ ಕೊರೋನಾ ಭೀತಿ, ಗಡಿ ಬಂದ್‌

ಬೀಜಿಂಗ್‌(ಏ.15): ಕೊರೋನಾ ವೈರಸ್‌ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್‌ ಈಗ ಕೊರೋನಾ ಮುಕ್ತವಾಗಿದೆ. ಆದರೆ ವಿಶ್ವಕ್ಕೇ ಕೊರೋನಾ ಅಂಟಿಸಿದ ಆರೋಪ ಹೊತ್ತಿರುವ ಚೀನಾಗೆ ಈಗ ಇದೇ ವೈರಸ್‌ ವಿದೇಶಗಳಿಂದ ಅಂಟುವ ಭೀತಿ ಶುರುವಾಗಿದೆ. ಹೀಗಾಗಿ ರಷ್ಯಾ ಜತೆಗಿನ ಗಡಿಯನ್ನು ಚೀನಾ ಬಂದ್‌ ಮಾಡಿದೆ.

ರಷ್ಯಾ ಗಡಿಗೆ ಹೊಂದಿಕೊಂಡು ಚೀನಾದ ಹೀಲಾಂಗ್‌ಜಿಯಾಂಗ್‌ ಹಾಗೂ ಒಳ ಮಂಗೋಲಿಯಾ ಇವೆ. ಇಲ್ಲಿನ ಚೀನೀಯರಲ್ಲಿ ಅನೇಕರು ರಷ್ಯಾಗೆ ಹೋಗಿ ಉದ್ಯೋಗ ಮಾಡುತ್ತಿದ್ದಾರೆ. ಆದರೆ ಇವರು ಅಥವಾ ರಷ್ಯನ್ನರು ಈ ಗಡಿಯ ಮೂಲಕ ಚೀನಾಗೆ ಮರಳಿದಾಗ ಅವರಿಂದ ಕೊರೋನಾ ಹರಡುವ ಭೀತಿ ಚೀನಾಗೆ ಇದೆ.

ಜಗತ್ತಿಗೆ ಕೊರೋನಾ ಹರಡಿದ ಚೀನಾದಿಂದಲೇ ಔಷಧ ಪತ್ತೆ!

ಇಂಥ ಭೀತಿ ಬೆನ್ನಲ್ಲೇ ಇದೀಗ, 70000 ಜನಸಂಖ್ಯೆ ಹೊಂದಿರುವ ಸುಯ್‌ಫೆನ್‌ಹೇ ನಗರದಲ್ಲಿ 1000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 243 ಪ್ರಕರಣಗಳು ವಿದೇಶದಿಂದ ಮರಳಿದವರದ್ದೇ ಆಗಿದೆ. ಇನ್ನು 100 ಪ್ರಕರಣಗಳಲ್ಲಿ ಸೋಂಕು ತಗುಲಿದ್ದರೂ, ಅದರ ಲಕ್ಷಣಗಳು ಕಂಡುಬಂದಿರಲಿಲ್ಲ. ತಪಾಸಣೆ ಬಳಿಕವಷ್ಟೇ ಅವರಲ್ಲಿ ಸೋಂಕು ಕಾಣಿಸಿದೆ. ಹೀಗಾಗಿ. ಹೀಗಾಗಿ ರಷ್ಯಾ ಜತೆಗಿನ ಗಡಿ ಬಂದ್‌ ಮಾಡಿರುವ ಚೀನಾ, ಅಲ್ಲಿ ಸಕಲ ವೈದ್ಯಕೀಯ ಸೌಲಭ್ಯವನ್ನು ಒದಗಿಸಿದೆ.

click me!