3ನೇ ಡೋಸ್‌​ನಿಂದ ಏನಾ​ಗು​ತ್ತೆ?: ಫೈಝ​ರ್‌​ನಿಂದ ಅಧ್ಯ​ಯ​ನ!

Published : Feb 26, 2021, 02:25 PM IST
3ನೇ ಡೋಸ್‌​ನಿಂದ ಏನಾ​ಗು​ತ್ತೆ?: ಫೈಝ​ರ್‌​ನಿಂದ ಅಧ್ಯ​ಯ​ನ!

ಸಾರಾಂಶ

ಕೊರೋನಾ ವಿರುದ್ಧ ವಿಶ್ವದ ಬಹುತೇಕ ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆ| 3ನೇ ಡೋಸ್‌​ನಿಂದ ಏನಾ​ಗು​ತ್ತೆ?: ಫೈಝ​ರ್‌​ನಿಂದ ಅಧ್ಯ​ಯ​ನ

ನ್ಯೂ​ಯಾ​ರ್ಕ್(ಫೆ.26): ಕೊರೋನಾ ವಿರುದ್ಧ ವಿಶ್ವದ ಬಹುತೇಕ ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆ 2 ಡೋಸ್‌ನದ್ದಾಗಿದ್ದರೆ, ಮೂರನೇ ಡೋಸ್‌ ನೀಡಿದರೆ ಅದರ ಪರಿಣಾಮ ಹೇಗಿರಲಿದೆ ಎಂಬುದರ ಅಧ್ಯಯನಕ್ಕೆ ಅಮೆರಿಕ ಮೂಲದ ಫೈಝರ್‌ ಕಂಪನಿ ಮುಂದಾಗಿದೆ.

ಕಳೆದ ವರ್ಷ ಲಸಿ​ಕೆಯ ಪರೀ​ಕ್ಷೆ​ಯಲ್ಲಿ ಭಾಗಿ​ಯಾ​ಗಿದ್ದ ಸ್ವಯಂಸೇ​ವ​ಕರ ಪೈಕಿ 144 ಸ್ವಯಂ ಸೇವ​ಕ​ರಿಗೆ ಫೈಝರ್‌ ಲಸಿ​ಕೆಯ 3ನೇ ಡೋಸ್‌ ಅನ್ನು ನೀಡ​ಲಾ​ಗು​ತ್ತದೆ. ಆ ಮೂಲಕ ಅವರ ಆರೋ​ಗ್ಯದ ಮೇಲೆ ಲಸಿಕೆ ಏನೆಲ್ಲಾ ಪರಿ​ಣಾಮ ಬೀರ​ಲಿದೆ ಎಂಬು​ದರ ಬಗ್ಗೆ ಅಧ್ಯ​ಯನ ನಡೆ​ಸ​ಲಾ​ಗು​ತ್ತದೆ ಎಂದು ಅಮೆ​ರಿ​ಕದ ಫೈಝರ್‌ ಮತ್ತು ಜರ್ಮ​ನಿಯ ಬಯೋ​ಎ​ನ್‌​ಟೆಕ್‌ ತಿಳಿ​ಸಿದೆ.

ವಿಶ್ವದಲ್ಲಿ ಕೊರೋನಾ ವಿರುದ್ಧ ಬಳಸಲು ಅನುಮತಿ ಪಡೆದ ಮೊದಲ ಲಸಿಕೆ ಎಂಬ ಹಿರಿಮೆ ಫೈಝರ್‌ ಕಂಪನಿಯದ್ದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?