ಗಂಡನ ಲವ್ವಿಡವ್ವಿ ಕತೆ ಹೆಂಡ್ತಿ ಕಿವಿಗೂದಿದ ಸಾಕು ಗಿಳಿ: ಠಾಣೆ ಮೆಟ್ಟಿಲೇರಿದ ಪತ್ನಿ

Published : Aug 15, 2025, 01:05 PM IST
parrot

ಸಾರಾಂಶ

 ಗಂಡನ ಅಕ್ರಮ ಸಂಬಂಧವನ್ನು ಮನೆಗಿಳಿಯೊಂದು ಹೆಂಡ್ತಿ ಮುಂದೆ ಬಾಯ್ಬಿಟ್ಟ ಘಟನೆ ವೈರಲ್ ಆಗಿದೆ. ಗಿಳಿ ಕೇಳಿಸಿಕೊಂಡ ಪ್ರೇಮ ಸಲ್ಲಾಪವನ್ನು ಹೆಂಡ್ತಿಗೆ ಹೇಳಿದ್ದರಿಂದ ಅನುಮಾನಗೊಂಡ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು.

ಕೆಲವು ಪ್ರಾಣಿಗಳಿಗೆ ಬಾಯೊಂದು ಬರುವುದಿಲ್ಲವಷ್ಟೇ ಆದರೆ ಮನುಷ್ಯ ಒಳ್ಳೆಯವನೋ ಕೆಟ್ಟವನೋ ಎಂಬುದು ಅವುಗಳಿಗೆ ಬಹಳ ಬೇಗ ತಿಳಿದು ಬಿಡುತ್ತದೆ. ಇನ್ನು ಸಾಕಿದಂತಹ ಗಿಳಿಗಳೋ ಮನುಷ್ಯ ಮಾತನಾಡುವುದೆಲ್ಲವನ್ನು ಮಾತನಾಡಿ ಬಿಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಗಿಳಿಯೊಂದು ಗಂಡನ ಅಟವನ್ನು ಹೆಂಡ್ತಿಗೆ ಹೇಳಿದ್ದು ಹೆಂಡ್ತಿ ಮಾತು ಕೇಳಿದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲನ್ನು ಏರಿದ್ದರು. ಆದರೆ ಸರಿಯಾದ ಸಾಕ್ಷ್ಯ ಸಿಗದೇ ಹೋಗಿದ್ದರಿಂದಾಗಿ ಗಂಡ ದೊಡ್ಡ ಶಿಕ್ಷೆಯಿಂದ ಪಾರಾಗಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಗಲ್ಫ್ ರಾಷ್ಟ್ರ ದುಬೈನಲ್ಲಿ 2016ರಲ್ಲಿ ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿ ಸಂಚಲನ ಸೃಷ್ಟಿಸಿದೆ.

ಆಗಿದ್ದೇನು?

ಗಂಡ ಮನೆಕೆಲಸದವನ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಆಕೆಯ ಜೊತೆ ಮಾತನಾಡುತ್ತಿದ್ದ ಪ್ರೇಮ ಸಲ್ಲಾಪದ ಮಾತುಗಳನ್ನು ಮನೆಯಲ್ಲಿದ್ದ ಗಿಳಿ ಕೇಳಿಸಿಕೊಂಡು ಆತನ ಹೆಂಡ್ತಿ ಬಂದ ಮೇಲೆ ಅದೇ ರೀತಿ ಆ ಪದಗಳನ್ನು ಹೇಳ್ತಿತಂತೆ. ಮೊದಲಿಗೆ ಸುಮ್ಮನಾಗಿದ್ದ ಹೆಂಡ್ತಿಗೆ, ತಾನು ಸಾಕಿದ ಗಿಳಿ ಮತ್ತೆ ಮತ್ತೆ ಈ ರೀತಿ ಫ್ಲರ್ಟ್ ಮಾಡುವಂತೆ ಮಾತನಾಡುವುದನ್ನು ಕೇಳಿ ಗಂಡನ ಮೇಲೆ ಅನುಮಾನ ಬಂದಿತ್ತು. ಏಕೆಂದರೆ ತನ್ನ ಗಂಡನ ಗುಣನಡತೆಯ ಬಗ್ಗೆ ಆಕೆಗೆ ಮೊದಲೇ ಅನುಮಾನವಿತ್ತು. ಹೀಗಾಗಿ ಆಕೆ ಈ ಗಿಳಿಯ ಮಾತುಗಳನ್ನು ಕೇಳಿದ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು ಎಂದು ಆಗಿನ ಅರಬ್ ಟೈಮ್ಸ್ ವರದಿ ಮಾಡಿತ್ತು.

ಆಮೇಲೇನಾಯ್ತು?

ಹೀಗೆ ಗಿಳಿಯ ಮಾತು ಕೇಳಿದ ಪತ್ನಿ ಕುವೈತ್‌ನ ಹವಲ್ಲಿ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ದಾಖಲಿಸಿದ್ದಳು. ತಾನು ಕಚೇರಿಯಿಂದ ನಿಗದಿತ ಸಮಯಕ್ಕೂ ಮೊದಲೇ ಬಂದಿದ್ದಾಗಲೆಲ್ಲಾ ನನ್ನ ಗಂಡನ ಆಶ್ಚರ್ಯಗೊಳ್ಳುತ್ತಿದ್ದ ಹಾಗೂ ಆತ ಭಯಪಟ್ಟಂತೆ ಕಾಣುತ್ತಿದ್ದ. ಆತನಿಗೆ ಮನೆ ಕೆಲಸದಾಕೆಯ ಜೊತೆ ಸಂಬಂಧವಿದೆ ಎಂದು ದೂರು ನೀಡಿದ್ದಳು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಸಾಕ್ಷ್ಯಗಳಿಲ್ಲ, ಸಾಕ್ಷ್ಯಗಳಿಲ್ಲದೇ ಇದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಷನ್ ಅಧಿಕಾರಿಗಳು ಹೇಳಿದರು. ಏಕೆಂದರೆ ಈ ಗಿಳಿ ಮನುಷ್ಯರು ಮಾತನಾಡಿದ್ದನ್ನೇ ಕೇಳಿಸಿಕೊಂಡು ಪುನರಾವರ್ತನೆ ಮಾಡಿರಬಹುದು ಎಂದು ಹೇಗೆ ಹೇಳಲು ಸಾಧ್ಯ ಏಕೆಂದರೆ ಈ ಗಿಳಿ ಟಿವಿ ಅಥವಾ ರೇಡಿಯೋಗಳ ಮೂಲಕವೂ ಸಂಭಾಷಣೆ ಕೇಳಿ ಇದೇ ರೀತಿ ಮಾತನಾಡಿರಬಹುದಲ್ಲ ಎಂದು ಅವರು ಮಹಿಳೆಗೆ ಹೇಳಿದ್ದಾಗಿ ವರದಿಯಾಗಿತ್ತು.

ಗಲ್ಫ್‌ ರಾಷ್ಟ್ರಗಳಲ್ಲಿ ಅಕ್ರಮ ಸಂಬಂಧ, ವ್ಯಾಭಿಚಾರ ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣಗಳಲ್ಲಿ ಆರೋಪ ಸಾಬೀತಾದಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಆದರೆ 2016ರ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ವೈರಲ್ ಆಗ್ತಿದ್ದು, ಜನ ಸಾಕಷ್ಟು ಹಾಸ್ಯಮಯ ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ವಾವ್ ಅದೆಷ್ಟು ಒಳ್ಳೆಗಿಳಿ ಎಂದು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ಆತ ಗಿಳಿಗೆ ಸರಿಯಾಗಿ ಆಹಾರ ಕೊಟ್ಟಿಲ್ಲವೆಂದೆನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಆತ ಆ ಗಿಳಿನ್ನು ಸಾಯಿಸಿರಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಯ್ಯೋ ದೇವ್ರ ಇಂದಿನ ದಿನಗಳಲ್ಲಿ ಪ್ರಾಣಿಗಳನ್ನು ಕೂಡ ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸ್ಟೋರಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!