ಭಾರತೀಯ ಪ್ರಯಾಣಿಕನ ರಂಪಾಟಕ್ಕೆ ವಿಮಾನ ತುರ್ತು ಭೂಸ್ಪರ್ಶ; 10 ವರ್ಷ ಜೈಲು ಶಿಕ್ಷೆ ಭೀತಿ!

By Suvarna NewsFirst Published Mar 6, 2021, 8:59 PM IST
Highlights

ಏರ್ ಫ್ರಾನ್ಸ್ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಭಾರತೀಯ ಪ್ರಯಾಣಿಕನ ರಂಪಾಟ ಆರಂಭಗೊಡಿದೆ. ಹೊಡೆದಾಟ ಆರಂಭವಾಗುತ್ತಿದ್ದಂತೆ ಪೈಲೆಟ್ ಅನಿವಾರ್ಯವಾಗಿ ಭೂಸ್ಪರ್ಶ ಮಾಡಲಾಗಿದೆ. ಇದೀಗ ಭಾರತೀಯ ಪ್ರಯಾಣಿಕನಿಗೆ 10 ವರ್ಷ ಜೈಲು ಶಿಕ್ಷೆ ಭೀತಿ ಎದುರಾಗಿದೆ.

ಸೊಫಿಯಾ(ಮಾ.06):  ಪ್ಯಾರಿಸ್‌ನಿಂದ ದೆಹಲಿಗೆ ಹೊರಟ್ಟಿದ್ದ ಏರ್‌ಫ್ರಾನ್ಸ್ ವಿಮಾನ ತರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಪ್ಯಾರಿಸ್‌ನಿಂದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಭಾರತೀಯ ಪ್ರಯಾಣಿಕನೋರ್ವ ರಂಪಾಟ ಆರಂಭಿಸಿದ್ದಾನೆ. ಈತನ ಹುಚ್ಚಾಟ ಹೆಚ್ಚಾಗುತ್ತಿದ್ದಂತೆ ಇತರ ಪ್ರಯಾಣಿಕರಿಗೂ ಆತಂಕ ಎದುರಾಗಿದೆ. ಹೀಗಾಗಿ ಪೈಲೆಟ್ ಬಲ್ಗೇರಿಯಾದ ಸೋಫಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ.

ಓರ್ವ ಪ್ರಯಾಣಿಕ ಸಾವು; ಭಾರತದ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ!.

ಸಹ ಪ್ರಯಾಣಿಕರೊಂದಿಗೆ ಜಗಳ ಮಾಡಿದ್ದಾನೆ, ವಿಮಾನ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಕಾಕ್‌ಪಿಟ್ ಬಾಗಿಲಿಗೆ ಗುದ್ದುವ ಮೂಲಕ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಿಸಿದ್ದಾನೆ. ತಕ್ಷಣವೇ ಪೈಲೈಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. 

ಸೋಫಿಯಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಭಾರತೀಯ ಪ್ರಯಾಣಿಕನ ವಶಕ್ಕೆ ಪಡೆದಿದ್ದಾರೆ. ವಿಮಾನ ಸುರಕ್ಷತೆಗೆ ಅಡ್ಡಿ ಮಾಡಿದ ಪ್ರಯಾಣಿಕ ಇದೀಗ ವಿಚಾರಣೆ ಎದುರಿಸುತ್ತಿದ್ದಾನೆ. ವಿಮಾನ ಸುರಕ್ಷತೆಗೆ ಅಡ್ಡಿಪಡಿಸಿರುವುದು ಸಾಬೀತಾದರೆ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ.

click me!