ಚೀನಾ ರಕ್ಷಣಾ ಬಜೆಟ್‌ 15 ಲಕ್ಷ ಕೋಟಿಗೇರಿಕೆ: ಭಾರತದ 3 ಪಟ್ಟು ಹೆಚ್ಚು!

By Suvarna NewsFirst Published Mar 6, 2021, 11:01 AM IST
Highlights

ಭಾರತ ಮತ್ತು ಚೀನಾ ಪೂರ್ವ ಲಡಾಖ್‌ ಗಡಿಯಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ಬಲ| ಚೀನಾ ರಕ್ಷಣಾ ಬಜೆಟ್‌ 15 ಲಕ್ಷ ಕೋಟಿಗೇರಿಕೆ: ಭಾರತದ 3 ಪಟ್ಟು ಹೆಚ್ಚು!

ಬೀಜಿಂಗ್‌(ಮಾ.೦೬): ಭಾರತ ಮತ್ತು ಚೀನಾ ಪೂರ್ವ ಲಡಾಖ್‌ ಗಡಿಯಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ಬಲಗೊಳಿಸುತ್ತಾ ಪರಸ್ಪರ ಸ್ಪರ್ಧೆಗಿಳಿದಿರುವ ಬೆನ್ನಲ್ಲೇ, ಶುಕ್ರವಾರ ಇದೇ ಮೊದಲ ಬಾರಿಗೆ ಚೀನಾ ತನ್ನ ರಕ್ಷಣಾ ಬಜೆಟ್‌ನ್ನು 15 ಲಕ್ಷ ಕೋಟಿಗೆ ಏರಿಸಿದೆ.

ಇದು ಭಾರತದ ರಕ್ಷಣಾ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಪ್ರಸಕ್ತ ವರ್ಷ ಚೀನಾ ತನ್ನ ರಕ್ಷಣಾ ಬಜೆಟ್‌ ಗಾತ್ರವನ್ನು ಶೇ.6.8ರಷ್ಟುಹೆಚ್ಚಿಸಿ 15 ಲಕ್ಷ ಕೋಟಿ ರು. ವ್ಯಯ ಮಾಡಲು ನಿರ್ಧರಿಸಿದೆ.

ಈ ಮೂಲಕ ಚೀನಾ ಕಳೆದ 6 ವರ್ಷಗಳಿಂದ ರಕ್ಷಣಾ ಬಜೆಟ್‌ನಲ್ಲಿ ಒಂದಂಕಿಯ ಬೆಳವಣಿಗೆಯನ್ನು ಕಾಯ್ದುಕೊಂಡಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಅಮೆರಿಕ ವಾರ್ಷಿಕ 55 ಲಕ್ಷ ಕೋಟಿ ರು.ಗಳನ್ನು ರಕ್ಷಣೆಗೆ ವ್ಯಯಿಸುತ್ತದೆ.

click me!