ಹೇನು ಕಚ್ಚಿಯೇ ಸತ್ತಳು 12ರ ಹುಡುಗಿ: ಪೋಷಕರು ಜೈಲಿಗೆ

By Suvarna NewsFirst Published Jan 13, 2021, 10:32 AM IST
Highlights

ಅತಿಯಾದ ಹೇನಿನ ಸಮಸ್ಯೆ | 12ರ ಬಾಲಕಿ ಹೃದಯಾಘಾತದಿಂದ ಸಾವು | ಪೋಷಕರು ಜೈಲಿಗೆ

12 ವರ್ಷದ ಮಗಳ ಕೊಲೆ ಆರೋಪ ಎದುರಿಸುತ್ತಿರುವ ಪೋಷಕರಿಗೆ ಜಾಮೀನು ನೀಡಲಾಗಿದೆ. ಮೇರಿ ಕ್ಯಾಥರೀನ್ ಹಾರ್ಟನ್ ಹಾಗೂ ಜಾನ್ ಜಾಸೆಫ್  ಯೋಸ್ವೈಕ್‌ಗೆ ತಲಾ ಯುಎಸ್‌ಡಿ 100,000 ಜಾಮೀನು ನೀಡಲಾಗಿದೆ. ವಿಲ್ಕಿನ್ಸನ್‌ನಲ್ಲಿ ಇಬ್ಬರೂ ಜೈಲಿನಲ್ಲಿದ್ದರು.

ಇಬ್ಬರೂ ಚೈಲ್ಡ್ ಕ್ರುಯಾಲ್ಟಿ ಹಾಗೂ ಸೆಕೆಂಡ್ ಡಿಗ್ರಿ ಕೊಲೆಯ ಆರೋಪ ಎದುರಿಸುತ್ತಿದ್ದಾರೆ. 12ರ ಬಾಲೆ ಕೈಟ್ಲಿನ್ ಗಂಭೀರವಾದ ಹೇನಿನ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದಳು. ಈ ಸಮಸ್ಯೆ ಬಹಳ ವರ್ಷಗಳಿಂದ ಇದ್ದಂತಿದೆ ಎಂದೂ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಚೀನಾ ಕೊರೋನಾ ಕೇಂದ್ರಕ್ಕೆ WHO ತಂಡ, ಸಿಂಗಾಪುರದಿಂದ ನೇರ ವುಹಾನ್‌ಗೆ ಪ್ರಯಾಣ!

ಕೈಟ್ಲಿನ್‌ ಶವಪರೀಕ್ಷೆ ಫಲಿತಾಂಶಗಳು ಮತ್ತು ವೈದ್ಯಕೀಯ ಪರೀಕ್ಷೆಗಳ ರಿಸಲ್ಟ್‌ಗಾಗಿ ಪ್ರಾಸಿಕ್ಯೂಟರ್‌ಗಳು ಇನ್ನೂ ಕಾಯುತ್ತಿದ್ದಾರೆ ಎಂದು ಸಹಾಯಕ ಜಿಲ್ಲಾ ವಕೀಲ ಬ್ರೆಂಟ್ ಕೊಕ್ರನ್ ತಿಳಿಸಿದ್ದಾರೆ.

ಜಾರ್ಜಿಯಾ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ ವಿಶೇಷ ಏಜೆಂಟ್ ರಿಯಾನ್ ಹಿಲ್ಟನ್, ಕೈಟ್ಲಿನ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ದಾಖಲೆಗಳು ತೋರಿಸುತ್ತವೆ ಎಂದು ತಿಳಿಸಿದ್ದಾರೆ. ತೀವ್ರ ರಕ್ತಹೀನತೆಯೂ ಬಾಲಕಿಯ ಸಾವಿಗೆ ಇನ್ನೊಂದು ಕಾರಣ ಎಂದಿದ್ದಾರೆ.

ಗುಂಡು ಹಾರಿಸುವ ಕುರಿತು ಹೇಳಲೋಗಿ ಪತ್ನಿಯನ್ನೇ ಕೊಂದ ಕುಡುಕ ಗಂಡ..!

ತನ್ನ ಸಾವಿನ ಸಮಯದಲ್ಲಿ, ಕೈಟ್ಲಿನ್ ಜಿಬಿಐ ಕಚೇರಿಯು ಹಿಂದೆಂದೂ ನೋಡದ ಅತ್ಯಂತ ತೀವ್ರವಾದ ಪರಾವಲಂಬಿ ಹೇನುಗಳನ್ನು ಹೊಂದಿದ್ದಳು. ಇದು ಕನಿಷ್ಠವೆಂದರೂ ಮೂರು ವರ್ಷಗಳ ಕಾಲ ಮುಂದುವರಿದಿರಬಹುದು ಎನ್ನಲಾಗಿದೆ.

ಹೇನು ಕಚ್ಚುವಿಕೆಯು ಬಾಲಕಿಯ ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆ ಮಾಡುತ್ತದೆ. ಇದು ರಕ್ತಹೀನತೆಗೆ ಕಾರಣವಾಗುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

click me!