ಚೀನಾ ಕೊರೋನಾ ಕೇಂದ್ರಕ್ಕೆ WHO ತಂಡ, ಸಿಂಗಾಪುರದಿಂದ ನೇರ ವುಹಾನ್‌ಗೆ ಪ್ರಯಾಣ!

By Suvarna News  |  First Published Jan 13, 2021, 9:31 AM IST

ವಿಶ್ವಾದ್ಯಂತ ಸುಮಾರು 20 ಲಕ್ಷ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ | ಚೀನಾ ಕೊರೋನಾ ಕೇಂದ್ರಕ್ಕೆ ನಾಳೆ ಡಬ್ಲ್ಯುಎಚ್‌ಒ ತಂಡ| ಸಿಂಗಾಪುರದಿಂದ ನೇರ ವುಹಾನ್‌ಗೆ ಪ್ರಯಾಣ


ಬೀಜಿಂಗ್‌(ಜ.13): ವಿಶ್ವಾದ್ಯಂತ ಸುಮಾರು 20 ಲಕ್ಷ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್‌ನ ಮೂಲವನ್ನು ಶೋಧಿಸುವ ಉದ್ದೇಶದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ 10 ತಜ್ಞ ವೈದ್ಯರ ತಂಡವೊಂದು ಗುರುವಾರ ಚೀನಾಕ್ಕೆ ಭೇಟಿ ನೀಡಲಿದೆ. ಚೀನಾದಲ್ಲಿ ಮೊದಲು ಕೊರೋನಾ ಕಾಣಿಸಿಕೊಂಡ ವುಹಾನ್‌ ಪ್ರಾಂತ್ಯಕ್ಕೇ ಈ ತಂಡ ಸಿಂಗಾಪುರದಿಂದ ನೇರವಾಗಿ ತೆರಳಲಿದೆ.

ಡಬ್ಲ್ಯುಎಚ್‌ಒ ತಂಡ ರಾಜಧಾನಿ ಬೀಜಿಂಗ್‌ಗೆ ಆಗಮಿಸಿ ಅಲ್ಲಿಂದ ವುಹಾನ್‌ಗೆ ಭೇಟಿ ನೀಡುವ ನಿರೀಕ್ಷೆ ಇತ್ತು. ಆದರೆ ಬೀಜಿಂಗ್‌ ಸುತ್ತಮುತ್ತ ಕೊರೋನಾ ವೈರಸ್‌ ಸೋಂಕು ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವುಹಾನ್‌ಗೆ ತಂಡ ನೇರ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

Latest Videos

undefined

ಸೋಂಕು ವಿಶ್ವವ್ಯಾಪಿಯಾದರೂ ಕೊರೋನಾ ಮೂಲವನ್ನು ಡಬ್ಲ್ಯುಎಚ್‌ಒ ಶೋಧಿಸಿಲ್ಲ. ಚೀನಾ ಪರ ನಿಲವನ್ನು ಈ ಅಂತಾರಾಷ್ಟ್ರೀಯ ಸಂಸ್ಥೆ ತಳೆದಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಜ.14ರಂದು ಸಿಂಗಾಪುರದಿಂದ ನೇರವಾಗಿ ಡಬ್ಲ್ಯುಎಚ್‌ಒ ತಂಡ ವುಹಾನ್‌ಗೆ ಭೇಟಿ ನೀಡಲಿದೆ. ಈ ತಂಡ ಕ್ವಾರಂಟೈನ್‌ಗೆ ಒಳಗಾಗಲಿದೆಯೇ? ಎಲ್ಲೆಲ್ಲಿಗೆ ಭೇಟಿ ನೀಡಲಿದೆ? ಎಷ್ಟುದಿನ ಇರಲಿದೆ ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್‌ ತಿಳಿಸಿದ್ದಾರೆ.

click me!