ನೀರ್ಗಲ್ಲು ಕರಗದಂತೆ ತಡೆಗೆ ಬ್ಲಾಂಕೆಟ್‌ ಬಳಕೆ!

By Suvarna News  |  First Published Jan 13, 2021, 9:57 AM IST

ಅತಿ ವೇಗದಲ್ಲಿ ಕರಗುತ್ತಿರುವ ನೀರ್ಗಲ್ಲುಗಳ ಪೈಕಿ ಒಂದಾದ ಸಮುದ್ರ ಮಟ್ಟದಿಂದ 5 ಕಿ.ಮೀ. ಎತ್ತರದಲ್ಲಿರುವ ನೈಋುತ್ಯ ಚೀನಾದ ಡಗು| ನೀರ್ಗಲ್ಲು ಕರಗದಂತೆ ತಡೆಗೆ ಬ್ಲಾಂಕೆಟ್‌ ಬಳಕೆ!|  ನೈಋುತ್ಯ ಚೀನಾದ ಡಗು ನೀರ್ಗಲ್ಲಿನಲ್ಲಿ ಪ್ರಯೋಗ


ಬೀಜಿಂಗ್(ಜ.13)‌: ಸಾಮಾನ್ಯವಾಗಿ ಚಳಿಯಿಂದ ರಕ್ಷಣೆಗೆ ಹಾಗೂ ದೇಹವನ್ನು ಬೆಚ್ಚಗೆ ಇರಿಸುವುದಕ್ಕಾಗಿ ಬ್ಲಾಂಕೆಟ್‌ (ಹೊದಿಕೆ)ಗಳನ್ನು ಬಳಕೆ ಮಾಡುತ್ತೇವೆ. ಆದರೆ, ಚೀನಾದ ವಿಜ್ಞಾನಿಗಳು ಬ್ಯಾಂಕೆಟ್‌ಗಳನ್ನು ಬಳಸಿ ನೀರ್ಗಲ್ಲು ಕರಗುವುದನ್ನು ತಡೆಯವಲ್ಲಿ ಯಶಸ್ವಿಯಾಗಿದ್ದಾರೆ.

ಅತಿ ವೇಗದಲ್ಲಿ ಕರಗುತ್ತಿರುವ ನೀರ್ಗಲ್ಲುಗಳ ಪೈಕಿ ಒಂದಾದ ಸಮುದ್ರ ಮಟ್ಟದಿಂದ 5 ಕಿ.ಮೀ. ಎತ್ತರದಲ್ಲಿರುವ ನೈಋುತ್ಯ ಚೀನಾದ ಡಗು ನೀರ್ಗಲ್ಲಿನಲ್ಲಿ ಚೀನಾ ವಿಜ್ಞಾನಿಗಳ ತಂಡ ಈ ಪ್ರಯೋಗ ಕೈಗೊಂಡಿದೆ. ಕಳೆದ ಆಗಸ್ಟ್‌ನಲ್ಲಿ ನೀರ್ಗಲ್ಲಿನ 500 ಚದರ್‌ ಮೀಟರ್‌ ಪ್ರದೇಶಕ್ಕೆ ಬ್ಲಾಂಕೆಟ್‌ಗಳನ್ನು ಹೊದೆಸಿ ಐದು ತಿಂಗಳ ಕಾಲ ಪ್ರಯೋಗ ಕೈಗೊಳ್ಳಲಾಗಿತ್ತು. ಈ ವೇಳೆ ಬ್ಲಾಂಕೆಟ್‌ಗಳು ಹಾಸಿದ ಜಾಗಕ್ಕೆ ಹಿಮ ಕರಗದೇ ಹಾಗೇ ಉಳಿದಿದ್ದು, ಉಳಿದ ಕಡೆಗಳಲ್ಲಿ ಹಿಮ ಕರಗಿರುವುದು ಕಂಡುಬಂದಿದೆ. ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಬ್ಲಾಂಕೆಟ್‌ಗಳನ್ನು ಹಾಸಿದ ಕಡೆ ನೀರ್ಗಲ್ಲುಗಳು 3.3 ಅಡಿಯಷ್ಟುಎತ್ತರವಾಗಿವೆ.

Tap to resize

Latest Videos

ಪರಿಸರ ಸ್ನೇಹಿ ಬಟ್ಟೆಯಿಂದ ಮಾಡಿದ ಜಿಯೋ ಟೆಕ್ಸ್‌ಟೈಲ್‌ ಬ್ಲಾಂಕೆಟ್‌ಗಳು ಸೂರ್ಯನ ವಿಕಿರಣಗಳನ್ನು ತಡೆಯಬಲ್ಲ ಹಾಗೂ ನೀರ್ಗಲ್ಲಿನ ಮೇಲ್ಮೈ ಬಿಸಿ ಆಗದಂತೆ ತಡೆಯುವ ಸಾಮರ್ಥ್ಯ ಹೊಂದಿವೆ. ಬ್ಲಾಂಕೆಟ್‌ಗಳು ಹಾಸಿದ ಜಾಗಕ್ಕೆ ಹಿಮ ಕರಗದೇ ಹಾಗೇ ಉಳಿದುಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹೀಗಾಗಿ ಈ ಪ್ರಯೋಗ ತಾಪಮಾನ ಏರಿಕೆಯಿಂದಾಗಿ ಕರಗುತ್ತಿರುವ ನೀರ್ಗಲ್ಲುಗಳ ರಕ್ಷಣೆಗೆ ಸಹಾಯವಾಗಲಿದೆ.

click me!