Shocking! ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್‌ ಲಾಕ್‌! ನೆರೆಯ ದೇಶದಲ್ಲಿ ಇದೆಂತಾ ದುಸ್ಥಿತಿ..

By Santosh Naik  |  First Published Apr 29, 2023, 7:29 PM IST

ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ವರದಿಗಳು ಬಹಿರಂಗಪಡಿಸಿವೆ. ಶವದೊಂದಿಗೆ ಸೆಕ್ಸ್‌ ನಡೆಸುವ ಅನಾಚಾರಕ್ಕೆ ನೆಕ್ರೋಫಿಲಿಯಾ ಎಂದು ಹೇಳುತ್ತಾರೆ


ಇಸ್ಲಾಮಾಬಾದ್‌ (ಏ.29): ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದರ ಬೆನ್ನಲ್ಲಿಯೇ ಪಾಕಿಸ್ತಾನದಲ್ಲಿ ಮಾನವ ಜಗತ್ತಿಗೆ ಶಾಕಿಂಗ್‌ ಎನಿಸುವಂಥ ಟ್ರೆಂಡ್‌ ಸೃಷ್ಟಿಯಾಗುತ್ತಿದೆ. ನೆರೆಯ ದೇಶದಲ್ಲಿ ಪಾಲಕರು ತಮ್ಮ ಮಗಳ ಸಮಾಧಿಗಳಿಗೆ ಪ್ಯಾಡ್‌ ಲ್ಯಾಕ್ಸ್‌ (ಕಬ್ಬಿಣದ ಗೇಟ್‌) ಹಾಕಿ ಸಂರಕ್ಷಿಸಿ ಇಡುತ್ತಿದ್ದಾರೆ. ಸಮಾಧಿಯಿಂದ ತಮ್ಮ ಮಗಳ ಶವಗಳನ್ನು ತೆಗೆದು ರೇಪ್‌ ಮಾಡಬಹುದು ಎನ್ನುವ ಎಚ್ಚರಿಕೆಯಲ್ಲಿ ಪಾಲಕರು ಸಮಾಧಿಗಳಿಗೆ ಗೇಟ್‌ ಹಾಕುತ್ತಿದ್ದಾರ. ಶವಗಳ ಜೊತೆ ಸೆಕ್ಸ್‌ ನಡೆಸುವ ಪ್ರಕರಣಗಳಿಗೆ ನೆಕ್ರೋಫಿಲಿಯಾ ಎಂದು ಹೇಳಲಾಗುತ್ತದೆ. ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ  ಪ್ರಕರಣಗಳು ಏರಿಕೆ ಆಗುತ್ತಿರುವ ಬಗ್ಗೆ ಸೋಶಿಯಲ್‌ ಮೀಡಿಯಾ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದ ಮಾಜಿ ನಾಸ್ತಿಕ ಹ್ಯಾರಿಸ್‌ ಸುಲ್ತಾನ್‌ ಎನ್ನುವ ವ್ಯಕ್ತಿ ಹಾಗೂ  "ದಿ ಕರ್ಸ್ ಆಫ್ ಗಾಡ್, ವೈ ಐ ಲೆಫ್ಟ್‌ ಇಸ್ಲಾಂ' ಪುಸ್ತಕದ ಲೇಖಕ , ಇಂತಹ ಕೆಟ್ಟ ಕೃತ್ಯಗಳಿಗೆ ಕಠಿಣ ಇಸ್ಲಾಮಿ ಸಿದ್ಧಾಂತವನ್ನು ದೂಷಣೆ ಮಾಡಿದ್ದಾರೆ. "ಪಾಕಿಸ್ತಾನವು ಅಂತಹ ಅತೀವ ಲೈಂಗಿಕ ಆಸಕ್ತಿಯ, ಲೈಂಗಿಕವಾಗಿ ಹತಾಶೆಗೊಂಡ ಸಮಾಜವನ್ನು ಸೃಷ್ಟಿಸಿದೆ, ಜನರು ಈಗ ತಮ್ಮ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಕಬ್ಬಿಣದ ಗೇಟ್‌ ಹಾಕಿ ಬೀಗ ಹಾಕುತ್ತಿದ್ದಾರೆ. ನೀವು ಬುರ್ಖಾವನ್ನು ಅತ್ಯಾಚಾರದೊಂದಿಗೆ ಜೋಡಿಸಿದಾಗ ಅದು ನಿಮ್ಮನ್ನು ಸಮಾಧಿಗೆ ಹಿಂಬಾಲಿಸುತ್ತದೆ" ಎಂದು ಸುಲ್ತಾನ್ ಬುಧವಾರ ಟ್ವೀಟ್ ಮಾಡಿದ್ದಾರೆ.

ತಮ್ಮ ಹೆಣ್ಣುಮಕ್ಕಳು ಸತ್ತಾಗಲಾದರೂ ಸಮಾಧಾನವಾಗಿರಲಿ ಎನ್ನುವ ದೃಷ್ಟಿಯಿಂದ ಅವರ ಪಾಲಕರು ಈ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕೆಲವು ಕಾಮ ಪಿಶಾಚಿಗಳು ತಮ್ಮ ಲೈಂಗಿಕ ಬಯಕೆ ಈಡೇರಿಸಿಕೊಳ್ಳಲು ಶವದೊಂದಿಗೆ ಸೆಕ್ಸ್‌ ನಡೆಸುತ್ತಿದ್ದಾರೆ. ಇಂಥ ಪ್ರಕರಣಗಳು ಏರಿಕೆ ಆಗುತ್ತಿರುವ ದೃಷ್ಟಿಯಿಂದ ತಮ್ಮ ಹೆಣ್ಣುಮಕ್ಕಳನ್ನು ಸಮಾಧಿಯನ್ನು ರಕ್ಷಿಸಿಕೊಳ್ಳಲು ಈ ರೀತಿಯ ನಿರ್ಧಾರ ಮಾಡಿದ್ದಾರೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.

ನೆಕ್ರೋಫಿಲಿಯಾ ಏರಿಕೆ: ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಪ್ರಕರಣಗಳು ಹೆಚ್ಚುತ್ತಿವೆ. ಕುಟುಂಬ-ಆಧಾರಿತ ಮೌಲ್ಯಗಳ ಬಗ್ಗೆ ಹೆಮ್ಮೆ ಪಡುವ ದೇಶದಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾಗುತ್ತಾಳೆ. ಆದರೆ ಹೆಣ್ಣಿನ ಸಮಾಧಿಯ ಮೇಲೆ ಬೀಗ ಹಾಕಿರುವ ಹೃದಯ ವಿದ್ರಾವಕ ದೃಶ್ಯವು ಇಡೀ ಸಮಾಜಕ್ಕೆ ನಾಚಿಕೆಯಿಂದ ತಲೆ ತಗ್ಗಿಸಲು ಸಾಕು. ತಮ್ಮನ್ನು ತಾವು ಗೌರವಯುತ ವ್ಯಕ್ತಿಗಳು ಎಂದು ಹೇಳಿಕೊಳ್ಳುವವರಿಗೆ ಇದನ್ನು ನೋಡುವ ಧೈರ್ಯವಿಲ್ಲ ಎಂದು ಡೈಲಿ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಬರೆದಿದೆ.

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಸಾಜಿದ್ ಯೂಸಫ್ ಶಾ ಈ ಬಗ್ಗೆ ಬರೆದಿದ್ದು "ಪಾಕಿಸ್ತಾನ ಸೃಷ್ಟಿಸಿದ ಸಾಮಾಜಿಕ ಪರಿಸರವು ಲೈಂಗಿಕ ದೌರ್ಜನ್ಯ ಮತ್ತು ದಮನಿತ ಸಮಾಜವನ್ನು ಹುಟ್ಟುಹಾಕಿದೆ, ಅಲ್ಲಿ ಕೆಲವರು ತಮ್ಮ ಮಗಳ ಸಮಾಧಿಯನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಆಶ್ರಯಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

Pakistan has created such a horny, sexually frustrated society that people are now putting padlocks on the graves of their daughters to prevent them from getting raped.

When you link the burqa with rape, it follows you to the grave. pic.twitter.com/THrRO1y6ok

— Harris Sultan (@TheHarrisSultan)

'ಗುಂಡಿಟ್ಟು ಮಹಿಳೆಯರ ಕೊಂದು ಶವದೊಂದಿಗೆ ತಾಲೀಬಾನಿಗಳ ಸೆಕ್ಸ್'

ನೆಕ್ರೋಫಿಲಿಯಾ ಪ್ರಕರಣಗಳು: ಪಾಕಿಸ್ತಾನದಲ್ಲಿ ಸಾಕಷ್ಟು ಬಾರಿ ಸಮಾಧಿಯಿಂದ ಮಹಿಳೆಯ ಶವವನ್ನು ತೆಗೆದು ಅತ್ಯಾಚಾರ ಮಾಡಿರುವ ಬಗ್ಗೆ ವರದಿಯಾಗಿದ್ದವು. ತೀರಾ ಇತ್ತೀಚಿನ ಉದಾಹರಣೆಯೆಂದರೆ, 2011ರಲ್ಲಿ  ಕರಾಚಿಯ ಉತ್ತರ ನಾಜಿಮಾಬಾದ್‌ನ ಮುಹಮ್ಮದ್ ರಿಜ್ವಾನ್ ಹೆಸರಿನ ವ್ಯಕ್ಯಿಯೊಬ್ಬ, ಸಮಾಧಿಯಲ್ಲಿದ್ದ 48 ಶವಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದ. ಖಬರ್‌ಸ್ತಾನದಲ್ಲಿ ಕೆಲಸಕ್ಕಿದ್ದ ಈತನನ್ನು ಪೊಲೀಸರು ಆ ಬಳಿಕ ಬಂಧಿಸಿದ್ದರು.

Tap to resize

Latest Videos

ನೀನೇ ಬ್ಯೂಟಿ, ಮತ್ಯಾಕೆ ಬ್ಯೂಟಿ ಪಾರ್ಲರ್‌ ಎಂದಿದ್ದೇ ತಪ್ಪಾಯ್ತು, ಫ್ಯಾನ್‌ಗೆ ನೇಣು ಹಾಕಿಕೊಂಡ ಪತ್ನಿ!

ಇತ್ತೀಚೆಗೆ ಮೇ 2022 ರಲ್ಲಿ, ಪಾಕಿಸ್ತಾನದ ಗುಜರಾತ್‌ನ ಚಕ್ ಕಮಲಾ ಗ್ರಾಮದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಹುಡುಗಿಯೊಬ್ಬಳ ಶವವನ್ನು ಅಗೆದು ಅತ್ಯಾಚಾರ ಮಾಡಿದರು. ಕುಟುಂಬದವರು ಆಕೆಯನ್ನು ಸಮಾಧಿ ಮಾಡಿದ ದಿನವೇ ಇದು  ಸಂಭವಿಸಿದೆ. 2021 ರಲ್ಲಿ, ಕರಾವಳಿ ಪಟ್ಟಣ ಗುಲಾಮುಲ್ಲಾ ಬಳಿಯ ಮೌಲ್ವಿ ಅಶ್ರಫ್ ಚಾಂಡಿಯೋ ಗ್ರಾಮದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಇದೇ ರೀತಿಯ ಬರ್ಬರ ಕೃತ್ಯವನ್ನು ನಡೆಸಿದ್ದರು. 2020 ರಲ್ಲಿ, ಪಾಕಿಸ್ತಾನದ ಪಂಜಾಬ್‌ನ ಸ್ಮಶಾನದಲ್ಲಿ ಮಹಿಳೆಯ ಶವದ ಮೇಲೆ ಅತ್ಯಾಚಾರ ಎಸಗುವ ವೇಳೆ ರೆಡ್‌ಹ್ಯಾಂಡ್‌ ಆಗಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು.

click me!