
ಕಾಬೂಲ್(ಆ.21): ಇಡೀ ಆಷ್ಘಾನ್ ರಾಜಕೀಯ ನಾಯಕರು, ಸೇನೆ ತಾಲಿಬಾನಿ ಉಗ್ರರಿಗೆ ಶರಣಾಗಿ ನಿಂತಿದ್ದರೆ ಇತ್ತ ಪಂಜ್‌ಶೀರ್ ಎಂಬ ಸಣ್ಣ ಕಣಿವೆಯೊಂದು ಮಾತ್ರ ಉಗ್ರರಿಗೆ ಸಡ್ಡು ಹೊಡೆಯುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದೆ. ದಶಕಗಳ ಹಿಂದೆ ತಮ್ಮ ಪ್ರಾಂತ್ಯವನ್ನು ರಕ್ಷಿಸಿಕೊಳ್ಳಲು ಹೇಗೆ ಅಹಮದ್ ಶಾ ಮಸೌದ್ ಹೋರಾಡಿ ಪ್ರಾಣ ತೆತ್ತಿದ್ದರೋ, ಇದೀಗ ಅವರ ಪುತ್ರರಾದ ಅಹಮದ್ ಮಸೌದ್ ಪಣ ತೊಟ್ಟು ಉಗ್ರರಿಗೆ ಸವಾಲು ಹಾಕಿದ್ದಾರೆ.
ಜೊತೆಗೆ, ಅಮೆರಿಕ ಸೇನೆ ತನಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ ತಂದೆಯಂತೆಯೇ ತಾಲಿಬಾನಿಗಳ ವಿರುದ್ಧ ಹೋರಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾನೆ. ಆತನ ಕೆಚ್ಚೆದೆಯ ಮಾತುಗಳು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಕಾಬೂಲ್‌ನಿಂದ 150 ಕಿ.ಮೀ ದೂರದಲ್ಲಿರುವ ಸಂಪೂರ್ಣ ಕಣಿವೆಯಿಂದ ಆವೃತ್ತವಾಗಿರುವ ಪಂಜ್‌ಶೀರ್ ಅನ್ನು ಈ ಹಿಂದೆ ಸೋವಿಯತ್ ಒಕ್ಕೂಟ ದಾಳಿ ಮಾಡಿದಾಗಲೂ ವಶಪಡಿಸಿಕೊಳ್ಳಲು ಆಗಿರಲಿಲ್ಲ. ಬಳಿಕ ತಾಲಿಬಾನಿಗಳು 90ರ ದಶಕದಲ್ಲಿ ದಾಳಿ ಮಾಡಿದಾಗಲೂ ಅದು ಅಷ್ಟೂವರ್ಷ ಸ್ವತಂತ್ರ್ಯವಾಗಿಯೇ ಇತ್ತು. ಈಗಲೂ ಅದು ಹಾಗೆಯೇ ಉಳಿಯುವ ಮೂಲಕ ಅಚ್ಚರಿ ಮೂಡಿಸಿದೆ. ಈ ಕಣಿವೆ ಪ್ರವೇಶಿಸಲು ಪಂಜ್‌ಶೀರ್ ನದಿ ಸಾಗುವ ಸಣ್ಣ ಮಾರ್ಗದ ಮೂಲಕವೇ ಬರಬೇಕು. ಅದು ಅಷ್ಟುಸುಲಭವಲ್ಲ. ಅದನ್ನು ರಕ್ಷಿಸಲು 1.50 ಲಕ್ಷದಷ್ಟಿರುವ ಜನರು ರೆಡಿಯಾಗಿದ್ದಾರೆ. ತಾಲಿಬಾನಿಗಳು ಪಶ್ತೂನ್‌ಗಳಾಗಿದ್ದರೆ, ಪಂಜ್‌ಶೀರ್ ಜನರು ತಜಕಿಸ್ತಾನದ ಬುಡಕಟ್ಟು ಸಮುದಾಯದವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ