* ಅಷ್ಘಾನಿಸ್ತಾನ ಸರ್ಕಾರಕ್ಕೆ ನೀಡಿದ ಶಸ್ತ್ರಾಸ್ತ್ರಗಳೆಲ್ಲಾ ತಾಲಿಬಾನಿಗಳ ಪಾಲು
* ಉಗ್ರರಿಗೀಗ 2000 ಸಶಸ್ತ್ರ ವಾಹನ, 40 ಹೆಲಿಕಾಪ್ಟರ್ ಬಲ
ಕಾಬೂಲ್(ಆ.21): ತಾಲಿಬಾನಿಗಳನ್ನು ಸೋಲಿಸಲು ಅಮೆರಿಕ ಅಷ್ಘಾನಿಸ್ತಾನ ಸೇನೆಗೆ ನೀಡಿದ್ದ ಆಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನಿಗಳ ವಶವಾಗಿದೆ. ಅಮೆರಿಕ ನೀಡಿದ್ದ 2000 ಸಶಸ್ತ್ರ ವಾಹನಗಳು, 40 ಹೆಲಿಕಾಪ್ಟರ್‌ಗಳು, ಸ್ಫೋಟಕಗಳು, ಆಧುನಿಕ ಮಶಿನ್ ಗನ್‌ಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಹೀಗಾಗಿ ಕಳೆದ ಬಾರಿಗಿಂತ ತಾಲಿಬಾನಿಗಳು ಈ ಬಾರಿ ಹೆಚ್ಚು ಹಾನಿ ಮಾಡಬಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಮತ್ತಷ್ಟುಅಪಾಯಕಾರಿಯಾಗಿ ಹೊರಹೊಮ್ಮವು ಭೀತಿ ಎದುರಾಗಿದೆ.
2003-2016ರ ಅವಧಿಯಲ್ಲಿ ಅಮೆರಿಕ ಅಷ್ಘಾನಿಸ್ತಾನಕ್ಕೆ 208 ಯುದ್ಧ ವಿಮಾನಗಳನ್ನು ನೀಡಿದೆ. ಆಫ್ಘನ್ ಸೇನೆ ತಾಲಿಬಾನಿಗಳಿಗೆ ಶರಣಾಗುವ ಮೂಲಕ 2 ಸಾವಿರಕ್ಕೂ ಹೆಚ್ಚು ಮಿಲಿಟರಿ ವಾಹನಗಳು ತಾಲಿಬಾನಿಗಳಿಗೆ ಸುಲಭವಾಗಿ ದೊರಕಿದೆ. ಇದರಲ್ಲಿ ಯುಎಚ್-60 ಬ್ಲಾಕ್ ಹಾಕ್ಸ್, ಎ-29 ಸೂಪರ್ ಟ್ಯುಕಾನೋ ಸೇರಿದಂತೆ ಸುಸಜ್ಜಿತವಾದ 40 ಯುದ್ಧ ವಿಮಾನಗಳು ಹಾಗೂ ಸ್ಕಾ್ಯನ್ ಈಗಲ್ ಮಿಲಿಟರಿ ಡ್ರೋನ್‌ಗಳು ಸೇರಿವೆ.
ತಾಲಿಬಾನ್ ಉಗ್ರಗಾಮಿಗಳು ಮೊದಲ ಶæೕಣಿಯ ಎಂ16ಎ4 ಮತ್ತು ಎಂ420 ಮಶಿನ್‌ಗನ್‌ಗಳನ್ನು ಸಹಾ ಪಡೆದುಕೊಂಡಿದ್ದಾರೆ. ಕಳೆದ 2 ದಶಕದಲ್ಲಿ ಅಮೆರಿಕ ಅಷ್ಘಾನಿಸ್ತಾನದಲ್ಲಿ 61 ಲಕ್ಷ ಕೋಟಿ ಹಣವನ್ನು ಮಿಲಿಟರಿಗಾಗಿ ಖರ್ಚು ಮಾಡಿದೆ. ತಾಲಿಬಾನಿಗಳು ಈಗಾಗಲೇ ಎಕೆ47 ಮಶಿನ್‌ಗನ್ ಮತ್ತು ಹ್ಯಾಂಡ್ ಗ್ರನೇಡ್‌ಗಳನ್ನು ಹೊಂದಿದ್ದರು. ಈಗ ಅದೊಂದಿಗೆ ದೂರಕ್ಕೆ ಹಾರಬಲ್ಲ ಸಿಡಿತಲೆಯ ಕ್ಷಿಪಣಿಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಟ್ಯಾಂಕರ್‌ಗಳು, ಲಕ್ಷಾಂತರ ಬುಲೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇವುಗಳನ್ನು ಬಳಸಲು ಉಗ್ರರಿಗೆ ಸಾಧ್ಯವಿದೆಯಾ ಎಂಬುದಷ್ಟೇ ಪ್ರಶ್ನೆ.