ಮುಂಬೈ=ಪಾಕ್, ಕಂಗನಾಗೆ ಟ್ವೀಟ್ ನಂತರ ಪಾಕಿಸ್ತಾನದಲ್ಲೇನಾಯ್ತು?

Published : Sep 11, 2020, 03:56 PM ISTUpdated : Sep 11, 2020, 04:09 PM IST
ಮುಂಬೈ=ಪಾಕ್, ಕಂಗನಾಗೆ ಟ್ವೀಟ್ ನಂತರ ಪಾಕಿಸ್ತಾನದಲ್ಲೇನಾಯ್ತು?

ಸಾರಾಂಶ

ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ/ ಕಂಗನಾ ಹೇಳಿಕೆ ಪಾಕಿಸ್ತಾನ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಧ್ವನಿ/ ನಿಮ್ಮ ಜಗಳದಲ್ಲಿ ನಮ್ಮನ್ನು ಯಾಕೆ ಎಳೆದು ತರುತ್ತೀರಿ? 

ಮುಂಬೈ(ಸೆ.11) ಮಹಾರಾಷ್ಟ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತ ನಟಿ ಕಂಗನಾ ರಣಾವತ್ ಮುಂಬೈ ನ್ನು ಪಾಕಿಸ್ತಾನ , ಪಾಕ್ ಆಕ್ರಮಿತ ಕಾಶ್ಮೀರ ಎಂದು ಟೀಕಿಸಿದ್ದರು .ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತು ಕಂಗನಾ ನಡುವೆ ದೊಡ್ಡ ಯುದ್ಧವೇ ನಡೆದು ಹೋಗಿತ್ತು.

 ಪಾಕಿಸ್ತಾನ ಎಂದು ಕರೆದವರು ಮುಂಬೈಗೆ ಹೇಗೆ ಕಾಲು ಇಡುತ್ತೀರಿ ಎಂದು ಶಿವಸೇನೆ ಸವಾಲು ಹಾಕಿದರೆ , ನಾನು ಬಂದೇ ಬರುತ್ತೇನೆ, ಬರುವ ಸಮಯ ಮತ್ತು ವಿಳಾಸವನ್ನು ತಿಳಿಸುತ್ತೇನೆ ತಾಕತ್ ಇದ್ದರೆ  ತಡೆಯಿರಿ ಎಂದು ಕಂಗನಾ ಸವಾಲು ಹಾಕಿದ್ದರು.

ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ; ಕಂಗನಾ ಬೋಲ್ಡ್ ಮಾತು

ಇದಾದ ಮೇಲೆ ಕಂಗನಾ ಮುಂಬೈಗೆ ಬಂದಿಳಿದಿದ್ದರು. ಇತ್ತ ಮಹಾರಾಷ್ಟ್ರ ಸರ್ಕಾರ  ಕಂಗನಾಗೆ ಸೇರಿದ್ದ ಕಚೇರಿಯನ್ನು ಅಕ್ರಮ ಎಂಬ ಆರೋಪದಲ್ಲಿ ಒಡೆದು ಹಾಕಿತ್ತು. ಆದರೆ ಇದೆಲ್ಲದರ ನಡುವೆ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಕಂಗನಾ ಅವರನ್ನು ಝಾಡಿಸಲು ಶುರು ಮಾಡಿದೆ.

ನಿಮ್ಮ ಜಗಳದಲ್ಲಿ ನಮ್ಮನ್ನು ಯಾಕೆ ಎಳೆದು ತರುತ್ತೀರಿ? ಎಂದು ಪಾಕಿಸ್ತಾನದ ಹಲವು ಸೋಶಿಯಲ್ ಮೀಡಿಯಾ ವೀರರು ಟ್ವೀಟ್ ಮಾಡಿದ್ದಾರೆ.  ಕಂಗನಾ ಮಾತಿಒಗೆ ಪಾಕ್ ನಿಂದ ಬಂದ ಪ್ರತಿಕ್ರಿಯೆ ಹೇಗಿತ್ತು?

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾನವನ ಜೀವಿತಾವಧಿ 194 ವರ್ಷ! ಸಾಯದಿರಲು ಬಯಸಿದರೂ ಬಿಡಲ್ಲ 'ಡಿಎನ್‌ಎ' ರೂಪಾಂತರ, ವಿಜ್ಞಾನ ಲೋಕದಲ್ಲೀಗ ಹೊಸ ಸಂಚಲನ!
1950ರ ಬಳಿಕ ಮೊದಲ ಬಾರಿಗೆ ಕೆಂಪು ಬಣ್ಣಕ್ಕೆ ತಿರುಗಿದ ಇಡೀ ಭೂಮಿ, ಡಿಸೆಂಬರ್‌ಗೆ ಬಿಗ್ ಎಚ್ಚರಿಕೆ