ಇದು ಕೋಳಿಯಂತೆ ಕಾಣುವ ಗಿಳಿ. ಬೆಳಿಗ್ಗೆ ಚಿಂವ್ ಚಿಂವ್ ಎನ್ನೋ ಬದಲು ಕೊಕ್ಕೊಕ್ಕೋ ಎನ್ನುತ್ತೆ. ಬೆಲೆ ಕೇವಲ 6,500 ರೂಪಾಯಿ! ಆಫರ್ ಇದೆ... ಹೀಗೊಂದು ಜಾಹೀರಾತು ಕಾಣಿಸಿಕೊಳ್ತಿದೆ. ಏನಿದರ ವಿಶೇಷತೆ?
ಆನ್‌ಲೈನ್‌ನಲ್ಲಿ ಒಂದು ಜಾಹೀರಾತು ಸಾಕಷ್ಟು ಗಮನ ಸೆಳೆಯುತ್ತಿದೆ. ಇದರಲ್ಲಿ ಹಸಿರು ಬಣ್ಣದ ಕೋಳಿಯನ್ನು ಛೇ... ಛೇ.. ಅಲ್ಲಲ್ಲ... ಗಿಳಿಯನ್ನು ನೋಡಬಹುದು. ಅದನ್ನು ನೀವು ಕೋಳಿ ಎಂದುಕೊಂಡ್ರೆ ನಾವೇನೂ ಮಾಡಲು ಆಗಲ್ಲ. ಏಕೆಂದ್ರೆ, ಇದು ಲಭ್ಯ ಇರೋದು ಆನ್‌ಲೈನ್‌ನಲ್ಲಿ. ಆಫರ್ ಪ್ರೈಸ್ ಕೂಡ ಇದೆ. ಕೇವಲ 6,500 ರೂಪಾಯಿ. ಕೋಳಿಯ ರೂಪದ ಗಿಳಿ ಅಂದ್ಮೇಲೆ ಇಷ್ಟು ರೇಟ್ ಇಲ್ಲದಿದ್ದರೆ ಹೇಗೆ ಹೇಳಿ. ಅಂದ ಹಾಗೆ ಇದರ ಇನ್ನೂ ಒಂದು ಸ್ಪೆಷ್ಯಾಲಿಟಿ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿಸಲಾಗಿದೆ. ಅದೇನೆಂದ್ರೆ, ಇದು ಸೂರ್ಯೋದಯವ ಸಮಯದಲ್ಲಿ ಸಾಮಾನ್ಯ ಗಿಳಿಗಳಿಂತೆ ಚಿಂವ್ ಚಿಂವ್ ಅನ್ನಲ್ಲ, ಬದಲಿಗೆ ಕೊಕ್ಕೊಕ್ಕೋ ಎಂದು ಕೋಳಿಯಂತೆಯೇ ಕೂಗುವ ಅಭ್ಯಾಸ ಹೊಂದಿದೆ.
ಇದನ್ನು ನೀವು ನಂಬಲೇ ಬೇಕು. ಏಕೆಂದ್ರೆ ಇದನ್ನು ಆನ್‌ಲೈನ್‌ನಲ್ಲಿ ಹಾಕಿರೋದು ಯಾರು ಅಂದುಕೊಂಡ್ರಿ? ಪಾಕಿಸ್ತಾನದ ಕರಾಚಿಯಲ್ಲಿ ಕಂಡುಬಂದಿರೋ ದೃಶ್ಯವಿದು. ಅಂದ ಮೇಲೆ ಏನು ಬೇಕಾದರೂ ಆಗಬಹುದು ಅಲ್ವಾ? ಅಂದಹಾಗೆ, ದಿವಾಳಿ ಅಂಚಿನಲ್ಲಿರೋ ಪಾಕಿಸ್ತಾನದಲ್ಲಿ ಇಂಥದ್ದೊಂದು 'ಗಿಳಿ' ಮಾರಾಟ ಮಾಡಲಾಗುತ್ತಿದೆ. ಕೋಳಿಗೆ ಹಸಿರು ಬಣ್ಣ ಬಳಿದಂತೆ ಇರುವ ಚಿತ್ರವಿದ್ದು, ಮಾರಾಟಗಾರನೊಬ್ಬ ಅದನ್ನು ಮಾರಲು ಪ್ರಯತ್ನಿಸಿದ್ದಾನೆ. ಇದಕ್ಕೆ 6,500 ರೂ. ಬೆಲೆ ನಿಗದಿ ಮಾಡಿದ್ದಾನೆ. "ಗಿಳಿ"ಯ ಜಾಹೀರಾತು ನೀಡಿ, ಸೂರ್ಯೋದಯದಲ್ಲಿ ಮಾತನಾಡುವ ಬದಲು ಕೂಗುವಂತಹ ವಿಶಿಷ್ಟ ಅಭ್ಯಾಸಗಳನ್ನು ಇದು ಹೊಂದಿದೆ ಎಂದೂ ಹೇಳಿದ್ದಾನೆ.
ಗಂಡಸರ ಮೇಲೆ ಡೌಟೋ, ಮಗಳ ಮೇಲೋ? ಯುವತಿ ತಲೆ ಮೇಲೆ ಸಿಸಿಟಿವಿ ನೋಡಿ ಹೌಹಾರಿದ ಜನರು!
ಅವನು ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾನೋ ಗೊತ್ತಿಲ್ಲ. ಹಣದ ದುಪ್ಪಟ್ಟು ಆಮಿಷ ಒಡ್ಡಿದಾಗ ಅಥವಾ ಇನ್ನೇನೋ ಉಡುಗೊರೆ ಅದು ಇದು ಎಂದಾಗ ಹಿಂದು-ಮುಂದು ನೋಡದೇ ನುಗ್ಗುವ ಜನರು ಲಕ್ಷಾಂತರ ಮಂದಿ ಇರುವಾಗ, ತನ್ನ ಈ ಜಾಹೀರಾತಿಗೂ ಮರುಳಾಗಲಿ ಎನ್ನುವ ಕಾರಣಕ್ಕೋ ಏನೋ, ಅಥವಾ ತನ್ನ ದೇಶದ ಜನರ ಬಗ್ಗೆ ಅಷ್ಟು ನಂಬಿಕೆ ಇದ್ದು, ಇದು ಮಾರಾಟ ಆಗುತ್ತದೆ ಎನ್ನುವ ಕಾರಣಕ್ಕೋ ಏನೋ, ಒಟ್ಟಿನಲ್ಲಿ ಈ ಜಾಹೀರಾತನ್ನು ಆತ ಕೊಟ್ಟಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಹಲವಾರು ರೀತಿಯ ಮೀಮ್‌ಗಳಿಗೆ ಇದು ಕಾರಣವಾಗಿದೆ. ಆನ್‌ಲೈನ್ ಮಾರಾಟದಲ್ಲಿನ ವಂಚನೆಯ ಅಭ್ಯಾಸಗಳು ಮತ್ತು ಕೆಲವು ವ್ಯಕ್ತಿಗಳು ಆರ್ಥಿಕ ಲಾಭಕ್ಕಾಗಿ ಎಷ್ಟು ದೂರ ಹೋಗುತ್ತಾರೆ ಎಂಬುದರ ಬಗ್ಗೆ ಚರ್ಚೆಯನ್ನು ಇದು ಹುಟ್ಟುಹಾಕುತ್ತಿದೆ. ಅಷ್ಟಕ್ಕೂ ಪಾಕಿಸ್ತಾನದ ಸ್ಥಿತಿ ಅಂತೂ ಸದ್ಯಕ್ಕೆ ಯಾರಿಗೂ ಬೇಡ. ಎಲ್ಲಾ ಕಡೆಗಳಿಂದಲೂ ಪಾಕ್ ಲಾಕ್ ಆಗಿಬಿಟ್ಟಿದೆ. ಹಲವು ಕಡೆಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಜನರ ಕೈಯಲ್ಲಿ ಉದ್ಯೋಗವಿಲ್ಲ. ಅದರಲ್ಲಿಯೂ ಭಾರತ ಇಟ್ಟಿರುವ ಹಲವು ದಿಟ್ಟ ಹೆಜ್ಜೆಗಳಿಂದ ಅವರ ಆದಾಯದ ಮೂಲ ಆಗಿದ್ದ ಭಯೋತ್ಪಾದನೆಗೂ ಕತ್ತರಿ ಬಿದ್ದಿದೆ. ಹಲವು ದಶಕಗಳವರೆಗೆ ಭಾರತದಲ್ಲಿಯೇ ಕಾಸು ಮಾಡಿಕೊಂಡು ಓಡಾಡಿಕೊಂಡಿದ್ದ ಉಗ್ರರ ಬುಡಕ್ಕೆ ಬೆಂಕಿ ಹತ್ತಿದೆ. ಭಾರತದಲ್ಲಿ ರೂಪಾಯಿ ಅಮಾನ್ಯ ಮಾಡಿದ್ದರ ಪರಿಣಾಮವಾಗಿ ನಕಲಿ ರೂಪಾಯಿ ಸೃಷ್ಟಿಸಿ ಮಜಾ ಮಾಡುತ್ತಿದ್ದ ಪಾಕಿಗಳು ತತ್ತರಿಸಲು ಶುರು ಮಾಡಿದ್ದು, ಸ್ಥಿತಿ ಇಲ್ಲಿಯವರೆಗೆ ಬಂದಿದೆ. ಇದೇ ಕಾರಣಕ್ಕೆ ಇಂಥ ಮೋಸವನ್ನು ಬಳಸಿ ಜನರನ್ನು ಮರಳು ಮಾಡಿ ಹಣ ಗಳಿಸುವ ತಂತ್ರ ಹೂಡಲಾಗುತ್ತಿದೆ. ಇದನ್ನು ಗಿಳಿ ಎಂದು ನಂಬಿ ತೆಗೆದುಕೊಳ್ಳುವವರೂ ಇದ್ದಾರೋ ಗೊತ್ತಿಲ್ಲ!
ಸ್ನೇಹಿತನ ಮದ್ವೆಯಾಗಿ ಕೊನೆಯುಸಿರೆಳೆದ 10 ವರ್ಷದ ಬಾಲಕಿ! ಈಕೆಯ ಕಣ್ಣೀರ ಕಥೆ ಕೇಳಿ...