ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಗುಣಮುಖರಾಗಿದ್ದು, 5 ವಾರಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೂ ಮುನ್ನ ಆಸ್ಪತ್ರೆಯ ಬಾಲ್ಕನಿಯಿಂದ ನೆರೆದಿದ್ದ ಜನರಿಗೆ ಅವರು ಧನ್ಯವಾದ ಸಲ್ಲಿಸಿದರು.
ರೋಮ್/ವ್ಯಾಟಿಕನ್ ಸಿಟಿ: ತೀವ್ರ ಉಸಿರಾಟದ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಈಗ ಗುಣಮುಖರಾಗಿದ್ದ, 5 ವಾರಗಳ ಬಳಿಕ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಬಿಡುಗಡೆಗೂ ಮುನ್ನ ಕ್ಷಣ ಹೊತ್ತು ಆಸ್ಪತ್ರೆಯ ಬಾಲ್ಕನಿಯಿಂದ ನೆರೆದಿದ್ದ ಜನರಿಗೆ ಧನ್ಯವಾದ ಸಲ್ಲಿಸಿದರು.
ರೋಮ್‌ನ ಆಸ್ಪತ್ರೆಯಿಂದ ಗಾಲಿ ಕುರ್ಚಿ ಸಹಾಯದಿಂದ ವಿಶೇಷ ವಾಹನಗಳ ಮೂಲಕ ಪೋಪ್‌ರನ್ನು ವ್ಯಾಟಿಕನ್‌ಗೆ ಕರೆತರಲಾಯಿತು. ಈ ವೇಳೆ ಸಾವಿರಾರು ಭಕ್ತರು ‘ಫ್ರಾನ್ಸಿಸ್, ಫ್ರಾನ್ಸಿಸ್’ ಎಂದು ಘೋಷಣೆ ಕೂಗಿದರು.
ಪೋಪ್ ಶ್ವಾಸಕೋಶದ ಸೋಂಕು ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಫೆ.14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಧ್ಯೆ ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಈ ಮಧ್ಯೆ ಆರೋಗ್ಯ ತೀವ್ರ ಹದಗೆಟ್ಟ ಕಾರಣ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಕೆಲ ದಿನಗಳಿಂದ ಆರೋಗ್ಯ ವೃದ್ಧಿಯಾದ ಕಾರಣ ಮಾ.6ರಂದು ಭಕ್ತರಿಗೆ ಧ್ವನಿ ಸಂದೇಶ ಕಳುಹಿಸಿದ್ದರು. ಭಾನುವಾರ ಬಿಡುಗಡೆಯಾಗಿದ್ದಾರೆ. ಇನ್ನು 2 ತಿಂಗಳು ವಿಶ್ರಾಂತಿ ಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ನಿಧನ ವದಂತಿ, ಮುಂದಿನ ಪೋಪ್ ಆಯ್ಕೆಗೆ ಭಾರತದ 4 ಕಾರ್ಡಿನಲ್‌ಗಳು
ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ