ಭ್ರಷ್ಟಾಚಾರದ ಆರೋಪವಿಲ್ಲ, ಉದ್ಯೋಗದ ಭರವಸೆ ಇಲ್ಲ; Work From Homeಗಾಗಿ ನಡೆಯುತ್ತಿದೆ ದೇಶದ ಚುನಾವಣೆ

ಚುನಾವಣೆಯಲ್ಲಿ ವರ್ಕ್ ಫ್ರಂ ಹೋಮ್ ಪ್ರಮುಖ ವಿಷಯವಾಗಿದೆ. ಒಂದು ಪಕ್ಷವು ವರ್ಕ್ ಫ್ರಂ ಹೋಮ್ ಮುಂದುವರಿಸಲು ಬಯಸಿದರೆ, ಇನ್ನೊಂದು ಪಕ್ಷವು ಅದನ್ನು ಸ್ಥಗಿತಗೊಳಿಸಲು ಬಯಸಿದೆ, ಇದು ನೌಕರರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

No corruption allegations no job promises Australia elections are being held for Work From Home mrq

ನವದೆಹಲಿ: ದೇಶದಲ್ಲಿ ಚುನಾವಣೆ ಅಂದ್ರೆ ರಾಜಕೀಯ ಪಕ್ಷಗಳು ಮತ್ತು ನಾಯಕರ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ನಡೆಯುತ್ತಿರುತ್ತವೆ. ಸದ್ಯ ಭಾರತದಲ್ಲಿ ಫ್ರೀ  ಗ್ಯಾರಂಟಿಗಳ ಭರಾಟೆ  ಶುರುವಾಗಿದೆ.  ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಉಚಿತ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡುತ್ತಿವೆ. ಅಧಿಕಾರಕ್ಕೆ ಬಂದ ನಂತರ ನೀಡಿದ ಉಚಿತ ಯೋಜನೆಗಳನ್ನು ನೀಡುತ್ತಿವೆ. ಆದ್ರೆ ಇಲ್ಲೊಂದು ದೇಶದಲ್ಲಿ Work From Home ಚುನಾವಣೆಯ ವಿಷಯವಾಗಿದೆ. ವರ್ಕ್ ಫ್ರಂ ಹೋಮ್ ಮುಂದುವರಿಸಬೇಕು ಮತ್ತು ನಿಲ್ಲಿಸಬೇಕು ಎಂಬ ಎರಡು ವಿಷಯಗಳ ಮೇಲೆ ಚುನಾವಣೆ  ನಡೆಯುತ್ತಿವೆ. ಚುನಾವಣೆ ಘೋಷಣೆಗೂ ಮುನ್ನವೇ ವರ್ಕ್ ಫ್ರಂ ಹೋಮ್ ಕುರಿತಾಗಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಆಸ್ಟ್ರೇಲಿಯಾದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿವೆ.  ಹಾಗಾಗಿ ರಾಜಕೀಯ ಪಕ್ಷಗಳು ಚುನಾವಣೆಯ ತಯಾರಿಯನ್ನು ನಡೆಸುತ್ತಿವೆ. ಆದ್ರೆ ಆಸ್ಟ್ರೇಲಿಯಾದಲ್ಲಿ ಚುನಾವಣೆ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ವಿಷಯಗಳ ಮೇಲೆ ನಡೆಯುತ್ತಿಲ್ಲ. ಬದಲಾಗಿ ಇಲ್ಲಿ  ವರ್ಕ್ ಫ್ರಂ ಹೋಮ್ ಚುನಾವಣೆಯ ವಿಷಯವಾಗಿದೆ. ಒಂದು ಪಾರ್ಟಿ ಗೆದ್ದರೆ  ವರ್ಕ್ ಫ್ರಂ ಹೋಮ್ ಮುಂದುವರಿಸೋದಾಗಿ ಹೇಳಿದ್ರೆ ಮತ್ತೊಂದು ಪಕ್ಷ  ವರ್ಕ್ ಫ್ರಂ ಹೋಮ್ ಸ್ಥಗಿತಗೊಳಿಸುವ ಭರವಸೆಯನ್ನು ನೀಡಿದೆ. ಈ ಕಾರಣದಿಂದ ಆಸ್ಟ್ರೇಲಿಯಾದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. 

Latest Videos

ಲಿಬರಲ್ ಪಾರ್ಟಿ ಸರ್ಕಾರಿ ನೌಕರರು ವರ್ಕ್ ಫ್ರಂ ಹೋಮ್ ನಿಲ್ಲಿಸುವ ಪ್ರಸ್ತಾವನೆಯನ್ನು ಚುನಾವಣೆಯಲ್ಲಿರಿಸಿದೆ. ಆದ್ರೆ ಮತ್ತೊಂದು ಪಕ್ಷ ಲೇಬರ್ ಪಾರ್ಟಿ, ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಮುಂದುವರಿಸುವ ಭರವಸೆಯನ್ನು ನೀಡಿದೆ.

ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಮುಂದುವರಿಸುವ ಬಗ್ಗೆ ಲೇಬರ್ ಪಾರ್ಟಿ ತನ್ನದೇ ಆದ ಕೆಲವು ಕಾರಣಗಳನ್ನು ನೀಡಿದೆ. ಇಂದಿನ ಸಮಯದಲ್ಲಿ ಬೆಲೆ ಏರಿಕೆಯಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಪ್ರಯಾಣ, ಊಟ ಸೇರಿದಂತೆ ಇತರೆ ಖರ್ಚುಗಳನ್ನು ತಡೆಯುವ ಉದ್ದೇಶದಿಂದ ಸರ್ಕಾರಿ ನೌಕರರ ವರ್ಕ್ ಫ್ರಂ ಹೋಮ್ ಆಯ್ಕೆ  ಮುಂದುವರಿಸಲಾಗುವುದು. ಮನೆಯಲ್ಲಿಯೇ ಅಥವಾ ತಾವಿದ್ದ ಸ್ಥಳದಲ್ಲಿಯೇ ಕೆಲಸ ಮಾಡೋದರಿಂದ ಜನರ ಹಣ ಉಳಿತಾಯವಾಗಲಿದೆ ಎಂದು ಲೇಬರ್ ಪಾರ್ಟಿ ಹೇಳಿದೆ.

ಈ ಕುರಿತು ಮಾತನಾಡಿರುವ ಲೇಬರ್ ಪಾರ್ಟಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಮಿಷೆಲ್ ಓ ನಿಲ್, ಒಂದು ವೇಳೆ ಮತ್ತೆ ಎಲ್ಲರೂ ಆಫಿಸ್‌ಗೆ ಬಂದು ಕೆಲಸ ಮಾಡಲು ಆರಂಭಿಸಿದ್ರೆ ನಗರದಲ್ಲಿ ಟ್ರಾಫಿಕ್ ಹೆಚ್ಚಾಗುತ್ತದೆ. ನೌಕರರು ತಮ್ಮ ಕುಟುಂಬ ಮತ್ತು ಮಕ್ಕಳಿಗೆ ಕಡಿಮೆ ಸಮಯ ನೀಡಿದಂತಾಗುತ್ತದೆ. ನೌಕರರ ಪ್ರಯಾಣದ ಅವಧಿ ಹೆಚ್ಚಾಗುತ್ತದೆ ಎಂದಿದ್ದಾರೆ. ಎಲ್ಲರೂ ಕಚೇರಿಗೆ ಬಂದ್ರೆ  ಹೆಚ್ಚಿದ ಸಂಚಾರ ದಟ್ಟಣೆ ಲಕ್ಷಾಂತರ ಕಾರ್ಮಿಕರು ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತೆ ಎಂದು ಆಸ್ಟ್ರೇಲಿಯನ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಹೇಳಿದೆ.

ಇದನ್ನೂ ಓದಿ: ಎಲಾನ್ ಮಸ್ಕ್ ಏಲಿಯನ್ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ, ಟ್ರಂಪ್ ಡಿನ್ನರ್ ಪಾರ್ಟಿ ವಿಡಿಯೋ ಸಂಚಲನ

ಲಿಬರಲ್ ಪಾರ್ಟಿಯ ಘೋಷಣೆ ಏನು?
ಚುನಾವಣೆಯಲ್ಲಿ ಗೆದ್ದರೆ  ವರ್ಕ್ ಫ್ರಂ ಹೋಮ್ ಸ್ಥಗಿತಗೊಳಿಸುತ್ತವೆ ಎಂದು ಲಿಬರಲ್ ಪಾರ್ಟಿ ಘೋಷಣೆ ಮಾಡಿದೆ. ವರ್ಕ್‌ ಫ್ರಂ ಹೋಮ್ ಆಯ್ಕೆ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ನೀಡಲಾಗುವುದು. ಕೂಲಂಕುಷವಾಗಿ ತನಿಖೆ ನಡೆಸಿ ವರದಿ ಪಡೆದುಕೊಂಡ ನಂತರವೇ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ನೀಡಲಾಗುವುದು. ಇನ್ನುಳಿದಂತೆ ಎಲ್ಲರೂ ಆಫಿಸ್‌ಗೆ ಬರಲೇಬೇಕು ಎಂದು ಲಿಬರಲ್ ಪಾರ್ಟಿ ಹೇಳಿದೆ. 

ಎರಡೂ ಪಕ್ಷಗಳ ಘೋಷಣೆ ಬಳಿಕ ಹಲವು ನೌಕರರಲ್ಲಿ ನಿರಾಸೆ ಮೂಡಿದೆ.  ಈ ಸಂಬಂಧ ಪರ ಮತ್ತು ವಿರೋಧದ ಚರ್ಚೆಗಳು ನಡೆಯತ್ತಿವೆ. ಈ ಘೋಷಣೆ ಬಳಿಕ ಲಿಬರಲ್ ಪಕ್ಷದ ವಿರುದ್ಧ ಸರ್ಕಾರಿ ನೌಕರರು ಬೇಸರ ವ್ಯಕ್ತಪಡಿಸಿದ್ರೆ, ಸಾರ್ವಜನಿಕ ವಲಯದಿಂದ ಮಿಶ್ರ  ಪ್ರತಿಕ್ರಿಯೆ ವ್ಯಕ್ತವಾಗಿದೆ. ವರ್ಕ್ ಫ್ರಂ ಹೋಮ್ ರದ್ದುಗೊಳಿಸಲು ಲಿಬರಲ್ ಪಾರ್ಟಿಯೂ ಕಾರ್ಯಕ್ಷಮತೆ, ಕೆಲಸದ ವೇಗ ಸೇರಿದಂತೆ ಹಲವು ಕಾರಣಗಳನ್ನು ನೀಡಿದೆ.  ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದ ಚುನಾವಣೆ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

vuukle one pixel image
click me!