ಬಲೋಚಿ ಬೆಂಜೋ ವಾದ್ಯದಲ್ಲಿ 'ಆಯೇ ಹೋ ಮೇರಿ ಜಿಂದಗಿ' ಹಾಡು ನುಡಿಸಿದ ಪಾಕ್ ವೃದ್ಧ

By Suvarna News  |  First Published Jan 30, 2022, 6:51 PM IST
  • ಆಯೇ ಹೋ ಮೇರಿ ಜಿಂದಗಿ' ಹಾಡು ನುಡಿಸಿದ ಪಾಕ್ ವೃದ್ಧ
  • ಬಲೋಚಿ ಬೆಂಜೋ  ವಾದ್ಯದಲ್ಲಿ ಮೂಡಿಬಂತು ಸುಂದರ ಹಾಡು
  • ರಾಜಾ ಹಿಂದೂಸ್ತಾನಿ ಚಿತ್ರದ ಖ್ಯಾತ ಹಾಡು

ಕರಾಚಿ(ಜ.29): ಸಂಗೀತಕ್ಕೆ ಗಡಿ ಭಾಷೆಯ ಹಂಗಿಲ್ಲ. ಹಾಗೆಯೇ ಪ್ರತಿಭೆಗೆ ವಯಸ್ಸಿನ ಹಂಗಿಲ್ಲ. ಇದು ಮತ್ತೆ ಮತ್ತೆ ಸಾಬೀತಾಗತ್ತಿದೆ. ಪಾಕಿಸ್ತಾನದ ವೃದ್ಧರೊಬ್ಬರು 90ರ ದಶಕದ ಖ್ಯಾತ ಬಾಲಿವುಡ್‌ ಹಾಡಾದ, 'ಆಯೇ ಹೋ ಮೇರಿ ಜಿಂದಗಿ ಮೇ ತುಮ್‌ ಬಾಹರ್‌ ಬನ್‌ಕೆ' ಹಾಡನ್ನು ಬಲೋಚಿ ಸಂಗೀತಾ ಉಪಕರಣ ಬಲೋಚಿ ಬೆಂಜೋ ಮೂಲಕ ಪ್ರಸ್ತುತ ಪಡಿಸಿದ್ದು ಇದು ಎಲ್ಲರ ಹೃದಯವನ್ನು 90ರ ದಶಕಕ್ಕೆ ಕರೆದೊಯ್ಯುವಂತೆ ಮಾಡಿದೆ. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಎಲ್ಲರೂ ಬಲೋಚಿ ಬೆಂಜೋ ವಾದ್ಯದಲ್ಲಿ ಮೂಡಿ ಬಂದ ಸುಮಧುರ ಸ್ವರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಈ ಹಾಡನ್ನು ಖ್ಯಾತ ಗಾಯಕ ಉದಿತ್ ನಾರಾಯಣ್ (Udit Narayan) ಹಾಡಿದ್ದರು.  1996 ಬಾಲಿವುಡ್ ಸಿನಿಮಾ ರಾಜಾ ಹಿಂದೂಸ್ತಾನಿಯ ಖ್ಯಾತ ಹಾಡು ಇದಾಗಿದೆ. ಹಾಡು ನುಡಿಸುವ ಜೊತೆ ವೃದ್ಧನ ಮೊಗದಲ್ಲಿರುವ ಸುಂದರವಾದ ನಗು ಕೂಡ ಎಲ್ಲರ ಹೃದಯವನ್ನು ಗೆಲ್ಲುತ್ತಿದೆ. ಇನ್ನು ಈ ಹಾಡನ್ನು ಬಲೋಚಿ ಬೆಂಜೋದಲ್ಲಿ ನುಡಿಸಿದವರನ್ನು ಉಸ್ತಾದ್‌ ನೂರ್ ಭಕ್ಷ್‌ (Ustad Noor Baksh) ಎಂದು ಗುರುತಿಸಲಾಗಿದೆ. 4 ನಿಮಿಷಗಳ ಈ ವಿಡಿಯೋ ಕೇಳುಗರು ಈ ಹಾಡನ್ನು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತಿದೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by ہونی انہونی | Daniyal Ahmed (@honiunhoni)

 

'ಬಲೋಚಿ ಬೆಂಜೋ ವಾದ್ಯದಲ್ಲಿಉಸ್ತಾದ್ ನೂರ್ ಬಕ್ಷ್‌ ಅವರಿಂದ 'ಆಯೇ ಹೋ ಮೇರಿ ಜಿಂದಗಿ ಮೇ' ಹಾಡು. ಇವರಿಗೆ ಬೆಂಬಲಿಸಿ ಪ್ರೀತಿ ತೋರಿದ ಜಗತ್ತಿನಾದ್ಯಂತ ಇರುವ ಎಲ್ಲರಿಗೂ ಧನ್ಯವಾದ. ಇದು ತುಂಬಾ ಅದ್ಭುತ ಹಾಗೂ ಸಂತೋಷದಾಯಕವಾಗಿದೆ' ಎಂದು ಡೇನಿಯಲ್ ಅಹ್ಮದ್  (Daniyal Ahmed) ಎಂಬುವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 

Business Women : ಹಾಲು ಮಾರಿ ಕೋಟ್ಯಾಧೀಶೆಯಾದ ಗುಜರಾತಿನ ವೃದ್ಧೆ!

ಆತ್ಮಕ್ಕೆ ಸಿಗುವ ಶುದ್ಧವಾದ ಔಷಧವಿದು ಎಂದು ಎಂದು ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, 2.4 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

67 ವರ್ಷಗಳಿಂದ ಸ್ನಾನ ಮಾಡಿಲ್ಲ... ಆದರೂ ಇವರಷ್ಟು ಆರೋಗ್ಯವಾಗಿ ಬೇರಾರು ಇಲ್ಲ...! ಏನೀ ವಿಚಿತ್ರ

ಕೆಲದಿನಗಳ ಹಿಂದೆ ಪಾರ್ಕ್‌ನಲ್ಲಿ ಮಹಿಳೆಯೊಬ್ಬರು ಸಂಗೀತಾ ನುಡಿಸುತ್ತಿದ್ದು, ಇದರ ಧ್ವನಿಗೆ ಜಿಂಕೆಗಳು ತಲೆದೂಗಿ ಹತ್ತಿರ ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು, ನೆಟ್ಟಿಗರು ಈ ವಿಡಿಯೋಗೆ ವಾಹ್‌ ಎಂದಿದ್ದರು. ಸಂಗೀತವು ದಣಿದ ಆತ್ಮಕ್ಕೆ ಔಷಧಿ ಇದ್ದಂತೆ ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತಮ ಸಂಗೀತವು ಅತ್ಯಂತ ದುಃಖಕರವಾದ ಚಿತ್ತಸ್ಥಿತಿಗಳನ್ನು ಮೇಲಕ್ಕೆತ್ತಬಲ್ಲದು ಮತ್ತು ಮನಸ್ಸು ಮತ್ತು ಆತ್ಮ ಎರಡನ್ನೂ ಮೋಡಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಮನುಷ್ಯರಿಗೆ ಖಂಡಿತವಾಗಿಯೂ ಒಳ್ಳೆಯದ್ದು, ಆದರೆ ಪ್ರಾಣಿಗಳು ಕೂಡ ಸಂಗೀತದ ಮೋಡಿಗೆ ಒಳಗಾಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಪಾರ್ಕ್‌ನ ಮಧ್ಯದಲ್ಲಿ ಕುಳಿತು ಸಂಗೀತಾ ನುಡಿಸುತ್ತಿದ್ದು, ಇದನ್ನು ಕೇಳುವ ಜಿಂಕೆಗಳು ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಮಹಿಳೆಯ ಹತ್ತಿರ ಹತ್ತಿರ ಬರಲು ಶುರು ಮಾಡುತ್ತವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಕ್ಲಿಪ್ ಅನ್ನು ಡಯಾನಾ( Diana) ಎಂಬ ಸ್ಪ್ಯಾನಿಷ್ (Spanish) ಸೆಲ್ಲೋಯಿಸ್ಟ್( ಸೆಲ್ಲೋ ಎಂದರೆ ಗಿಟಾರ್‌ ರೀತಿಯ ಸಂಗೀತಾ ಸಾಧನ) ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಅವಳು ತನ್ಮಯಳಾಗಿ ವಾದ್ಯವನ್ನು ಅತ್ಯಂತ ಸುಂದರವಾಗಿ ನುಡಿಸುವುದನ್ನು ಕಾಣಬಹುದು. ಈ ಸಂಗೀತಾವನ್ನು ನುಡಿಸುತ್ತಿರುವಾಗಲೇ ಅತ್ತ ಕಣ್ಣಾಡಿಸಿದ ಆಕೆ ಎರಡು ಜಿಂಕೆಗಳು ತನ್ನತ್ತ ಬರುವುದನ್ನು ಕಂಡಳು. ಆಶ್ಚರ್ಯವೆಂದರೆ ಹೆದರಿ ಓಡಿ ಹೋಗುವ ಬದಲು ಈ ಪ್ರಾಣಿಗಳು ನಿಂತು ಸಂಗೀತವನ್ನು ತದೇಕಚಿತ್ತದಿಂದ ಆಲಿಸಿದವು. 

click me!