'ನಾವು ಪಾಕಿಸ್ತಾನಿ ಹಿಂದೂಗಳು- ನಾವಿದ್ದೀವಿ ಮತ್ತು ಸಂತೋಷವಾಗಿದ್ದೀವಿ'; ಏನಿದು ಹೊಸ ಇನ್ಸ್ಟಾಗ್ರಾಂ ಟ್ರೆಂಡ್?

By Suvarna NewsFirst Published Mar 21, 2024, 11:45 AM IST
Highlights

ನಾವು ಪಾಕಿಸ್ತಾನಿ ಹಿಂದೂಗಳು, ನಾವು ಇಲ್ಲಿ ಸಂತೋಷವಾಗಿದ್ದೇವೆ ಎನ್ನುವ ರೀಲ್ಸ್ ಟ್ರೆಂಡ್ ಆಗುತ್ತಿರುವ ನಡುವೆಯೇ, ಇನ್ಫ್ಲುಯೆನ್ಸರ್ ದೀಪ್ನಾ ಇದು ನಮ್ಮ ವೈಯಕ್ತಿಕ ನಿಲುವು ಎಂದೂ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: 'ನಾವು ಪಾಕಿಸ್ತಾನಿ ಹಿಂದೂಗಳು, ನಾವು ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಜನರು ಭಾವಿಸುತ್ತಾರೆ' ಎಂದು ದೀಪ್ನಾ ರಜಪೂತ್ ತಮ್ಮ ರೀಲ್‌ನಲ್ಲಿ ಹೇಳಿರುವುದು ವೈರಲ್ ಆಗಿದೆ.

ಪಾಕಿಸ್ತಾನಿ ಹಿಂದೂ ಇನ್ಫ್ಲುಯೆನ್ಸರ್ ಆಗಿರುವ ದೀಪ್ನಾ, ತನ್ನ ದೇಶದ ವಿರುದ್ಧ ಸ್ಟೀರಿಯೊಟೈಪ್‌ಗಳನ್ನು ಮುರಿಯಲು ರೀಲ್‌ನಲ್ಲಿ ಪ್ರಯತ್ನಿಸಿದ್ದಾಳೆ.

ಕರಾಚಿ ನಿವಾಸಿಯಾಗಿರುವ ದೀಪ್ನಾ, ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್‌ ಹುಟ್ಟು ಹಾಕಿದ್ದು- ಪಾಕಿಸ್ತಾನಿ ಹಿಂದೂಗಳು ಉಪಖಂಡದಲ್ಲಿ ಪ್ರಚಲಿತದಲ್ಲಿರುವ ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಸಂತೋಷವಾಗಿದ್ದಾರೆ ಎಂದು ಸಾಬೀತುಪಡಿಸಲು ಹೊರಟಿದ್ದಾರೆ.

ರೀಲ್‌ನಲ್ಲಿ, ಅವಳು ಮತ್ತು ಇತರ ಕೆಲವು ಮಹಿಳೆಯರು ಪಾಕಿಸ್ತಾನಿ ಹಿಂದೂಗಳ ಸುತ್ತಲಿನ ವಿವಿಧ ಸ್ಟೀರಿಯೊಟೈಪ್‌ಗಳನ್ನು ಹೇಳುತ್ತಾರೆ:

'ನಾವು ಪಾಕಿಸ್ತಾನಿ ಹಿಂದೂಗಳು, ನಾವು ಇಲ್ಲಿ ಸಂತೋಷವಾಗಿಲ್ಲ ಎಂದು ಜನರು ಭಾವಿಸುತ್ತಾರೆ.'
'ನಾವು ಪಾಕಿಸ್ತಾನಿ ಹಿಂದೂಗಳು, ಕ್ರಿಕೆಟ್ ಪಂದ್ಯಗಳಲ್ಲಿ ನಾವು ಭಾರತವನ್ನು ಬೆಂಬಲಿಸುತ್ತೇವೆ ಎಂದು ಜನರು ಭಾವಿಸುತ್ತಾರೆ.'
'ನಾವು ಪಾಕಿಸ್ತಾನಿ ಹಿಂದೂಗಳು, ನಮ್ಮ ಹಬ್ಬಗಳನ್ನು ನಾವು ಸಂತೋಷದಿಂದ ಆಚರಿಸುತ್ತೇವೆ' ಹೀಗೆ ದೀಪ್ನಾ ಮತ್ತಿಬ್ಬರು ಫ್ರೆಂಡ್ಸ್ ಹೇಳುತ್ತಾ ಹೋಗುತ್ತಾರೆ.


 

ದೀಪ್ನಾ ಅವರ ರೀಲ್ ಹಿಟ್ ಆಗಿದೆ, ಸುಮಾರು 3.5 ಲಕ್ಷ ಲೈಕ್ಸ್ ಮತ್ತು 12,000 ಕಾಮೆಂಟ್‌ಗಳನ್ನು ಗಳಿಸಿದೆ. ರೀಲ್ ಅನ್ನು ಹೆಚ್ಚಿನವರು ಮೆಚ್ಚಿದರೆ, ಇತರರು ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

ಈ ರೀಲ್‌ಗೆ ಗಾಯಕ ಉದಿತ್ ಉತ್ಪಾಲ್ ಕೂಡ ಹೀಗೆ ಪ್ರತಿಕ್ರಿಯಿಸಿದ್ದಾರೆ: 'ಹೆಮ್ಮೆಯ ಪಾಕಿಸ್ತಾನಿ ಹಿಂದೂ'.

ವೈರಲ್ ರೀಲ್ ಪಾಕಿಸ್ತಾನಿ ಕ್ರಿಶ್ಚಿಯನ್ನರನ್ನು ಸಹ ಎಳೆ ತಂದಿದೆ. ಒಬ್ಬ ಬಳಕೆದಾರರು ಟ್ರೆಂಡ್‌ಗೆ ಸೇರಿಸಿ: 'ನಾವು ಪಾಕಿಸ್ತಾನಿ ಕ್ರಿಶ್ಚಿಯನ್ನರು, ಖಂಡಿತವಾಗಿಯೂ ನಾವು ಅಸ್ತಿತ್ವದಲ್ಲಿದ್ದೇವೆ ಎಂದು ಜನರಿಗೆ ತಿಳಿದಿಲ್ಲ' ಎಂದಿದ್ದಾರೆ.

ಸಿಂಧ್ ಪ್ರಾಂತ್ಯದ ಮಿರ್ಪುರ್ಖಾಸ್ ನಗರದ ದೀಪ್ನಾ, ಕರಾಚಿಯಿಂದ ThePrint ನೊಂದಿಗೆ ಮಾತನಾಡಿ 'ನಾವು ಟ್ರೆಂಡಿಂಗ್ ರೀಲ್ ಸ್ವರೂಪವನ್ನು ಬಳಸಿದ್ದೇವೆ ಮತ್ತು ಅದಕ್ಕೆ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸಿದ್ದೇವೆ. ನಾವು ಏನೇ ಮಾತನಾಡಿದರೂ ನಮ್ಮ ಸ್ವಂತ ಅನುಭವಗಳನ್ನು ಆಧರಿಸಿದೆ ಮತ್ತು ವ್ಯಕ್ತಿಗಳಾಗಿ ನಾವು ಅದಕ್ಕೆ ಬದ್ಧರಾಗಿರುತ್ತೇವೆ' ಎಂದು ಹೇಳಿದ್ದಾರೆ. ಜೊತೆಗೇ, ತಾನು ಅಥವಾ ರೀಲ್‌ನಲ್ಲಿರುವ ತನ್ನ ಸ್ನೇಹಿತರು ಇಡೀ ಪಾಕಿಸ್ತಾನಿ ಹಿಂದೂ ಸಮುದಾಯವನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿರುವ ದೀಪ್ನಾ, 'ಇದು ಮೂರು ಪಾಕಿಸ್ತಾನಿ ಹಿಂದೂ ಹುಡುಗಿಯರ ಗ್ರಹಿಕೆಯಾಗಿದೆ. ನಾವು ಶಿಕ್ಷಣವನ್ನು ಪಡೆಯಲು ಸಾಕಷ್ಟು ಸವಲತ್ತು ಹೊಂದಿದ್ದೇವೆ ಮತ್ತು ದೇವರ ದಯೆಯಿಂದ ಸಾಕಷ್ಟು ಸಂಪನ್ಮೂಲಗಳೊಂದಿಗೆ ಆರ್ಥಿಕವಾಗಿ ಸ್ವತಂತ್ರ ಹಿನ್ನೆಲೆಯಿಂದ ಬಂದವರು. ಪಾಕಿಸ್ತಾನದಲ್ಲಿರುವ ಹಿಂದೂಗಳ ಗ್ರಹಿಕೆಗಳು, ಕಥೆಗಳು, ಅಭಿಪ್ರಾಯಗಳು ಅವರ ಲಿಂಗ, ಪ್ರದೇಶ, ಜಾತಿ, ನಗರ ಮತ್ತು ವಯಸ್ಸಿನ ಆಧಾರದ ಮೇಲೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ' ಎಂದಿದ್ದಾರೆ. 

'ನಿಮ್ಮ ವಾಶ್‌ರೂಂ ಬಳಸ್ಬೋದಾ? ತುಂಬಾ ಅರ್ಜೆಂಟ್' ಮನೆಯೊಳಗೆ ನುಗ್ಗಿ ಟೆಕ್ಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಸ್ವಿಗ್ಗಿ ಬಾಯ್
 

ಈ ಟ್ರೆಂಡ್ ಟಿಕ್‌ಟಾಕ್‌ನೊಂದಿಗೆ ಪ್ರಾರಂಭವಾಯಿತು, ಅಲ್ಲಿ ಬಳಕೆದಾರರು ತಮ್ಮ ಉದ್ಯೋಗ ಅಥವಾ ವೈಯಕ್ತಿಕ ಗುರುತಿಗೆ ಲಿಂಕ್ ಮಾಡಲಾದ ಸ್ಟೀರಿಯೊಟೈಪ್‌ಗಳನ್ನು ತಮಾಷೆಯಾಗಿ ಅಣಕಿಸುತ್ತಾರೆ. ಅದನ್ನೇ ಬಳಸಿಕೊಂಡು ದೀಪ್ನಾ ಪಾಕಿಸ್ತಾನಿ ಹಿಂದೂಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಎದುರಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಈ ರೀಲನ್ನು ತಾನು ಯಾವುದೇ ಒತ್ತಾಯದಿಂದ ಮಾಡಿಲ್ಲ ಎಂದೂ ಹೇಳಿದ್ದಾರೆ.

2ನೇ ಹೆಚ್ಚು ಜನಸಂಖ್ಯೆ
ಇಸ್ಲಾಂ ಧರ್ಮದ ನಂತರ, ಹಿಂದೂ ಧರ್ಮವು ಪಾಕಿಸ್ತಾನದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮವಾಗಿದೆ. 2017 ರ ಪಾಕಿಸ್ತಾನಿ ಜನಗಣತಿಯ ಪ್ರಕಾರ ಹಿಂದೂಗಳು ಪಾಕಿಸ್ತಾನದ ಜನಸಂಖ್ಯೆಯ 2.14 ಪ್ರತಿಶತ ಅಥವಾ ಸರಿಸುಮಾರು 4.4 ಮಿಲಿಯನ್ ವ್ಯಕ್ತಿಗಳನ್ನು ಹೊಂದಿದ್ದಾರೆ.

2018 ರ ಮೈನಾರಿಟಿ ವಾಚ್ ವರದಿಯ ಪ್ರಕಾರ, ಧಾರ್ಮಿಕ ಉಗ್ರಗಾಮಿಗಳ ಕಿರುಕುಳವು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ಕಳವಳದ ಮೂಲವಾಗಿದೆ, ಅವರು ತಮಗೆ ಅಧಿಕೃತ ರಕ್ಷಣೆಯ ಕೊರತೆಯ ಬಗ್ಗೆ ವಿಷಾದಿಸುತ್ತಾರೆ. ಹಿಂದೂಗಳು, ಕ್ರಿಶ್ಚಿಯನ್ನರಂತೆ, ಬಲವಂತದ ಧಾರ್ಮಿಕ ಮತಾಂತರದ ಸಮಸ್ಯೆಯನ್ನು ವಾಡಿಕೆಯಂತೆ ಎದುರಿಸುತ್ತಾರೆ. ತಮ್ಮ ಪೂಜಾ ಸ್ಥಳಗಳಿಗೂ ಕಿರುಕುಳ ಮತ್ತು ಬೆದರಿಕೆಗಳ ಬಗ್ಗೆ ಅಲ್ಪಸಂಖ್ಯಾತ ಗುಂಪುಗಳು ಕಳವಳ ವ್ಯಕ್ತಪಡಿಸಿವೆ.

 

click me!