ಹಿಂದೂ ಯುವತಿಯೊಂದಿಗೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆದ ಪಾಕ್ ಕ್ರಿಕೆಟಿಗ; ಮತಾಂತರಕ್ಕೆ ಮುಂದಾದ ಚೆಲುವೆ!

Published : Mar 17, 2025, 03:11 PM ISTUpdated : Mar 17, 2025, 03:49 PM IST
ಹಿಂದೂ ಯುವತಿಯೊಂದಿಗೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆದ ಪಾಕ್ ಕ್ರಿಕೆಟಿಗ; ಮತಾಂತರಕ್ಕೆ ಮುಂದಾದ ಚೆಲುವೆ!

ಸಾರಾಂಶ

ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಮೂಲದ ಪೂಜಾ ಬೊಮನ್ ಎಂಬ ಯುವತಿಯೊಂದಿಗೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆಗಿದ್ದಾರೆ. ಪೂಜಾ ಇಸ್ಲಾಂಗೆ ಮತಾಂತರಗೊಳ್ಳಲು ಒಪ್ಪಿಕೊಂಡಿದ್ದಾರೆ ಎಂಬ ವರದಿಯಿದೆ.

ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗನೋರ್ವ ಭಾರತ ಮೂಲದ ಹಿಂದೂ ಯುವತಿಯೊಂದಿಗೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆಗಿದ್ದು, ಇಬ್ಬರು ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿವೆ. ಕ್ರಿಕೆಟಿಗ ತನ್ನ ಇನ್‌ಸ್ಟಾಗ್ರಾಂನಲ್ಲಿ ಪ್ರೇಯಸಿ ಜೊತೆಗಿನ ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಪಾಕ್ ಕ್ರಿಕೆಟಿಗನ ಪ್ರೇಯಸಿಯಾಗಿರುವ ಯುವತಿ ಇಸ್ಲಾಂಗೆ ಮತಾಂತರಗೊಳ್ಳಲು ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಯಾರು ಈ ಪಾಕಿಸ್ತಾನದ ಕ್ರಿಕೆಟಿಗ ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 

ಪಾಕ್ ಕ್ರಿಕೆಟಿಗ ರಜಾ ಹಸನ್ ಅವರು ಭಾರತದ ಪೂಜಾ ಬೊಮನ್ ಎಂಬ ಯುವತಿಯೊಂದಿಗೆ ಎಂಗೇಜ್ ಆಗಿರುವ ವಿಷಯವನ್ನು 2024ರಲ್ಲಿ ಹಂಚಿಕೊಂಡಿದ್ದರು. ರಜಾ ಹಸನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಜೊತೆಗಿನ ಫೋಟೋ ಹಂಚಿಕೊಂಡು ತಮ್ಮಿಬ್ಬರ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು. ನ್ಯೂಯಾರ್ಕ್‌ನಲ್ಲಿ  ಇಬ್ಬರ ಮಧ್ಯೆ ಪ್ರೇಮಾಂಕುರ ಉಂಟಾಗಿತ್ತು. ಸದ್ಯ ಇಬ್ಬರು ನ್ಯೂಯಾರ್ಕ್‌ನಲ್ಲಿಯೇ ಸೆಟೆಲ್ ಆಗಿದ್ದಾರೆ.

ರಜಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಬಗ್ಗೆ ಕುರಿತ ಸಂತೋಷ ಹಂಚಿಕೊಂಡಿದ್ದರು. ಇಂದು ನಾನು ಪೂಜಾ ಜೊತೆ ಎಂಗೇಜ್ ಆಗಿದ್ದೇನೆ. ನಾನು ನನ್ನ ಜೀವನದ ಪ್ರೀತಿಯನ್ನು ಎಂದೆಂದಿಗೂ ನನ್ನದಾಗಿರಬೇಕೆಂದು ಕೇಳಿದೆ, ಮತ್ತು ಅವಳು ಹೌದು ಎಂದು ಹೇಳಿದಳು! ಒಟ್ಟಿಗೆ ನಮ್ಮ ಪ್ರಯಾಣಕ್ಕಾಗಿ ಉತ್ಸುಕನಾಗಿದ್ದೇನೆ" ಎಂದು ರಜಾ ಬರೆದುಕೊಂಡಿದ್ದರು. 

2012ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿಟ್ವೆಂಟಿ ಪಂದ್ಯದಲ್ಲಿ ಪಾಕಿಸ್ತಾನ ಪರವಾಗಿ ಅಖಾಡಕ್ಕಿಳಿದರು. ನಂತರ ಮತ್ತೊಮ್ಮೆ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ  ಪಂದ್ಯದಲ್ಲಿಯೂ ರಜಾ ಸಹನ್ ಆಡಿದ್ದಾರೆ. ರಜಾ ಹಸನ್ ಅಲ್ಪಾವಧಿಯ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಂದು ಏಕದಿನ ಅಂತರಾಷ್ಟ್ರೀಯ (ODI) ಮತ್ತು ಹತ್ತು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ODIಗಳಲ್ಲಿ ಒಂದು ವಿಕೆಟ್ ಮತ್ತು T20I ಗಳಲ್ಲಿ ಹತ್ತು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಆದ್ರೂ ಪಾಕಿಸ್ತಾನ ತಂಡದಿಂದ ದೂರ ಉಳಿದಿದ್ದಾರೆ. 

ಇದನ್ನೂ ಓದಿ: ದುಬೈ ಮನೆಯಿಂದ ಶೋಯೆಬ್‌ ಮಲೀಕ್‌ನ ಹೊರಹಾಕಿದ ಸಾನಿಯಾ ಮಿರ್ಜಾ!

ಪಾಕ್ ಯುವಕರನ್ನು ಮದುವೆಯಾದ ಭಾರತೀಯರು
2010ರಲ್ಲಿ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲೀಕ್ ಅವರನ್ನು ಮದುವೆಯಾಗಿದ್ದರು. 2024ರಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲೀಕ್ ಡಿವೋರ್ಸ್ ಪಡೆದುಕೊಂಡು ಬೇರೆ ಬೇರೆಯಾಗಿದ್ದಾರೆ. ಮಾಜಿ ಕ್ರಿಕೆಟಿಗ ಮೊಸಿನ್ ಖಾನ್, ಭಾರತದ ನಟಿ ರೀನಾ ರಾಯ್ ಅವರನ್ನು ಮದುವೆಯಾಗಿದ್ದರು. 1990ರಲ್ಲಿ ಇಬ್ಬರು ವಿಚ್ಛೇದನ ಪಡೆದರು. ಪಾಕಿಸ್ತಾನ ತಂಡದ ಫಾಸ್ಟ್ ಬೌಲರ್ ಹಸಲ್ ಅಲಿ ಸಹ ಭಾರತ ಮೂಲದ ಸಮಿಯಾ ಅರ್ಜೂ ಎಂಬವರನ್ನು 2019ರಲ್ಲಿ ಮದುವೆಯಾಗಿದ್ದರು. 

ಇದನ್ನೂ ಓದಿ: ಸಾನಿಯಾಗೆ ಇದೇನಾಯ್ತು? ಚಾಪೆ ಹಾಸಿ ಅಲ್ಲಾಹ್​ನ ಮುಂದೆ ಅಳೋದೇ ಉತ್ತಮ ಎಂದದ್ಯಾಕೆ ಟೆನಿಸ್ ತಾರೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!