ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ ಇದೀಗ ಒಂದು ವರ್ಷ ಕಳೆದಿದೆ. ಕಣಿವೆ ರಾಜ್ಯದಲ್ಲಿ ಇದರ ಸಂಭ್ರಮ ಮನೆ ಮಾಡಿದೆ. ಆದರೆ ಪಾಕಿಸ್ತಾನದ ತಳಮಳ ಇನ್ನೂ ನಿಂತಿಲ್ಲ. ಕಾಶ್ಮೀರ ಸಂಪೂರ್ಣವಾಗಿ ಕೈತಪ್ಪಿ ಹೋಗಲಿದೆ ಅನ್ನೋ ಆತಂಕದ ನಡುವೆ ಇದೀಗ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ಹೋರಾಟದ ದಾಳ ಉರುಳಿಸಿದ್ದಾರೆ.
ನವದೆಹಲಿ(ಆ.06): ಜಮ್ಮ ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿ ಇದೀಗ ಒಂದು ವರ್ಷ ಕಳೆದಿದೆ. ಜಮ್ಮ ಮುತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಕೇಂದ್ರಾಡಳಿತ ಪ್ರದೇಶವ್ನಾಗಿ ಘೋಷಿಸಿದ ವರ್ಷಾಚರಣೆ ಆಚರಿಸಲಾಗುತ್ತಿದೆ. ಇತ್ತ ಪಾಕಿಸ್ತಾನದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಭಾರತದ ಆಡಳಿತದಲ್ಲಿರುವ ಕಾಶ್ಮೀರದ ಮೇಲೆ ಹಕ್ಕು ಸಾಧಿಸುವ ಪಾಕಿಸ್ತಾನ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದೀಗ ಕಾಶ್ಮೀರಕ್ಕಾಗಿ ನಿರಂತರ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಪೂರ್ತಿ ಕಾಶ್ಮೀರ ತನ್ನದೆನ್ನುವ ಪಾಕ್‌ನ ಭೂಪಟ ಬಿಡುಗಡೆ!
ಪಾಕಿಸ್ತಾನ ಆಕ್ರಮಿತ ಶಾಸಕಾಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಕಾಶ್ಮೀರದ ಮೇಲೆ ಭಾರತದ ನಡೆಸುತ್ತಿರುವ ದಬ್ಬಾಳಿಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುತ್ತಿದ್ದೇವೆ. ಹಲವು ಅಂತಾರಾಷ್ಟ್ರೀಯ ನಾಯಕರಿಗೆ ಕಾಶ್ಮೀರದಲ್ಲಿ ಏನಾಗುತ್ತಿದೆ ಅನ್ನೋದೇ ತಿಳಿದಿಲ್ಲ. ಇನ್ನು ಕೆಲ ದೇಶಗಳು ಆರ್ಥಿಕ ಚಟುವಟಿಕೆ ಕಾರಣ ಭಾರತದ ವಿರುದ್ಧ ಮಾತನಾಡುತ್ತಿಲ್ಲ. ಹೀಗಾಗಿ ಕಾಶ್ಮೀರ ಹೋರಾಟದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಆದರೆ ಹೋರಾಟ ನಿಲ್ಲಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತ ಅವಮಾನಿಸಲು ಪಾಕಿಸ್ತಾನ 18 ಕುತಂತ್ರ!
ನಮ್ಮ ಸರ್ಕಾರ ಆಗಮಿಸಿದ ಬಳಿಕ ಕಾಶ್ಮೀರ ವಿಚಾರವನ್ನು ಪ್ರಮುಖವಾಗಿ ಕೈಗೆತ್ತಿಕೊಂಡಿದ್ದೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪ ಮಾಡಿದ್ದೇವೆ. ಇದರಿಂದ ಬಹುತೇಕ ರಾಷ್ಟ್ರಗಳಿಗೆ ಕಾಶ್ಮೀರ ಸಮಸ್ಯೆಯ ಅರಿವಾಗಿದೆ. ಭಾರತದ ಇನ್ನೊಂದು ಮುಖದ ಪರಿಚಯವಾಗಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇಂಗ್ಲೆಂಡ್ ಪ್ರಧಾನಿ ಬೊರಿಸ್ ಜಾನ್ಸನ್, ಜರ್ಮನ್ ಚಾನ್ಸಲರ್ ಎಂಜೆಲಾ ಮಾರ್ಕೆಲ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮಾರ್ಕೊನ್‌ಗೆ ಕಾಶ್ಮೀರ ವಿಚಾರವನ್ನು ಹೇಳಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಈಗಾಗಲೇ ಪಾಕಿಸ್ತಾನ ಕಾಶ್ಮೀರ ಗಡಿ ಭಾಗ ಹಾಗೂ ಗುಜರಾತ್ ಗಡಿ ಭಾಗಗಳನ್ನು ಸೇರಿಸಿಕೊಂಡು ಹೊಸ ನಕ್ಷೆ ಬಿಡುಗಡೆ ಮಾಡಿದೆ. ಈ ನಿರ್ಧಾರವನ್ನು ಇಮ್ರಾನ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿ ಇಲ್ಲ ಎಂದು ಎಚ್ಚರಿಸಿದ್ದಾರೆ.