
ಏಂಜಲೀಸ್(ಆ.06): ಕೊರೋನಾ ವೈರಸ್ ತಗಲಿದರೆ ಕೆಲವರಲ್ಲಿ ಅದರ ಲಕ್ಷಣಗಳು ಜೋರಾಗಿ ಗೋಚರಿಸುತ್ತವೆ, ಇನ್ನು ಕೆಲವರಲ್ಲಿ ಕಡಿಮೆ ಲಕ್ಷಣಗಳು ಗೋಚರಿಸುತ್ತವೆ. ಇದು ಏಕೆ ಎಂಬುದಕ್ಕೆ ಅಮೆರಿಕದ ವಿಜ್ಞಾನಿಗಳು ಕಾರಣ ಪತ್ತೆಹಚ್ಚಿದ್ದಾರೆ.
ದೇಹದ ರೋಗನಿರೋಧ ವ್ಯವಸ್ಥೆಯಲ್ಲಿರುವ ‘ಟಿ’ ಕೋಶಗಳು ಸಾಮಾನ್ಯ ನೆಗಡಿ ಉಂಟಾಗುವುದನ್ನು ಮೊದಲೇ ಗುರುತಿಸಿ ಅವುಗಳ ವಿರುದ್ಧ ಹೋರಾಡುವ ರೀತಿಯಲ್ಲಿ ಕೆಲವರಲ್ಲಿ ಕೊರೋನಾ ವಿರುದ್ಧವೂ ಹೋರಾಡುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ಈ ಕುರಿತು ಸಂಶೋಧನೆ ನಡೆಸಿದ ಲಾ ಜೊಲ್ಲಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಟಿ ಸೆಲ್‌ಗಳು ಇದ್ದರೆ ಅವು ಕೊರೋನಾ ಚಿಕಿತ್ಸೆಯ ಮೇಲೆ ಏನಾದರೂ ಪರಿಣಾಮ ಉಂಟುಮಾಡುತ್ತವೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ದೇಹದಲ್ಲಿ ಟಿ ಸೆಲ್‌ಗಳು ಕ್ರಿಯಾಶೀಲವಾಗಿದ್ದರೆ ಅಂತಹವರ ಮೇಲೆ ಕೊರೋನಾದ ಪ್ರಭಾವ ಕಡಿಮೆಯಾಗಬಹುದು. ಏಕೆಂದರೆ ಈ ಕೋಶಗಳು ಕೊರೋನಾ ವೈರಸ್ ದೇಹಕ್ಕೆ ಪ್ರವೇಶಿಸುತ್ತಿದ್ದಂತೆ ಅದೊಂದು ಸಾಮಾನ್ಯ ನೆಗಡಿಯ ವೈರಸ್ ಎಂದು ಭಾವಿಸಿ ಹೋರಾಡಲು ಶುರುಮಾಡುತ್ತವೆ. ಅದರಿಂದ ಹೆಚ್ಚಿನವರಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ