ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್‌ ಅಮೋನಿಯಂ ನೈಟ್ರೇಟ್‌!

Published : Aug 06, 2020, 07:43 AM ISTUpdated : Aug 06, 2020, 09:16 AM IST
ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್‌ ಅಮೋನಿಯಂ ನೈಟ್ರೇಟ್‌!

ಸಾರಾಂಶ

ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್‌ ಅಮೋನಿಯಂ ನೈಟ್ರೇಟ್‌!| 100ಕ್ಕೂ ಹೆಚ್ಚು ಮಂದಿ ಸಾವು, 4000ಕ್ಕೂ ಅಧಿಕ ಮಂದಿಗೆ ಗಾಯ| ಸ್ಫೋಟದ ತೀವ್ರತೆಗೆ ಬೂದಿಯಾದ ಬಂದರು| ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದ ಶೇ.85ರಷ್ಟುಆಹಾರ ಧಾನ್ಯ ಅಗ್ನಿ ಪಾಲು| ದೇಶದ ಶೇ.90ರಷ್ಟುಆಮದು ನಡೆಯುತ್ತಿದ್ದದ್ದು ಇದೇ ಬಂದಿರಿನಿಂದ

ಬೈರೂತ್(ಆ.06)‌: ಲೆಬಾನಾನ್‌ ರಾಜಧಾನಿ ಬೈರೂತ್‌ ಬಂದರಿನಲ್ಲಿ ಮಂಗಳವಾರ ನಡೆದ ಸ್ಫೋಟಕ್ಕೆ, ಅಲ್ಲಿ ಸಂಗ್ರಹಿಸಿಡಲಾಗಿದ್ದ 2750 ಟನ್‌ ತೂಕದ ಅಮೋನಿಯಂ ನೈಟ್ರೇಟ್‌ ರಾಸಾಯನಿಕ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಈ ಸ್ಫೋಟಕ ಪದಾರ್ಥವನ್ನು ವಶಪಡಿಸಿಕೊಂಡು 2014ರಿಂದ ಬಂದರಿನಲ್ಲೇ ಸಂಗ್ರಹಿಸಿಡಲಾಗಿತ್ತು. ಅದರೆ ಈ ಬಗ್ಗೆ ಯಾವುದೇ ಮುಂಜಾಗ್ರತೆ ವಹಿಸಿದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಈ ನಡುವೆ ಸ್ಫೋಟದಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 4000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಂಡು ಕೇಳರಿಯದ ಭಾರೀ ಸ್ಫೋಟ; ಇಡೀ ನಗರವೇ ಧ್ವಂಸ!

ಅವಶೇಷಗಳಿಂದ ತುಂಬಿ ಹೋದ ಬೈರೂತ್‌:

ಭಾರೀ ಸ್ಫೋಟದ ತೀವ್ರತೆಗೆ ನೂರಾರು ಗಗನ ಚುಂಬಿ ಕಟ್ಟಡಗಳು ಧರಾಶಾಹಿಯಾಗಿದ್ದು, ಅವುಗಳ ಅವಶೇಷಗಳು ನಗರದಾದ್ಯಂತ ತುಂಬಿ ಹೋಗಿವೆ. ಇಡೀ ಬಂದರು ಬೂದಿಯಾಗಿ ಮಾರ್ಪಟ್ಟಿದೆ. ರಸಾಯನಿಕ ಸ್ಫೋಟಕ್ಕೆ ಎದ್ದಿರುವ ಹೊಗೆ ಮುಂದುವರಿದಿದ್ದು, ಪಕ್ಕದ ಕಟ್ಟಡಗಳಿಗೂ ಬೆಂಕಿ ಹರಡಿದೆ. ಹಲವು ಮನೆಗಳು, ವಸತಿ ಸಮುಚ್ಚಾಯಗಳು ಕಾಂಕ್ರೀಟ್‌ ಕಸಗಳಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಮನೆ ಕಳೆದುಕೊಂಡವರ ಆಕ್ರಂದನ, ಸಂಬಂಧಿಕರ ಆರೋಗ್ಯ ವರ್ತಮಾನ ತಿಳಿಯಲು ಆಸ್ಪತ್ರೆ ಮುಂದೆ ಸಾಲುಗಟ್ಟಿರುವ ಜನರ ದು:ಖ ಹೃದಯ ಕಲುಕುವಂತಿತ್ತು.

ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್: ಹೌಹಾರಿದ ಪೊಲೀಸರು!

ಆರ್ಥಿಕ ಕುಸಿತದ ವೇಳೆಯೇ ಮಹಾಸ್ಫೋಟ:

ಆರ್ಥಿಕ ಕುಸಿತಕ್ಕೆ ತತ್ತರಿಸಿ ಹೋಗಿರುವ ಲೆಬನಾನ್‌ಗೆ ಈ ಅವಘಢ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಲ ದಿನಗಳ ಹಿಂದಷ್ಟೇ ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೇ ಈ ಸ್ಫೋಟ ಮತ್ತಷ್ಟುಆಘಾತ ಉಂಟು ಮಾಡಿದೆ. ದೇಶಕ್ಕೆ ಆಮದಾಗುವ ಶೇ.90ರಷ್ಟುವಸ್ತುಗಳು ಇದೇ ಬಂದರಿನ ಮೂಲಕ ದೇಶಕ್ಕೆ ಬರುತ್ತಿತ್ತು. ಅಲ್ಲದೇ ಸ್ಫೋಟ ಸ್ಥಳದಲ್ಲಿ ದೇಶದ ಶೇ.85ರಷ್ಟುಧಾನ್ಯಗಳ ಸಂಗ್ರಹ ಕೂಡ ಇತ್ತು ಎಂದು ಗೊತ್ತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?