ಸಿಂದೂರಕ್ಕೆ ಬೆಚ್ಚಿ ಅವಿತಿದ್ದ ಪಾಕ್‌ ಯುದ್ದ ನೌಕೆಗಳು!

Kannadaprabha News   | Kannada Prabha
Published : Aug 19, 2025, 06:20 AM IST
Operation Sindoor

ಸಾರಾಂಶ

ಆಪರೇಷನ್‌ ಸಿಂದೂರದಿಂದ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಪಾಕಿಸ್ತಾನದ ಅಧ್ಯಕ್ಷರು ಸೇರಿದಂತೆ ನಾಯಕರೆಲ್ಲಾ ಭಾರತದ ಮೇಲೆ ಪ್ರತೀಕಾರದ ಮಾತನ್ನಾಡುತ್ತಿದ್ದಾರೆ. ಅವರ ನುಡಿಗೂ ನಡೆಗೂ ಸಂಬಂಧವೇ ಇಲ್ಲ ಎಂಬುದು ಉಪಗ್ರಹ ಚಿತ್ರಗಳು ಹೇಳಿವೆ.

ನವದೆಹಲಿ: ಆಪರೇಷನ್‌ ಸಿಂದೂರದಿಂದ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಪಾಕಿಸ್ತಾನದ ಅಧ್ಯಕ್ಷರು ಸೇರಿದಂತೆ ನಾಯಕರೆಲ್ಲಾ ಭಾರತದ ಮೇಲೆ ಪ್ರತೀಕಾರದ ಮಾತನ್ನಾಡುತ್ತಿದ್ದಾರೆ. ಆದರೆ ಅವರ ನುಡಿಗೂ ನಡೆಗೂ ಸಂಬಂಧವೇ ಇಲ್ಲ ಎಂಬುದು ಉಪಗ್ರಹ ಚಿತ್ರಗಳು ಹೇಳಿವೆ.

ಸಿಂದೂರದ ವೇಳೆ ಎರಡೂ ದೇಶಗಳ ವಾಯುಪಡೆ ಮತ್ತು ಸೇನೆ ಮಾತ್ರ ಕದನ ಕಣದಲ್ಲಿದ್ದವು. ಆದರೆ ಭಾರತದ ನೌಕಾಪಡೆಯೂ ದಾಳಿಗೆ ಸನ್ನದ್ಧವಾಗಿತ್ತು. ಆದರೆ ಸಮರ ಉತ್ತುಂಗದಲ್ಲಿದ್ದ ವೇಳೆಯಲ್ಲಿ ಕರಾಚಿಯಲ್ಲಿದ್ದ ಯುದ್ಧನೌಕೆಗಳನ್ನು ವಾಣಿಜ್ಯ ಟರ್ಮಿನಲ್‌ಗಳತ್ತ ಸಾಗಿದ್ದವು. ಕೆಲವು ಭಾರತದಿಂದ ಆದಷ್ಟು ದೂರ, ಪಶ್ಚಿಮದಲ್ಲಿರುವ ಗ್ವಾದರ್ ನೆಲೆಯಲ್ಲಿ ಆಶ್ರಯ ಪಡೆದಿದ್ದುದು ಚಿತ್ರದಲ್ಲಿ ಕಂಡುಬಂದಿದೆ.

ಭಾರತ ವ್ಯಂಗ್ಯ:

1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಕರಾಚಿ ಬಂದರಿನ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದ ನಿವೃತ್ತ ವೈಸ್ ಅಡ್ಮಿರಲ್ ಎಸ್.ಸಿ. ಸುರೇಶ ಬಂಗೇರ ಮಾತನಾಡಿ, ‘ಮೇ 7ರಂದು ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಾವು ಆಕ್ರಮಣ ಮಾಡಿದಾಗ ಅವರ ಮೂರೂ ಪಡೆಗಳು ದಾಳಿಯನ್ನು ಎದುರಿಸಲು ಸಿದ್ಧವಾಗಿ ಇರಬೇಕಿತ್ತು. ಆದರೆ ಅವರ ಯುದ್ಧನೌಕೆಗಳು ಬಂದರಿನಲ್ಲೇ ಇದ್ದದ್ದನ್ನು ನೋಡಿದರೆ, ಅವರ ಸೇನಾ ಸಿದ್ಧತೆಗಳ ಬಗ್ಗೆ ಪ್ರಶ್ನೆ ಉದ್ಭವಿಸುವಂತಿದೆ’ ಎಂದು ಅಣಕಿಸಿದ್ದಾರೆ.

‘ದಾಳಿಯಿಂದ ತಪ್ಪಿಸಿಕೊಳ್ಳಲು ವಾಯುಪಡೆ ನಾಗರಿಕ ವಿಮಾನಗಳನ್ನು ಗುರಾಣಿಯ ರೀತಿ ಬಳಸಿದಂತೆ, ನೌಕೆಗಳ ಮೇಲಿನ ದಾಳಿಯನ್ನು ತಪ್ಪಿಸಲು ಅವುಗಳನ್ನು ವಾಣಿಜ್ಯ ಬಂದರಿನಲ್ಲಿ ನಿಲ್ಲಿಸಿದ್ದರು’ ಎಂದು ಟೀಕಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!