ಐಎಂಎಫ್‌ ಸಾಲಕ್ಕಾಗಿ ವಿಮಾನ ಕಂಪನಿ ಮಾರಾಟಕ್ಕಿಟ್ಟ ಪಾಕ್‌!

Kannadaprabha News   | Kannada Prabha
Published : Dec 05, 2025, 04:36 AM IST
PIA Plane

ಸಾರಾಂಶ

ಆರ್ಥಿಕವಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯಿಂದ ಸಾಲಕ್ಕೆ ಕೈಚಾಚಿದ್ದ ಪಾಕಿಸ್ತಾನ, ಇದೀಗ ಅದೇ ಐಎಂಎಫ್‌ನ ಷರತ್ತಿನಂತೆ ತನ್ನ ಒಡೆತನದ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಅನ್ನೇ ಮಾರಲು ಮುಂದಾಗಿದೆ.

ಇಸ್ಲಾಮಾಬಾದ್‌: ಆರ್ಥಿಕವಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯಿಂದ ಸಾಲಕ್ಕೆ ಕೈಚಾಚಿದ್ದ ಪಾಕಿಸ್ತಾನ, ಇದೀಗ ಅದೇ ಐಎಂಎಫ್‌ನ ಷರತ್ತಿನಂತೆ ತನ್ನ ಒಡೆತನದ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಅನ್ನೇ ಮಾರಲು ಮುಂದಾಗಿದೆ.

ಕಳೆದ ವರ್ಷ ಪಾಕ್‌ಗೆ ಐಎಂಎಫ್‌ 62 ಸಾವಿರ ಕೋಟಿ ರು. ಸಾಲದ ಘೋಷಣೆ

ಕಳೆದ ವರ್ಷ ಪಾಕ್‌ಗೆ ಐಎಂಎಫ್‌ 62 ಸಾವಿರ ಕೋಟಿ ರು. (7 ಶತಕೋಟಿ ಡಾಲರ್‌) ಸಾಲದ ಘೋಷಣೆ ಮಾಡಿತ್ತು. ಆದರೆ ಅದಕ್ಕೆ ಕೆಲವೊಂದು ಷರತ್ತು ವಿಧಿಸಿತ್ತು. ಅದರಲ್ಲಿ ಭಾರೀ ನಷ್ಟದಲ್ಲಿರುವ ಪಿಐಎ ಮಾರಾಟ, ಪೆಟ್ರೋಲಿಯಂ, ಇಂಧನ, ವಿದ್ಯುತ್‌ ಬೆಲೆ ಏರಿಕೆ, ಅಧಿಕಾರಿಗಳ ವೆಚ್ಚ ಕಡಿತ ಮೊದಲಾದ ಅಂಶಗಳು ಕೂಡ ಸೇರಿದ್ದವು. ಅದರಂತೆ ಇದೀಗ ಡಿ.23ರಂದು ಪಿಐಎ ಹರಾಜಿಗೆ ನಿರ್ಧರಿಸಲಾಗಿದೆ. ಇದು ಕಳೆದ 2 ದಶಕದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರ ಖಾಸಗೀಕರಣವಾಗಿದೆ.

ಫೌಜಿ ಫರ್ಟಿಲೈಸರ್ ಸೇರಿ 4 ಕಂಪನಿಗಳು ಮುಂದೆ

ಪಿಐಎ ಖರೀದಿಗೆ ಮಿಲಿಟರಿಯೇ ಬಹುಪಾಲು ಪಾಲು ಷೇರು ಹೊಂದಿರುವ ಫೌಜಿ ಫರ್ಟಿಲೈಸರ್ ಸೇರಿ 4 ಕಂಪನಿಗಳು ಮುಂದೆ ಬಂದಿವೆ.

ಪಿಎಐ ಬಳಿ ಇರುವ 33 ವಿಮಾನಗಳ ಪೈಕಿ 17 ಹಾರಲು ಆಗದ ಸ್ಥಿತಿಯಲ್ಲಿವೆ. ಜೊತೆಗೆ ಸಂಸ್ಥೆಯ ಶೇ.30ರಷ್ಟು ಪೈಲಟ್‌ಗಳು ನಕಲಿ ಲೈಸೆನ್ಸ್‌ ಹೊಂದಿದ್ದಾರೆ ಎಂಬ ಆರೋಪ ಕೂಡ ಇದೆ. ಐಎಂಎಫ್‌ನಿಂದ ಅತಿ ಹೆಚ್ಚು ಸಾಲ ಪಡೆದ ದೇಶಗಳ ಪೈಕಿ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.

- ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನಕ್ಕೆ 62 ಸಾವಿರ ಕೋಟಿ ರು. ಸಾಲ ಕೊಡಲು ಐಎಂಎಫ್‌ ಅಸ್ತು

- ಆದರೆ ನಷ್ಟದಲ್ಲಿರುವ ವಿಮಾನಯಾನ ಕಂಪನಿ ಮಾರಾಟ ಮಾಡುವುದು ಸೇರಿ ಹಲವು ಷರತ್ತು ಹೇರಿಕೆ

- ಹೀಗಾಗಿ ಏರ್‌ಲೈನ್ಸ್‌ ಕಂಪನಿ ಮಾರಲು ಮುಂದಾದ ಪಾಕ್‌ ಸರ್ಕಾರ. 2 ದಶಕದಲ್ಲಿ ಮೊದಲ ಖಾಸಗೀಕರಣ

- ವಿಮಾನಯಾನ ಕಂಪನಿಯಲ್ಲಿ ಒಟ್ಟು 33 ವಿಮಾನ ಇವೆ. ಆ ಪೈಕಿ 17 ಹಾರಾಡಲು ಆಗದ ಸ್ಥಿತಿಯಲ್ಲಿವೆ

- ಕಂಪನಿಯಲ್ಲಿರುವ 30% ಪೈಲಟ್‌ಗಳು ನಕಲಿ ಲೈಸೆನ್ಸ್‌ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

17 ಲಕ್ಷದ ಚಿನ್ನದ ಪೆಂಡೆಂಟ್‌ ನುಂಗಿದ ಕಳ್ಳ, ಬಾತ್‌ರೂಮ್‌ನ ಹೊರಗಡೆ ಕಾಯುತ್ತಾ ನಿಂತ ಪೊಲೀಸ್‌!
ಮಹಿಳೆಯರಿಗೆ ಹೆದರಿ 55 ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿರುವ ವ್ಯಕ್ತಿ