
ಕ್ಯಾಲಿಫೋರ್ನಿಯಾ (ಡಿ.04) ದುಬೈ ಏರ್ ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನಗೊಂಡು ಪೈಲೆಟ್ ಮೃತಪಟ್ಟಿದ್ದರು. ಯುದ್ದ ವಿಮಾನದ ಹಾರಾಟದ ವೇಳೆ ಸಾಹಸ ಪ್ರದರ್ಶಿಸುತ್ತಿದ್ದ ವೇಳೆ ತೇಜಸ್ ಯುದ್ದ ವಿಮಾನ ಪತನಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಅಮೆರಿಕದ ಅತ್ಯಾಧುನಿಕ ಹಾಗೂ ವಿಶ್ವದ ನಂಬರ್ 1 ಎಂದೇ ಗುರುತಿಸಿಕೊಂಡಿರುವ ಎಫ್ 16 ಥಂಡರ್‌ಬರ್ಡ್ ಯುದ್ದ ವಿಮಾನ ಪತನಗೊಂಡಿದೆ. ಕ್ಯಾಲಿಫೋರ್ನಿಯಾದ ಟ್ರೋನಾ ವಿಮಾನ ನಿಲ್ದಾಣದ ಬಳಿಕ F16 ಯುದ್ಧ ವಿಮಾನ ಪತಗೊಂಡಿದೆ.ಇಂಧನ ಭರ್ತಿಯಿದ್ದ ಈ ವಿಮಾನ ಪತನಗೊಂಡ ಕ್ಷಣದಲ್ಲೇ ಸ್ಫೋಟಗೊಂಡದೆ. ಅದೃಷ್ಠವಶಾತ್ ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪೈಲೆಟ್ ಪ್ಯಾರಾಚ್ಯೂಟ್ ಮೂಲಕ ಸುರಕ್ಷಿತವಾಗಿ ಹೊರಬಂದಿದ್ದಾರೆ.
ಅಮೆರಿಕದ ಯುದ್ಧ ವಿಮಾನ F16 ಪತನಗೊಳ್ಳುತ್ತಿದ್ದಂತೆ ವಿಮಾನದಿಂದ ಹೊರಬಂದ ಪೈಲೆಟ್ ಪ್ಯಾರಾಚ್ಯೂಟ್ ಮೂಲಕ ಕೆಳಕ್ಕೆ ಇಳಿದಿದ್ದಾರೆ. ವಿಪರೀತ ಗಾಳಿ ಹಾಗೂ ಪ್ರತಿಕೂಲ ಹವಾಮಾನದಿಂದ ಪೈಲೆಟ್ ಲ್ಯಾಂಡಿಂಗ್ ಕೊಂಚ ಗಲಿಬಿಲಿಯಾಗಿದೆ. ಹೀಗಾಗಿ ಪೈಲೆಟ್ ಗಾಯಗೊಂಡಿದ್ದಾರೆ. ಗಾಯಗೊಂಡ ಪೈಲೆಟ್‌ಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಪೈಲೆಟ್ ಆರೋಗ್ಯ ಸ್ಥಿರವಾಗಿದೆ.
ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಅಮೆರಿಕ ಎಫ್16 ವಿಮಾನ ಪತನಕ್ಕೆ ಸ್ಪಷ್ಟ ಕಾರಣಗಳು ಲಭ್ಯವಾಗಿಲ್ಲ. ತಾಂತ್ರಿಕ ದೋಷವೇ ಅಥವಾ ಇನ್ಯಾವುದೇ ಕಾರಣವಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಅಮರಿಕ ವಾಯು ಸೇನೆ ತನಿಖೆಗೆ ಆದೇಶಿಸಿದೆ. ಪೈಲೆಟ್ ಹಾರಾಟ ಆರಂಭಿಸಿದ ಕೆಲ ಕ್ಷಣದಲ್ಲಿ ವಿಮಾನ ಪತನಗೊಂಡಿದೆ. ಇಂದು (ಡಿ.04) ಬೆಳಗ್ಗೆ 10.45ಕ್ಕೆ ಘಟನೆ ನಡೆದಿದೆ.
ಆಗಸದಲ್ಲಿ ವಿಮಾನ ಕಸರತ್ತು ಪ್ರದರ್ಶನದ ವೇಳೆ ಯುದ್ದ ವಿಮಾನ ಪತನಗೊಂಡಿದೆ ಎಂದು ಹೇಳಲಾಗಿದೆ. ಇದು ತರಬೇತಿ ವೇಳೆಯೋ ಅಥವಾ ಸಾಹಸ ಪ್ರದರ್ಶನದ ತಾಲೀಮು ವೇಳೆ ಪತನಗೊಂಡಿದೆಯೋ ಅನ್ನೋದು ಸ್ಪಷ್ಟವಿಲ್ಲ. ವಾಯುಸೇನೆಯ ವ್ಯಾಪ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದಿದೆ.
ಅಮೆರಿಕದ ಎಫ್16 ಯುದ್ಧ ವಿಮಾನ ಪತನ ಸಾಮಾನ್ಯ ಮಾತಲ್ಲ. ಇತ್ತೀಚೆಗೆ ತೇಜಸ್ ಯುದ್ದ ವಿಮಾನ ಪತನಗೊಂಡಾಗ ಕೆಲವರು ಭಾರತದ ಯುದ್ಧ ವಿಮಾನಗಳ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದರು. ಆದರೆ ತೇಜಸ್ ಇತಿಹಾಸದಲ್ಲೇ ನಡದ 2ನೇ ಪತನ ಆದಾಗಿತ್ತು. ಆದರೆ ವಿಶ್ವದ ನಂಬರ್ 1 ಎನಿಸಿಕೊಂಡ ಅಮೆರಿಕದ ಎಫ್16 ಯುದ್ದ ವಿಮಾನ ಪತನ ಇದೀಗ ಅಮರಿಕ ಯುದ್ಧ ವಿಮಾನಗಳ ಗುಣಮಟ್ಟದ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಕಾರಣ ಹಲವು ಬಾರಿ ಎಫ್16 ಯುದ್ಧ ವಿಮಾನ ಪತನಗೊಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ