ನ್ಯೂಸ್ ಪೇಪರ್ ಓದೋದನ್ನೇ ಬಿಟ್ಟಿದ್ದಾರಂತೆ ಇಮ್ರಾನ್ ಖಾನ್!

By Suvarna NewsFirst Published Jan 23, 2020, 7:20 PM IST
Highlights

ನ್ಯೂಸ್ ಪೇಪರ್, ನ್ಯೂಸ್ ಚಾನೆಲ್ ನೋಡೋದನ್ನೇ ನಿಲ್ಲಿಸಿದ ಪಾಕ್ ಪ್ರಧನಿ| ಪಾಕ್ ಮಾಧ್ಯಮದಲ್ಲಿ ನಿತ್ಯವೂ ಇಮ್ರಾನ್ ವಿರುದ್ಧ ಅವಹೇಳನಕಾರಿ ಸುದ್ದಿ ಅಂತೆ| ಬೇಸತ್ತು ಮಾಧ್ಯಮಗಳಿಂದ ದೂರವಾಗಿರುವುದಾಗಿ ಹೇಳಿದ ಇಮ್ರಾನ್|

ದಾವೋಸ್(ಜ.23): ನಿತ್ಯವೂ ತಮ್ಮ ವಿರುದ್ಧ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟಿಸುವ ದಿನ ಪತ್ರಿಕೆಗಳು ಹಾಗೂ ಸಾಯಂಕಾಲದ ಸುದ್ದಿವಾಹಿನಿಗಳ ಟಾಕ್ ಶೋಗಳನ್ನು ನೋಡುವುದನ್ನು ಬಿಟ್ಟಿರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ದಿನ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳು ನಿತ್ಯವೂ ತಮ್ಮ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಸುದ್ದಿಗಳನ್ನು ಬಿತ್ತರಿಸುತ್ತಿದ್ದು, ಇದರಿಂದ ಬೇಸತ್ತು ಮಾಧ್ಯಮಗಳಿಂದ ದೂರವಾಗಿರುವುದಾಗಿ ಇಮ್ರಾನ್ ಹೇಳಿದ್ದಾರೆ.

ಬಾಲಿವುಡ್‌ನಿಂದಾಗಿ ಪಾಕ್‌ನಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಳ!

ಮಾಧ್ಯಮಗಳು ತಮ್ಮ ವಿರುದ್ಧ ಪ್ರಸಾರ ಮಾಡುತ್ತಿರುವುದರಿಂದ ತಮಗೆ ತೀವ್ರ ವೇಸರವಾಗಿದೆ ಎಂದು ಇಮ್ರಾನ್ ಖಾನ್ ಅಲವತ್ತುಕೊಂಡಿದ್ದಾರೆ.

ದಾವೋಸ್’ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕ್’ನ ಸ್ಥಳಿಯ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರುವುದಾಗಿ ಹೇಳಿದರು.

ಬಾಂಗ್ಲಾ ವಿಡಿಯೋ ಹಾಕಿ ಭಾರತದ್ದು ಎಂದ ಇಮ್ರಾನ್: ಟ್ವೀಟ್ ಟ್ಯಾಗ್ ಬ್ಲಾಕ್!

ಪಾಖಿಸ್ತಾನದ ಅಭಿವೃದ್ಧಿಗಾಗಿ ತಾವು ಸಾಧ್ಯವಾದ ಎಲ್ಲಾ ಮಾರ್ಗಗಳಲ್ಲಿ ಶ್ರಮಿಸುತ್ತಿದ್ದು, ಇದನ್ನು ಸಹಿಸಲಾಗದ ಪಾಕ್ ಮಾಧ್ಯಮಗಳು ತಮ್ಮ ವಿರುದ್ಧ ಸುಳ್ಳು ಪ್ರಸಾರದಲ್ಲಿ ನಿರತವಾಗಿವೆ ಎಂದು ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.

click me!