ಆಗಸದಲ್ಲಿ ಏಕಾಏಕಿ ವಿಚಿತ್ರ ಕಪ್ಪು ವೃತ್ತ ನಿರ್ಮಾಣ| ಬ್ಲ್ಯಾಕ್ ರಿಂಗ್ ಕಂಡು ದಂಗಾದ ಜನತೆ| ನಿರ್ದಿಷ್ಟ ಪಥದತ್ತ ಮುನ್ನುಗ್ಗುತ್ತಿರುವುದು ವಿಡಿಯೋದಲ್ಲಿ ಸೆರೆ| ವಿಚಿತ್ರ ಘಟನೆಗೆ ಸಾಕ್ಷಿಯಾದ ಪಾಕಿಸ್ತಾನದ ಲಾಹೋರ್ ನಗರ| ಏಲಿಯನ್ ಸ್ಪೇಸ್ ಶಿಪ್(ಪರಗ್ರಹಿ ಯಾನ) ಬಂದಿರಬಹುದಾದ ಅನುಮಾನ| ತ್ತಿರದ ಕಾರ್ಖಾನೆಯಿಂದ ಬಿಡುಗಡೆಯಾಗಿರುವ ಹೊಗೆ ಎಂಬ ಗುಮಾನಿ|
ಲಾಹೋರ್(ಜ.23): ಆಗಸದಲ್ಲಿ ಏಕಾಏಕಿ ವಿಚಿತ್ರ ಕಪ್ಪು ವೃತ್ತವೊಂದು ಕಾಣಿಸಿಕೊಂಡ ಪರಿಣಾಮ, ಜನರು ಬೆದರಿ ಓಡಿದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.
ಏಕಾಏಕಿ ಆಗಸದಲ್ಲಿ ವೃತ್ತಾಕಾರದ ಹೊಗೆ ನಿರ್ಮಾಣವಾಗಿದ್ದು, ಅದು ನಿರ್ದಿಷ್ಟ ಪಥದತ್ತ ಮುನ್ನುಗ್ಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಹೊಗೆ ಏನೆಂದು ತಿಳಿಯಲಾಗದೇ ಜನರು ಬೆದರಿದ್ದಾರೆ ಎನ್ನಲಾಗಿದೆ.
They are here. pic.twitter.com/OfWPG20Il9
— Blue on Blue (@razzblues)ಕೆಲವರು ಇದನ್ನು ಏಲಿಯನ್ ಸ್ಪೇಸ್ ಶಿಪ್(ಪರಗ್ರಹಿ ಯಾನ) ಎಂದು ಕರೆದರೆ, ಮತ್ತೆ ಕೆಲವರು ಇದು ಸ್ಫೋಟದಿಂದ ನಿರ್ಮಾಣವಾಗಿರುವ ವೃತ್ತಾಕಾರದ ಹೊಗೆ ಎಂದು ಅಂದಾಜಿಸಿದ್ದಾರೆ.
ಸೂರ್ಯನ ಸುತ್ತ ಉಂಗುರ, ಉಡುಪಿಯಲ್ಲಿ ಕಂಡ ‘ರವಿಕ್ರಾಂತ' ಯುದ್ಧ ರಹಸ್ಯ!
ವೃತ್ತಾಕಾರದಲ್ಲಿ ನಿರ್ದಿಷ್ಟ ಪಥದತ್ತ ಚಲಿಸುತ್ತಿದ್ದ ಈ ಹೊಗೆಯ ಮೋಡ ಖಂಡಿತ ಪರಗ್ರಹಿ ಜೀವಿಗಳ ಯಾನ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಇದು ಹತ್ತಿರದ ಕಾರ್ಖಾನೆಯಿಂದ ಬಿಡುಗಡೆಯಾಗಿರುವ ಹೊಗೆ ಎಂದು ಕೆಲವರು ವಾದಿಸಿದ್ದಾರೆ.
I noticed a similar thing some weeks ago in Dubai pic.twitter.com/qGl6xhgMtk
— Tariq Irfan (@Tariq_Irfan)ಇನ್ನು ಲಾಹೋರ್ ಆಕಾಶದಲ್ಲಿ ಕಂಡ ವೃತ್ತಾಕಾರದ ಹೊಗೆಯನ್ನೇ ಹೋಲುವ, ಜಗತ್ತಿನ ವಿವಿಧೆಡೆ ಕಂಡುಬಂದ ಬ್ಲ್ಯಾಕ್ ರಿಂಗ್‌ನ ಹಲವು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಶುಭ್ರ ನೀಲಿಯಾಕಾಶದಲ್ಲಿ ವಿಸ್ಮಯ ಬೃಹತ್ ಕುಳಿ: ಬೆದರಿದ ಜನಜಂಗುಳಿ!