Pak ambassador ಜಿಹಾದಿ ಮಸೂದ್ ಮುಂದಿನ ರಾಯಭಾರಿ, ಪಾಕ್ ನೇಮಕ ತಿರಸ್ಕರಿಸಲು ಬೈಡನ್‌ಗೆ US ಕಾಂಗ್ರೆಸ್ ಒತ್ತಾಯ!

By Suvarna NewsFirst Published Jan 31, 2022, 6:54 PM IST
Highlights
  • ಅಮೆರಿಕ ಮುಂದಿನ ಪಾಕ್ ರಾಯಭಾರಿ ಮಸೂದ್ ಖಾನ್
  • ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇಮಕ ತಿರಸ್ಕರಿಸಲು ಒತ್ತಾಯ
  • ಅಧ್ಯಕ್ಷ ಜೋ ಬೈಡೆನ್‌ಗೆ ಯುಎಸ್ ಕಾಂಗ್ರೆಸ್ ಪತ್ರ
  • ಭಾರತ ಸೇರಿದಂತೆ ಹಲವೆಡೆ ಶಾಂತಿ ಕದಡುವ ಪ್ರಯತ್ನ ಸಹಿಸಲು ಸಾಧ್ಯವಿಲ್ಲ
     

ವಾಶಿಂಗ್ಟನ್(ಜ.31): ಪಾಕಿಸ್ತಾನ(Pakistan) ನರಿ ಬುದ್ದಿ ಹಾಗೂ ಉಗ್ರ ಪೋಷಣೆಗೆ ಇದೀಗ ಅಮೆರಿಕ(America) ಸಿಡಿದೆದ್ದಿದೆ.  ಪ್ರತಿ ನಡೆಯಲ್ಲೂ ಭಯೋತ್ಪಾದಕರಿಗೆ ನೆರವು ನೀಡುತ್ತಾ ಬಂದಿರುವ ಪಾಕಿಸ್ತಾನಕ್ಕೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿದೆ. ಪಾಕಿಸ್ತಾನ ಈಗಾಗಲೇ ಅಮೆರಿಕದಲ್ಲಿನ ತನ್ನ ಮುಂದಿನ ರಾಯಭಾರಿ(ambassador) ಮಸೂದ್ ಖಾನ್ ಎಂದು ಘೋಷಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮಾಜಿ ಅಧ್ಯಕ್ಷ ಮಸೂದ್ ಖಾನ್ ನೇಮಕವನ್ನು ಅಮೆರಿಕ ಕಾಂಗ್ರೆಸ್ ಕಟುವಾಗಿ ವಿರೋಧಿಸಿದೆ. ಪಾಕಿಸ್ತಾನದ ನೇಮಕವನ್ನು ತಿರಸ್ಕರಿಸಲು ಅಮೆರಿಕ ಕಾಂಗ್ರೆಸ್ ಇದೀಗ ಅಧ್ಯಕ್ಷ ಜೋ ಬೈಡನ್‌ಗೆ ಪತ್ರ ಬರೆದಿದೆ. ಈ ಮೂಲಕ ಪಾಕಿಸ್ತಾನದ ಕುತಂತ್ರ ನಡೆಯನ್ನು ಬಹಿರಂಗಗೊಳಿಸಿದೆ.

ಯುಎಸ್ ಕಾಂಗ್ರೆಸ್‌ಮೆನ್ ಸ್ಕಾಟ್ ಪೆರಿ ಸುದೀರ್ಘ ಪತ್ರ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ. ಇಷ್ಟೇ ಅಲ್ಲ ಅಮೆರಿಕ ಅಧ್ಯಕ್ಷ ಯಾವ ಕಾರಣಕ್ಕಾಗಿ ಮಸೂದ್ ಖಾನ್ ರಾಯಭಾರಿಯಾಗಿ ನೇಮಿಸುವುದನ್ನು ತಿರಸ್ಕರಿಸಬೇಕು ಅನ್ನೋದನ್ನು ಪತ್ರದಲ್ಲಿ ಹೇಳಿದ್ದಾರೆ. ಈ ಪತ್ರದ ಆರಂಭದಲ್ಲೇ ಮಸೂದ್ ಖಾನ್(Masood Khan) ನೇಮಕ ಎಂದೂ ಒಪ್ಪಲು ಸಾಧ್ಯವಿಲ್ಲ. ಈ ನೇಮಕಕ್ಕೆ ತಾತ್ಕಾಲಿಕ ತಡೆ ಹಿಡಿಯುವುದಲ್ಲ, ನೇಮಕವನ್ನೇ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

Pakistan: ಕಾಶ್ಮೀರ ವಿಚಾರವಾಗಿ ಇಮ್ರಾನ್ ಖಾನ್ ಸರ್ಕಾರದ ಬಹುದೊಡ್ಡ ಸುಳ್ಳು ಅನಾವರಣ!

ಮಸೂದ್ ಖಾನ್‌ನ್ನು ಅಮೆರಿಕದ ರಾಯಭಾರಿಯಾಗಿ ಪಾಕಿಸ್ತಾನ ನೇಮಕ ಮಾಡಿರುವುದು ತೀವ್ರ ಕಳವಳಕಾರಿಯಾಗಿದೆ. ಕಾರಣ ಮಸೂದ್ ಖಾನ್ ನಮ್ಮ ಮಿತ್ರ ರಾಷ್ಟ್ರ ಭಾರತದ ಭದ್ರತೆಗೆ ಸವಾಲೆಸೆಯುವ ಉಗ್ರ ಸಂಘಟನೆಗಳ ಕುರಿತು ಸಹಾನುಭೂತಿ ಹೊಂದಿದ ಜಿಹಾದಿ. ಉಗ್ರರ ಪೋಷಣೆ, ಉಗ್ರರಕ್ಕೆ ಬೆಂಬಲಕ್ಕೆ ನಿಂತ ಮಸೂದ್ ಖಾನ್ ನೇಮಕ ಅಮೆರಿಕ, ಭಾರತ ಸೇರಿದಂತೆ ಜಗತ್ತಿಗೆ ಮಾರಕವಾಗಿದೆ ಎಂದು ಸ್ಕಾಟ್ ಪೆರಿ ತಮ್ಮ ಪತ್ರದಲ್ಲಿ ಜೋ ಬೈಡೆನ್‌ಗೆ ಆಗ್ರಹಿಸಿದ್ದಾರೆ.

ಮಸೂದ್ ಖಾನ್ ನಡೆ ಅವರ ನಿರ್ಧಾರಗಳು ಯಾವ ರಾಷ್ಟ್ರ ಕೂಡ ಒಪ್ಪಲು ಸಾಧ್ಯವಿಲ್ಲ. ಭಾರತ ವಿರುದ್ದ ಉಗ್ರ ಹೋರಾಟ ಮಾಡಿದ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಅನುಸರಿಸಲು ಮಸೂದ್ ಖಾನ್ ಯುವಕರಿಗೆ ಬಹಿರಂಗವಾಗಿ ಕರೆ ನೀಡಿದ್ದರು. 2019ರಲ್ಲಿ ಅಮೆರಿಕ ಘೋಷಿಸಿದ ಭಯೋತ್ಪಾದಕ ಸಂಘಟನೆಯಾದ ಹರ್ಕತ್ ಉಲ್ ಮಜಾಹಿದ್ದೀನ್ ಸಂಸ್ಥಾಪಕನ ಜೊತೆ ಮಸೂದ್ ಖಾನ್ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುಖ್ಯವಾಗಿ ಮಸೂದ್ ಖಾನ್ ಖಲೀಲ್ ಯುಬಿಎಲ್ ಇಂಟರ್‌ನ್ಯಾಶನಲ್ ಇಸ್ಲಾಮಿಕ್ ಫ್ರಂಟ್ ಸಂಘಟನೆಯ ಸದಸ್ಯರಾಗಿದ್ದಾರೆ. ಈ ಸಂಘಟನೆ 1998ರಲ್ಲಿ ಅಮೆರಿಕದ ಮೇಲೆ ದಾಳಿಗೆ ಕರೆ ನೀಡಿತ್ತು. ಮಸೂದ್ ಖಾನ್‌ನನ್ನು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಕೆಲ ಉಗ್ರ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಬಂದಿದೆ  ಎಂದು ಸ್ಕಾಟ್ ಪೆರಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. 

ಬೆದರಿಕೆಗೆ ಹೆದರಿ ಪಾಕಿಸ್ತಾನ ಸರ್ಕಾರದಿಂದ 350 ಉಗ್ರ ಬೆಂಬಲಿಗರ ಬಿಡುಗಡೆ!

ಭಯೋತ್ಪಾದಕ ಸಂಘಟನೆ ಜೊತೆ ನೇರ ಸಂಪರ್ಕ ಇರುವ, ಭಯೋತ್ಪಾದಕರಿಗೆ ನೆರವು ನೀಡಿದ ವ್ಯಕ್ತಿಯನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ರಾಯಭಾರಿಯಾಗಿ ನೇಮಕ ಮಾಡುವುದು ಎಷ್ಟು ಸರಿ. ಈ ನಡೆ ಪಾಕಿಸ್ತಾನ ಭಯೋತ್ಪಾದನೆಯನ್ನು ಬಹಿರಂಗವಾಗಿ ಹರಡುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ. ಪಾಕಿಸ್ತಾನ ತನ್ನ ರಾಜತಾಂತ್ರಿಕ ವಿಚಾರದಲ್ಲೂ ಭಯೋತ್ಪಾದಕ ಮುಕ್ತವಾಗಿ ಯೋಚನೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ ಅನ್ನೋದು ಇಮ್ರಾನ್ ಖಾನ್ ನಿರ್ಧಾರದಿಂದ ಬಯಲಾಗಿದೆ. ರಾಯಭಾರಿಯಾಗಿ ನೇಮಕ ಗೊಂಡಿರುವ ಮಸೂದ್ ಖಾನ್ 1970ರ ದಶಕದಲ್ಲಿ ನರಮೇಧಕ್ಕ ಕಾರಣವಾದ ಜಮಾತ್ ಇ ಇಸ್ಲಾಮಿ ಉಗ್ರ ಸಂಘಟನೆಯನ್ನು ಬೆಂಬಿಸಿದ್ದಾರೆ. ಇದೇ ಉಗ್ರ ಸಂಘಟನೆ ಭಾರತದಲ್ಲಿ 2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ಲೈಷ್ಕರ್ ಇ ತೈಬಾ ಉಗ್ರ ಸಂಘಟನೆಗೆ ನೆರವು ನೀಡಿತ್ತು ಅನ್ನೋದು ಸಾಬೀತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ

ಇದೇ ಮಸೂದ್ ಖಾನ್, 2008ರಲ್ಲಿ ಅಮೆರಿಕ ಸೇನೆ ಮೇಲೆ ಗುಂಡಿನ ಸುರಿಮಳೆಗೈದ ಹಾಗೂ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಆಫಿಯಾ ಸಿದ್ದಿಕ್ಕಿ ಬಿಡುಗಡೆಯಾಗಿ ಹೋರಾಟ ನಡೆಸಿದ್ದಾರೆ. ಇತ್ತೀಚೆಗೆ ಇದೆ ಅಫಿಯಾ ಸಿದ್ದಿಕ್ಕಿ ಬಿಡುಗಡೆಗಾಗಿ ಟೆಕ್ಸಾಸ್ ಪ್ರಾರ್ಥನಾ ಮಂದಿರದ ಮೇಲೆ ಉಗ್ರರು ದಾಳಿ ನಡೆಸಿ ಹಲವರನ್ನು ಒತ್ತಾಯಾಳಾಗಿಟ್ಟುಕೊಂಡಿದ್ದರು. ಇದೇ ವ್ಯಕ್ತಿಯನ್ನು ಪಾಕಿಸ್ತಾನ ಅಮೆರಿಕದ ರಾಯಭಾರಿಯಾಗಿ ನೇಮಕ ಮಾಡಿದರೆ  ನೇರವಾಗಿ ಉಗ್ರವಾದವನ್ನು ಬೆಂಬಲಿಸಿದಂತೆ. ಹೀಗಾಗಿ ಬೈಡನ್ ಪಾಕ್ ನೇಮಕ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಅಮೆರಿಕ ಕಾಂಗ್ರೆಸ್ ಆಗ್ರಹಿಸಿದೆ.

ಮಸೂದ್ ಖಾನ್ ನೇಮಕವನ್ನು ವಿದೇಶಾಂಕ ಇಲಾಖೆ ತಡೆ ಹಿಡಿದಿರುವ ನಿರ್ಧಾರ ಸೂಕ್ತವಲ್ಲ, ಬದಲಾಗಿ ಶಾಶ್ವತವಾಗಿ ರದ್ದು ಮಾಡಬೇಕು. ಭಯೋತ್ಪಾದಕನನ್ನು ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ನೇಮಕಗೊಳಿಸುವುದನ್ನು ಅಮೆರಿಕ ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಸ್ಕಾಟ್ ಪೆರಿ ತಮ್ಮ ಸುದೀರ್ಘ ಪತ್ರದಲ್ಲಿ ಅಧ್ಯಕ್ಷ ಜೋ ಬೈಡನ್‌ಗೆ ಆಗ್ರಹಿಸಿದ್ದಾರೆ.

click me!