ಭಾರತಕ್ಕೆ ಅಣ್ವಸ್ತ್ರ ದಾಳಿ ಬೆದರಿಕೆ ಒಡ್ಡಿದ ಪಾಕ್‌ ಸಚಿವೆ

By Kannadaprabha News  |  First Published Dec 18, 2022, 9:38 AM IST

ಭಾರತದ ಕಟುವಾದ ಟೀಕೆಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನದ ರಾಜಕಾರಣಿಗಳು ಭಾರತಕ್ಕೆ ಬಹಿರಂಗವಾಗಿ ಪರಮಾಣು ದಾಳಿಯ ಬೆದರಿಕೆ ಒಡ್ಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್‌ ಪಕ್ಷದ ನಾಯಕಿ ಶಾಜಿಯಾ ಮಾರಿ, ಪಾಕಿಸ್ತಾನದ ಬಳಿ ಅಣುಬಾಂಬ್‌ ಇದೆ ಎನ್ನುವುದನ್ನು ಭಾರತ ಮರೆಯಬಾರದು ಎಂದು ಹೇಳಿದ್ದಾರೆ.


ಇಸ್ಲಾಮಾಬಾದ್‌: ಭಾರತದ ಕಟುವಾದ ಟೀಕೆಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನದ ರಾಜಕಾರಣಿಗಳು ಭಾರತಕ್ಕೆ ಬಹಿರಂಗವಾಗಿ ಪರಮಾಣು ದಾಳಿಯ ಬೆದರಿಕೆ ಒಡ್ಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್‌ ಪಕ್ಷದ ನಾಯಕಿ ಶಾಜಿಯಾ ಮಾರಿ, ಪಾಕಿಸ್ತಾನದ ಬಳಿ ಅಣುಬಾಂಬ್‌ ಇದೆ ಎನ್ನುವುದನ್ನು ಭಾರತ ಮರೆಯಬಾರದು ಎಂದು ಹೇಳಿದ್ದಾರೆ. ‘ನಮ್ಮ ಬಳಿಯೂ ಪರಮಾಣು ಅಸ್ತ್ರವಿದೆ. ನಾವು ಸುಮ್ಮನಿರುವುದಿಲ್ಲ. ಅಗತ್ಯಬಿದ್ದರೆ ನಾವು ಹಿಂದೆ ಸರಿಯುವುದಿಲ್ಲ. ನೀವು ಪದೇ ಪದೇ ಪಾಕಿಸ್ತಾನದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದರೆ ನಾವು ಕೇಳಿಸಿಕೊಂಡು ಸುಮ್ಮನಿರುವುದಿಲ್ಲ. ಇದು ಆಗುವುದೂ ಇಲ್ಲ ಎಂದು ಅವರು ಬೆದರಿಕೆ ಒಡ್ಡಿದ್ದಾರೆ.

ಭುಟ್ಟೋ ವಿರುದ್ಧ ಬಿಜೆಪಿ ಪ್ರತಿಭಟನೆ 

Tap to resize

Latest Videos

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರನ್ನು ಕಟುಕ ಎಂದು ಕರೆದಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ (Pakistan Foreign Minister) ಬಿಲಾವಲ್‌ ಭುಟ್ಟೋ (Bilawal Bhutto)ಹೇಳಿಕೆಯನ್ನು ಖಂಡಿಸಿ ಬಿಜೆಪಿ ದೇಶಾದ್ಯಂತ ಶನಿವಾರ ಪ್ರತಿಭಟನೆ ನಡೆಸಿದೆ. ಭುಟ್ಟೋ 135 ಕೋಟಿ ಭಾರತೀಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಆತನ ಪ್ರತಿಕೃತಿಗಳನ್ನು ದಹಿಸಿವೆ. ರಾಷ್ಟ್ರ ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು, ಭುಟ್ಟೋ ಹೇಳಿಕೆ ಅನಾಗರಿಕ ಹಾಗೂ ಅಗೌರವ ತೋರುವಂತದ್ದಾಗಿದೆ ಎಂದು ಹೇಳಿದ್ದಾರೆ. ಭುಟ್ಟೋ ಪಾಕಿಸ್ತಾನದ ವಿದೇಶ ಸಚಿವನಲ್ಲ, ಆತ ವಿದ್ವೇಶ ಸಚಿವ ಎಂದು ಬಿಜೆಪಿ ಕಿಡಿಕಾರಿದೆ. ಪ್ರಧಾನಿ ಮೋದಿ ಕುರಿತಾಗಿ ಭುಟ್ಟೋ ನೀಡಿರುವ ಹೇಳಿಕೆ ಅನಾಗರಿಕವಾಗಿದೆ. ಹಾಗಾಗಿ ಆತ 135 ಕೋಟಿ ಭಾರತೀಯರ ಕ್ಷಮೆ ಕೇಳಬೇಕು ಮತ್ತು ಆತನ ಮಾತನ್ನು ಹಿಂಪಡೆದುಕೊಳ್ಳಬೇಕು. ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದ ವಿದೇಶಾಂಗ ನೀತಿಯ ಕುರಿತಾಗಿ ಎಲ್ಲಾ ದೇಶಗಳು ಹೊಗಳುತ್ತಿವೆ. ಆದರೆ ಭುಟ್ಟೋ ಈ ರೀತಿಯ ಹೇಳಿಕೆ ನೀಡುವ ಮೂಲಕ ಪಾಕಿಸ್ತಾನಕ್ಕೆ ಮತ್ತೊಂದು ಕಳಂಕ ನೀಡಿದ್ದಾರೆ ಎಂದು ಬಿಜೆಪಿ(BJP), ಹೇಳಿದೆ. ಭುಟ್ಟೋ ಹೇಳಿಕೆಯನ್ನು ವಿರೋಧಿಸಿ ದೇಶದ ಹಲವು ಕಡೆ ಬಿಜೆಪಿ ಕಾರ್ಯಕರ್ತರು ಭುಟ್ಟೋನ ಪ್ರತಿಕೃತಿ ದಹಿಸಿದ್ದಾರೆ.

'ಹಾವನ್ನು ಸಾಕಿದ್ದೀರಿ, ಅದು ನಿಮ್ಮನ್ನೂ ಕೂಡ ಕಚ್ಚಬಹುದು..' ಪಾಕಿಸ್ತಾನಕ್ಕೆ ಮಾತಿನಲ್ಲೇ ತಿವಿದ ಜೈಶಂಕರ್!

ರಾಜ್ಯದಲ್ಲೂ ಭುಟ್ಟೋ ವಿರುದ್ಧ ಪ್ರತಿಭಟನೆ ನಡೆದಿದ್ದು, ಈ ಕುರಿತು ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವ್‌ ಭುಟ್ಟೋ ಜರ್ದಾರಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತಾಗಿ ಮಾಡಿರುವ ಟೀಕೆಯು ಅವರ ಕೀಳು ಮನೋಸ್ಥಿತಿಯನ್ನು ಬಯಲು ಮಾಡಿದೆ. ಪಾಕಿಸ್ಥಾನದ ವಿದೇಶಾಂಗ ಸಚಿವರಾಗಿ ಅವರ ಹೇಳಿಕೆಯು ಪಾಕಿಸ್ಥಾನ ಸರ್ಕಾರದ ನೀಚ ಮನೋಸ್ಥಿತಿಯನ್ನು ಪ್ರತಿಬಿಂಬಿಸಿದೆ. ಇಡೀ ವಿಶ್ವದಲ್ಲಿಯೇ ಶಾಂತಿ ನೆಲೆಸುವಂತಾಗಲು ಭಾರತದ ಪ್ರಧಾನ ಮಂತ್ರಿಯವರು ನೇತೃತ್ವ ವಹಿಸಬೇಕೆಂದು ವಿಶ್ವದ ಎಲ್ಲಾ ಪ್ರಮುಖ ದೇಶಗಳು ಕೋರುತ್ತಿರುವ ಇಂತಹ ಸಂದರ್ಭದಲ್ಲಿ ಪಾಕಿಸ್ಥಾನದ ವಿದೇಶಾಂಗ ಸಚಿವರಿಂದ ಇಂತಹ ಹೇಳಿಕೆ ನಾಯಿಬಾಲ ಡೊಂಕು ಎಂಬಂತಹ ಪ್ರವೃತ್ತಿಯನ್ನು ಸಾಬೀತು ಪಡಿಸುತ್ತಿದೆ.

ವಿಶ್ವದ ಅತ್ಯುಗ್ರ ಒಸಾಮ ಬಿನ್‌ ಲಾಡೆನ್‌ ಎಲ್ಲಿ ಅಡಗಿ ಕುಳಿತಿದ್ದ, ಮತ್ತು ಅವನನ್ನು ಪೋಷಿಸುತ್ತಿದ್ದವರು ಯಾರು ಹಾಗೂ ವಿಶ್ವದ ಬಹುತೇಕ ಉಗ್ರ ಸಂಘಟನೆಗಳಿಗೆ ತವರು ನೆಲೆ ಪಾಕಿಸ್ಥಾನ ಎಂದು ಇಡೀ ಜಗತ್ತಿಗೆ ತಿಳಿದಿರುವಾಗ ಸಮೋದಿಯಂತಹ ವಿಶ್ವ ನಾಯಕರ ಬಗ್ಗೆ ಟೀಕೆ ಮಾಡಿದರೆ ಜಗತ್ತಿನ ಕಣ್ಣಿನಲ್ಲಿ ತಾನು ದೊಡ್ಡ ವ್ಯಕ್ತಿಯಾಗುತ್ತೇನೆಂದು ಭಾವಿಸಿರುವಂತೆ ಕಾಣುತ್ತಿದೆ. ನರೆಂದ್ರ ಮೋದಿಯವರ ಕುರಿತಾದ ಕೀಳು ಮಟ್ಟದ ಇಬ್ಬಗೆತನದ ಅವರ ಹೇಳಿಕೆ ಭಾರತ ದೇಶಕ್ಕೆ ಮಾಡಿದ ಅವಮಾನ, ದೇಶಪ್ರೇಮಿ ಭಾರತೀಯರು ಇದನ್ನು ಖಂಡಿಸಿ ಇದರ ವಿರುದ್ದ ಹೋರಾಟ ಮಾಡಬೇಕಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಚೀನಾ, ಪಾಕ್‌ ಮೇಲೆರಗಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ!

click me!