ಭಾರತ ಗುರಿಯಾಗಿಸಿ 130 ಅಣ್ವಸ್ತ್ರ ಸಿಡಿತಲೆ ಇಡಲಾಗಿದೆ, ಪಾಕ್ ಸಚಿವನ ಬೆದರಿಕೆ

Published : Apr 28, 2025, 08:11 AM ISTUpdated : Apr 28, 2025, 08:27 AM IST
ಭಾರತ ಗುರಿಯಾಗಿಸಿ 130  ಅಣ್ವಸ್ತ್ರ ಸಿಡಿತಲೆ ಇಡಲಾಗಿದೆ, ಪಾಕ್ ಸಚಿವನ ಬೆದರಿಕೆ

ಸಾರಾಂಶ

130 ಅಣ್ವಸ್ತ್ರ ಸಿಡಿತಲೆಯನ್ನು ಭಾರತದ ಕಡೆ ಇಡಲಾಗಿದೆ. ನೀರು ನಿಲ್ಲಿಸಿದರೆ ಯಾವ ದಿಕ್ಕಿನಿಂದ ಭಾರತದತ್ತ ಅಣ್ವಸ್ತ್ರ ಸಿಡಿಯುತ್ತೆ ಅನ್ನೋ ಹೇಳಲು ಸಾಧ್ಯವಿಲ್ಲ ಎಂದು ಪಾಕ್ ಸಚಿವ ಎಚ್ಚರಿಸಿದ್ದಾರೆ.

ಇಸ್ಲಾಮಾಬಾದ್‌ (ಏ.28) : ಭಾರತ-ಪಾಕಿಸ್ತಾನದ ನಡುವಿನ ಸ್ಥಿತಿ ದಿನದಿನಕ್ಕೂ ಹದಗೆಡುತ್ತಿರುವ ಹೊತ್ತಿನಲ್ಲಿ, ಪಾಕ್‌ ಸಚಿವರೊಬ್ಬರು ತಮ್ಮ ಬಳಿ ಇರುವ ಅಣ್ವಸ್ತ್ರಗಳನ್ನು ತೋರಿಸಿ ಭಾರತವನ್ನು ಹೆದರಿಸುವ ಯತ್ನ ಮಾಡಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿ ಭಾರತ ಪಾಕಿಸ್ತಾನದ ಮೇಲೆ ಜಲಯುದ್ಧ ಸಾರಿರುವುದರಿಂದ ಕೆರಳಿರುವ ಪಾಕ್‌ ಸಚಿವ ಹನೀಫ್‌ ಅಬ್ಬಾಸಿ, ‘ಭಾರತ ನೀರು ಪೂರೈಕೆಯನ್ನು ನಿಲ್ಲಿಸಿದರೆ ಯುದ್ಧಕ್ಕೆ ಸಿದ್ಧವಾಗಬೇಕು. ನಮ್ಮಲ್ಲಿರುವ ಕ್ಷಿಪಣಿಗಳಂಥ ಶಸ್ತ್ರಾಸ್ತ್ರಗಳು ಪ್ರದರ್ಶನಕ್ಕೆ ಇಟ್ಟಿರುವುದಲ್ಲ. ಅವುಗಳನ್ನು ದೇಶದ ಯಾವ ಮೂಲೆಯಲ್ಲಿ ಇರಿಸಿದ್ದೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಬ್ಯಾಲೆಸ್ಟಿಕ್‌ ಮಿಸೈಲ್‌ಗಳು, 130 ಅಣ್ವಸ್ತ್ರಗಳು ನಿಮ್ಮ (ಭಾರತ) ಕಡೆಗೇ ಗುರಿಯಾಗಿಸಿ ಇಡಲಾಗಿದೆ’ ಎಂದು ನಾಲಗೆ ಹರಿಬಿಟ್ಟಿದ್ದಾರೆ.

ಇದೇ ವೇಳೆ, ಭಾರತದ ವಿಮಾನಗಳಿಗೆ ಪಾಕ್‌ ಗಗನದಲ್ಲಿ ಹಾರದಂತೆ ವಿಧಿಸಲಾಗಿರುವ ನಿರ್ಬಂಧದ ಬಗ್ಗೆ ಮಾತನಾಡಿರುವ ಅಬ್ಬಾಸ್‌, ‘ಭಾರತಕ್ಕೆ ಇದರ ಘೋರ ಪರಿಣಾಮದ ಅರಿವಾಗುತ್ತಿದೆ. ಇದೇ ಸ್ಥಿತಿ ಇನ್ನು 10 ದಿನ ಮುಂದುವರಿದರೆ ಅವರ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ’ ಎಂದಿದ್ದಾರೆ. ಅಂತೆಯೇ, ‘ನಾವು ಭಾರತ ಕೈಗೊಳ್ಳಬಹುದಾದ ಆರ್ಥಿಕ ಕ್ರಮಕ್ಕೂ ಸಿದ್ಧರಾಗಿದ್ದೆವು’ ಎಂದು ಮುಖ ಉಳಿಸಿಕೊಳ್ಳುವ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಪ್ರಜೆಗಳ ಗಡಿಪಾರಿಗೆ ಅಗತ್ಯ ಕ್ರಮ: ಪರಮೇಶ್ವರ್‌ ಸ್ಪಷ್ಟನೆ

ಯುದ್ಧನೌಕೆ ಧ್ವಂಸ ಕ್ಷಿಪಣಿ ಪರೀಕ್ಷೆ ನಡೆಸಿದ ಭಾರತ ನೌಕಾಪಡೆ, ಪಾಕ್‌ಗೆ ಎಚ್ಚರಿಕೆ
ಪಹಲ್ಗಾಂ ದಾಳಿಯ ಭಾರತದ ಕೈಗೊಂಡ ರಾಜತಾಂತ್ರಿಕ ಮತ್ತು ಇತರೆ ವ್ಯೂಹಾತ್ಮಕ ದಾಳಿಗಳಿಂದ ತತ್ತರಿಸಿ ರಣೋತ್ಸಾಹ ತೋರಿಸಿದ ಪಾಕಿಸ್ತಾನಕ್ಕೆ ಭಾರತ ಯುದ್ಧಕ್ಕೆ ನಾವು ರೆಡಿ ಎಂಬ ಪ್ರತ್ಯುತ್ತರ ರವಾನಿಸಿದೆ. ಭಾರತೀಯ ನೌಕಾಪಡೆಯು ಭಾನುವಾರ ದೇಶದ ಕರಾವಿ ತೀರದಲ್ಲಿ ಶತ್ರುಗಳ ಯುದ್ಧನೌಕೆಗಳನ್ನು ನಾಶಪಡಿಸುವ ಹಲವು ಕ್ಷಿಪಣಿಗಳ ಪರೀಕ್ಷೆ ನಡೆಸಿ ಪಾಕಿಸ್ತಾನಕ್ಕೆ ಯುದ್ಧ ಸನ್ನದ್ಧತೆಯ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಈ ಬಗ್ಗೆ ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದು, ‘ದೂರದಲ್ಲಿರುವ ಗುರಿಯ ಮೇಲೆ ನಿಖರವಾಗಿ ಆಕ್ರಮಣ ಮಾಡುವ ಸಲುವಾಗಿ ವೇದಿಕೆ, ವ್ಯವಸ್ಥೆ ಮತ್ತು ಸಿಬ್ಬಂದಿಯ ಸನ್ನದ್ಧತೆಯನ್ನು ಮರುಮೌಲ್ಯಮಾಪನ ಮಾಡಲು ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಹಲವು ಹಡಗು ವಿರೋಧಿ ಗುಂಡಿನ ದಾಳಿಗಳನ್ನು ಯಶಸ್ವಿ ಕೈಗೊಳ್ಳಲಾಯಿತು. ಯಾವುದೇ ಸಮಯ, ಸಂದರ್ಭ, ಪ್ರದೇಶದಲ್ಲಿ ದೇಶದ ಕಡಲ ಹಿತಾಸಕ್ತಿಗಳನ್ನು ಕಾಪಾಡಲು ಭಾರತೀಯ ನೌಕಾಪಡೆ ಯುದ್ಧಕ್ಕೆ ಸದಾ ಸಿದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ಮೂರು ದಿನದ ಹಿಂದೆ ಕೂಡಾ ಭಾರತೀಯ ನೌಕಾಪಡೆ ಇಂಥದ್ದೇ ಕ್ಷಿಪಣಿ ಪರೀಕ್ಷೆ, ಭಾರತೀಯ ವಾಯುಪಡೆ ಯುದ್ಧ ವಿಮಾನಗಳ ಹಾರಾಟದ ಮೂಲಕ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿತ್ತು.

Entertainment News Live: ಪೆಹಲ್ಗಾಮ್ ದಾಳಿಯಿಂದ ಬಾಲಿವುಡ್‌ಗೆ ಮತ್ತೊಂದು ಹೊಡೆತ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!