ಕಾಶ್ಮೀರಕ್ಕೆ ಉಪಗ್ರಹದಿಂದ ಇಂಟರ್‌ನೆಟ್ ಸೌಲಭ್ಯ| ಆಫರ್ ನೀಡಿ ಜೋಕರ್ ಆದ ಪಾಕ್ ಸಚಿವ!| ಟ್ವಿಟರ್‌ನಲ್ಲಿ ಫುಲ್ ಟ್ರೋಲ್
ಇಸ್ಲಾಮಾಬಾದ್[ನ.15]: ಭದ್ರತಾ ಕ್ರಮಗಳಿಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವ ಭಾರತ ಸರ್ಕಾರದ ಕ್ರಮದ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಫವದ್ ಚೌಧರಿ, ಪಾಕಿಸ್ತಾನದ ಉಪಗ್ರಹಗಳ ಮೂಲಕ ಕಾಶ್ಮೀರಿ ಜನರಿಗೆ ಇಂಟರ್ನೆಟ್ ಒದಗಿಸುವುದಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ಟ್ರೋಲ್‌ಗೆ ತುತ್ತಾಗಿದೆ.
ಒಸಾಮಾ ಪಾಕಿಸ್ತಾನದ ಹೀರೋ: ಮುಶ್ರಫ್ ಬಿಲ ಬಿಟ್ಟು ಬಾರೋ!
ಸ್ವತಃ ಉಪಗ್ರಹ ನಿರ್ಮಿಸುವ ಅಥವಾ ಹಾರಿಬಿಡುವ ಸಾಮರ್ಥ್ಯ ಹೊಂದಿಲ್ಲದ ಪಾಕಿಸ್ತಾನ, ಇದೀಗ ಕಾರ್ಯಸಾಧುವಲ್ಲದ ಭರವಸೆ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಮಾಡಲಾಗಿದೆ.
ಕಾಶ್ಮೀರ ಕ್ಯಾತೆ: ಪಾಕ್‌ನಲ್ಲಿ ಟೊಮೆಟೋ ಬೆಲೆ ಕೇಜಿಗೆ 300 ರು.!
ಈ ಹಿಂದೆ ಭಾರತದ ಚಂದ್ರಯಾನ 2 ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ, ಅದರ ಬಗ್ಗೆ ಟೀಕೆ ಮಾಡಲು ಹೋಗಿದ್ದ ಫವದ್ ಸ್ವತಃ ಟೀಕೆಗೆ ಗುರಿಯಾಗಿದ್ದಾರೆ. ಇಸ್ರೋ ಬಗ್ಗೆ ಟೀಕಿಸಿದ ಟ್ವೀಟ್‌ಗಳಲ್ಲಿ ಸ್ಯಾಟಲೈಟ್ ಪದವನ್ನೇ ತಪ್ಪಾಗಿ ಬರೆದಿದ್ದ ಅವರನ್ನು ಜನ ಭಾರೀ ಪ್ರಮಾಣದಲ್ಲಿ ವ್ಯಂಗ್ಯವಾಡಿದ್ದರು.
ಹಿಮಪಾತದ ನಡುವೆ CRPF ಯೋಧನ ಕರ್ತವ್ಯ; ಸಲಾಂ ಹೇಳಿದ ಭಾರತೀಯರು!