
ನ್ಯೂಯಾರ್ಕ್(ನ.14): ಎತ್ತಣ ಮಾಮರ ಎತ್ತಣ ಕೋಗಿಲೆ.. ಎಂಬಂತೆ ಭಾರತದ ತ್ಯಾಜ್ಯಕ್ಕೂ ದೂರದ ಅಮೆರಿಕದ ಲಾಸ್ ಎಂಜಿಲೀಸ್‌ಗೂ ಏನು ಸಂಬಂಧ ಎಂಬುದನ್ನು ಕೇವಲ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾತ್ರ ಹೇಳಬಲ್ಲರು.
ಭಾರತ, ಚೀನಾ ರಾಷ್ಟ್ರಗಳ ಕೈಗಾರಿಕೆಗಳ ಮಾಲಿನ್ಯ ಅಮೆರಿಕದ ಲಾಸ್ ಎಂಜಿಲೀಸ್‌ಗೆ ಬಂದು ಸೇರುತ್ತಿದೆ ಎಂದು ಹೇಳುವ ಮೂಲಕ ಟ್ರಂಪ್ ನಗೆಪಾಟಲೀಗಿಡಾಗಿದ್ದಾರೆ.
ಭಾರತ, ಚೀನಾ ಮುಖವಾಡ ತೆರೆದಿಟ್ಟು ಬನ್ನಿ ಎಂದ ಟ್ರಂಪ್: ಇತ್ತ ಮೋದಿ, ಅತ್ತ ಕ್ಸಿ ಗರಂ!
ಎಕನಾಮಿಕ್ ಕ್ಲಬ್ ಆಫ್ ನ್ಯೂಯಾರ್ಕ್ ಉದ್ದೇಶಿಸಿ ಮಾತನಾಡಿದ ಟ್ರಂಪ್, 2015 ರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿದಿದ್ದರ ಕುರಿತು ಸಮಜಾಯಿಷಿ ನೀಡುತ್ತಿದ್ದರು.
ಈ ವೇಳೆ ಭಾರತ ಹಾಗೂ ಚೀನಾದ ಬೃಹತ್ ಕೈಗಾರಿಕೆಗಳು ಉಂಟುಮಾಡುವ ಮಾಲಿನ್ಯ ಸಮುದ್ರಕ್ಕೆ ಸೇರಿ, ಅದು ಲಾಸ್ ಎಂಜಿಲೀಸ್‌ನಲ್ಲಿ ಬಂದು ತೇಲುತ್ತದೆ ಎಂದು ಹೇಳುವ ಮೂಲಕ ಸಭಿಕರನ್ನು ಅಚ್ಚರಿಗೆ ದೂಡಿದರು.
ಎಷ್ಟ್ರೀ ಧೈರ್ಯ?: ಪೋರಿಯ ಆರ್ಭಟಕ್ಕೆ ವಿಶ್ವ ನಾಯಕರೆಲ್ಲ ಅಧೈರ್ಯ!
ಹವಾಮಾನ ಬದಲಾವಣೆಯನ್ನು ಬಹಳ ಸಂಕೀರ್ಣ ವಿಷಯ ಎಂದು ಹೇಳಿರುವ ಟ್ರಂಪ್, ತಮ್ಮನ್ನು ಪರಿಸರವಾದಿ ಎಂದು ಕರೆದುಕೊಳ್ಳುವ ಮೂಲಕ ಅಪಹಸ್ಯಕ್ಕೆ ಗುರಿಯಾಗಿದ್ದಾರೆ.
ಪ್ಯಾರಿಸ್ ಹವಾಮಾನ ಒಪ್ಪಂದ ಮಾಲಿನ್ಯ ಉಂಟು ಮಾಡುವ ದೇಶಗಳ ಪರವಾಗಿದ್ದು, ಅಮೆರಿಕವನ್ನು ವಿವಿಧ ರೀತಿಯಲ್ಲಿ ಶೋಷಣೆ ಮಾಡುತ್ತಿದೆ. ಇದೇ ಕಾರಣಕ್ಕೆ ಒಪ್ಪಂದದಿಂದ ಹಿಂದೆ ಸರಿದ್ದಾಗಿ ಟ್ರಂಪ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ