ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್

Published : Dec 12, 2025, 07:41 PM IST
Sanskrit in Pakistan

ಸಾರಾಂಶ

ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್, ಲಾಹೋರ್‌ನಲ್ಲಿ ಸಂಸ್ಕೃತ ಶ್ಲೋಕ, ಪ್ರಮುಖವಾಗಿ ಮಹಾಭಾರತ, ಭಗವವದ್ಗೀತೆ ಶ್ಲೋಕಗಳು ಮೊಳಗಲಿದೆ.ಈ ಮೂಲಕ ಪಾಕಿಸ್ತಾನ ಐತಿಹಾಸಿಕ ಹೆಜ್ಜೆ ಇಟ್ಟಿದೆ.

ಲಾಹೋರ್ (ಡಿ.12) ಭಾರತದಲ್ಲಿ ಸಂಸ್ಕೃತ ವಿಷಯ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಸಂಸ್ಕೃತ ಉಳಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ.  ಕೆಲ ರಾಜಕೀಯ ನಾಯಕರು ಸಂಸ್ಕೃತ ಮೃತ ಭಾಷೆ ಎಂದು ವಿವಾದ ಸೃಷ್ಟಿಸಿದ್ದಾರೆ. ಇದರ ನಡುವೆ ಪಾಕಿಸ್ತಾನದಲ್ಲಿ ಇದೀಗ ಮಹಾಭಾರತ, ಭದವದ್ಗೀತೆಯ ಮೂಲ ಶ್ಲೋಕಗಳು ಮೊಳಗಲಿದೆ. ಹೌದು ಪಾಕಿಸ್ತಾನ ವಿಶ್ವವಿದ್ಯಾಲಯ ಮೂರು ತಿಂಗಳ ಸಂಸ್ಕೃತ ಕೋರ್ಸ್ ಆರಂಭಿಸುತ್ತಿದೆ. ದೇಶ ವಿಭಜನೆಗೊಂಡು ಪಾಕಿಸ್ತಾನ ಸೃಷ್ಟಿಯಾದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಸಂಸ್ಕೃತ ಭಾಷೆ ಬಳಕೆಯಾಗುತ್ತಿದೆ.

LUMS ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್ ಆರಂಭ

ಲಾಹೋರ್ ಯುನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ (LUMS) ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಮೂರು ತಿಂಗಳ ಕೋರ್ಸ್ ಆರಂಭಿಸಲಾಗಿದೆ. ಈ ಕೋರ್ಸ್‌ಗೆ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳಿಂದ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ 2027ರಲ್ಲಿ ಇಡೀ ಶೈಕ್ಷಣಿಕ ವರ್ಷದಲ್ಲಿ ಸಂಸ್ಕೃತ ಬೋಧನೆಗೆ ಪ್ಲಾನ್ ಮಾಡಲಾಗಿದೆ. ಮೂರು ತಿಂಗಳ ಕೋರ್ಸ್ ಇಡೀ ವರ್ಷಕ್ಕೆ ವಿಸ್ತರಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ.

ಏಷ್ಯಾದ ಸಾಂಸ್ಕೃತಿಕ ಹಿರಿಮೆ ಹೇಳುತ್ತದೆ ಸಂಸ್ಕೃತ

LUMS ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಬೋಧನೆ ಮಾಡುತ್ತಿಪುವುದು ಅತ್ಯಂತ ಸಂತಸದ ವಿಟಾರ ಎಂದು ಫಾರ್ಮನ್ ಕಾಲೇಜಿನ ಪ್ರೊಫೆಸರ್ ಶಾಹೀದ್ ರಶೀದ್ ಹೇಳಿದ್ದಾರೆ. ದಕ್ಷಿಣ ಏಷ್ಯಾದ ಸಾಂಸ್ಕೃತಿಕ ಹಿರಿಮೆ, ಸಾಹಿತ್ಯ ಹಾಗೂ ಆಧ್ಯಾತ್ಮಿಕ ಹಿರಿಮೆ ಹೇಳುವ ಸಂಸ್ಕೃತ ಭಾಷೆ ಬೋಧನೆ ಹೊಸ ಹೆಜ್ಜೆಯಾಗಿದೆ ಎಂದಿದ್ದಾರೆ. ನಾವು ಸಂಸ್ಕೃತವನ್ನು ಯಾಕೆ ಕಲಿಯಬಾರದು? ಈ ಭಾಷೆ ದಕ್ಷಿಣ ಏಷ್ಯಾವನ್ನೇ ಕನೆಕ್ಟ್ ಮಾಡಲಿದೆ. ವಿಶೇಷ ಅಂದರೆ ಪಾಕಿಸ್ತಾನದಲ್ಲಿರುವ ಸಿಂಧೂ ಕಣಿವೆಯಲ್ಲೂ ಇದೇ ಸಂಸ್ಕೃತದ ಹಲವು ಕುರುಹುಗಳಿವೆ. ಸಿಂಧೂ ನಾಗರೀಕತೆಯ ಭಾಷೆಯಾಗಿದೆ. ಸಂಸ್ಕೃತ ಒಂದು ಧರ್ಮಕ್ಕೆ ಸೀಮಿತವಾದ ಭಾಷೆಯಲ್ಲಿ ಇಂದು ಪಾಕಿಸ್ತಾನದ ಜೊತೆಗೂ ಬೆಸೆದುಕೊಂಡ ಭಾಷೆಯಾಗಿದೆ ಎಂದು ಶಾಹೀದ್ ರಶೀದ್ ಹೇಳಿದ್ದಾರೆ.

ಸಂಸ್ಕೃತದ ಮಹಾ ವ್ಯಾಕರಣ ಪಂಡಿತ ಪನ್ನಿನ್ ಹುಟ್ಟಿ ಬೆಳೆದಿದ್ದು ಗಾಂಧಾರದಲ್ಲಿ . ಅಂದರೆ ಈಗನ ಆಫ್ಘಾನಿಸ್ತಾನದ ಕಂದಹಾರ್‌ನಲ್ಲಿ. ಆರಂಭದಲ್ಲಿ ಒಂದು ಧರ್ಮದ ಭಾಷೆ ಎಂದು ಕೆಲ ವಿದ್ಯಾರ್ಥಿಗಳು ಹಿಂಜರಿದಿದ್ದರು. ಆಧರೆ ಭಾಷೆ ಕಲಿಯುತ್ತಾ ಹೋಗುತ್ತಿದ್ದಂತೆ ಈ ಭಾಷೆಯ ಹಿರಿಯ, ಆಗಾಧತೆ, ಈ ಭಾಷೆಯಲ್ಲಿರುವ ಸಂಪತ್ತು ಅರಿವಾಗಿದೆ. ಇದೀಗ ಹೆಚ್ಚಿನ ವಿದ್ಯಾರ್ಥಿಗಳು LUMS ವಿಶ್ವವಿದ್ಯಾಲದಲ್ಲಿ ಸಂಸ್ಕೃತ ಕಲಿಯಲು ಆಸಕ್ತಿ ತೋರುತ್ತಿದ್ದಾರೆ ಎಂದು ಶಾಹೀದ್ ರಶೀದ್ ಹೇಳಿದ್ದಾರೆ. ಉರ್ದು ಭಾಷೆ ಸಂಸ್ಕೃತದಿಂದ ಪ್ರೇರೇಪಿತ ಭಾಷೆಯಾಗಿದೆ. ಆದರೆ ಹಿಂದಿಗಿಂತ ಭಿನ್ನವಾಗಿದೆ ಎಂದಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ