ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!

Kannadaprabha News   | Kannada Prabha
Published : Dec 12, 2025, 05:03 AM IST
Time

ಸಾರಾಂಶ

ಪ್ರತಿ ವರ್ಷ ಅತಿ ಪ್ರಭಾವಿ ಅಥವಾ ಮಹತ್ತರವಾದ ಸಾಧನೆಗೈದ ವ್ಯಕ್ತಿಗಳನ್ನು ಪರ್ಸನ್‌ ಆಫ್‌ ಇಯರ್‌ ಎಂದು ಗುರುತಿಸುವ ಅಮೆರಿಕದ ಟೈಮ್‌ ಮ್ಯಾಗಜಿನ್‌, 2025ಕ್ಕೆ ಈ ಗೌರವವನ್ನು ಎಐ ಸೃಷ್ಟಿಕರ್ತರಿಗೆ ಕೊಡಲು ನಿರ್ಧರಿಸಿರುವುದಾಗಿ ಘೋಷಿಸಿದೆ.

ನ್ಯೂಯಾರ್ಕ್‌: ಪ್ರತಿ ವರ್ಷ ಅತಿ ಪ್ರಭಾವಿ ಅಥವಾ ಮಹತ್ತರವಾದ ಸಾಧನೆಗೈದ ವ್ಯಕ್ತಿಗಳನ್ನು ಪರ್ಸನ್‌ ಆಫ್‌ ಇಯರ್‌ ಎಂದು ಗುರುತಿಸುವ ಅಮೆರಿಕದ ಟೈಮ್‌ ಮ್ಯಾಗಜಿನ್‌, 2025ಕ್ಕೆ ಈ ಗೌರವವನ್ನು ಎಐ ಸೃಷ್ಟಿಕರ್ತರಿಗೆ ಕೊಡಲು ನಿರ್ಧರಿಸಿರುವುದಾಗಿ ಘೋಷಿಸಿದೆ.

ಯೋಚಿಸುವ ಯಂತ್ರಗಳ ಯುಗ

ಎಐ ಎಲ್ಲೆಲ್ಲೂ ಆವರಿಸಿಕೊಂಡಿರುವ ಹೊತ್ತಿನಲ್ಲಿ, ‘ಯೋಚಿಸುವ ಯಂತ್ರಗಳ ಯುಗವನ್ನು ತೆರೆದಿಟ್ಟದ್ದಕ್ಕಾಗಿ, ಮಾನವೀಯತೆಗಾಗಿ ಚಿಂತಿಸಿದ್ದಕ್ಕೆ, ಬೆರಗುಗೊಳಿಸಿದ್ದಕ್ಕಾಗಿ, ವರ್ತಮಾನವನ್ನು ಪರಿವರ್ತಿಸಿದ್ದಕ್ಕಾಗಿ ಮತ್ತು ಸಾಧ್ಯತೆಗಳನ್ನು ಮೀರಿದ್ದ ಸಾಧನೆಗಾಗಿ ಎಐನ ಸೃಷ್ಟಿಕರ್ತರನ್ನು ಟೈಮ್‌ನ 2025ರ ವರ್ಷದ ವ್ಯಕ್ತಿಯಾಗಲಿದ್ದಾರೆ’ ಎಂದು ಘೋಷಿಸಿದೆ.

ವಿನ್ಯಾಸಗೊಳಿಸಿದ, ನಿರ್ಮಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸಲಾಗಿದೆ

ಎಐ ಅನ್ನು ಗುರುತಿಸುವ ಬದಲು, ಅದನ್ನು ಕಲ್ಪಿಸಿಕೊಂಡ, ವಿನ್ಯಾಸಗೊಳಿಸಿದ, ನಿರ್ಮಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸಲಾಗಿದೆ. ಪಟ್ಟಿಯಲ್ಲಿ ಎಕ್ಸ್‌ ಎಐನ ಎಲಾನ್‌ ಮಸ್ಕ್‌, ಓಪನ್‌ ಎಐನ ಸ್ಯಾಮ್‌ ಆಲ್ಟ್‌ಮನ್‌, ಎನ್‌ವಿಡಿಯಾದ ಜೆನ್ಸನ್ ಹುವಾಂಗ್, ಒರಾಕಲ್‌ನ ಲ್ಯಾರಿ ಎಲಿಸನ್ ಇದ್ದಾರೆ. 2024ರಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಗುರುತಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರೋಪ ಸಾಬೀತು : ಪಾಕ್‌ ಐಎಸ್‌ಐ ಮಾಜಿ ಮುಖ್ಯಸ್ಥ ಹಮೀದ್‌ಗೆ 14 ವರ್ಷ ಜೈಲು
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ